Advertisement

ಕೂಡಲೇ ಯುದ್ಧ ನಿಲ್ಲಿಸಿ ಜೀವಿ ಸಂಕುಲ ಉಳಿಸುವಂತೆ ಧರಣಿ ಸತ್ಯಗ್ರಹ

02:34 PM Mar 09, 2022 | Team Udayavani |

ಗಂಗಾವತಿ: ಮಾನವ ಸೇರಿ ಸಕಲ  ಜೀವಿಸಂಕುಲಕ್ಕೆ ಕಂಟಕವಾಗಿರುವ ಯುದ್ಧವನ್ನು ಕೂಡಲೇ ನಿಲ್ಲಿಸುವಂತೆ ಗಂಗಾವತಿಯಲ್ಲಿ ಪ್ರೀತಿಯ ಮನಸ್ಸುಗಳಿಂದ ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ.

Advertisement

ಧರಣಿಯಲ್ಲಿ ಪಾಲ್ಗೊಂಡ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಮಾತನಾಡಿ, ಕಾರಣವಿಲ್ಲದೇ ರಷ್ಯಾ ದೇಶ ಉಕ್ರೇನ್ ದೇಶದ ಮೇಲೆ ಯುದ್ಧ ಸಾರಿರುವುದು ದೊಡ್ಡ ತಪ್ಪು ಉಕ್ರೇನ್ ದೇಶದಲ್ಲಿ ಪ್ರಾಣ ಆಸ್ತಿ ಹಾನಿಯುಂಟಾಗಿದ್ದು ನೂರಾರು ಮಕ್ಕಳು ಅನಾಥರಾಗಿದ್ದಾರೆ. ಊಟ ಕುಡಿಯುವ ನೀರು ಸೇರಿ ಅಗತ್ಯ ವಸ್ತುಗಳಿಗೆ ಉಕ್ರೇನ್ ದೇಶದಲ್ಲಿ ನಾಗರೀಕರು ಪರಿತಪಿಸುವಂತಾಗಿದೆ. ಕೂಡಲೇ ವಿಶ್ವ ಸಂಸ್ಥೆ ಹಾಗೂ ವಿಶ್ವದ ಎಲ್ಲಾ ದೇಶಗಳು ರಷ್ಯಾ ವಿರುದ್ಧ ಒಂದಾಗಿ ಯುದ್ಧ ತಡೆಯುವ ಕಾರ್ಯ ಮಾಡಬೇಕು. ಈಗಾಗಲೇ ವೈದ್ಯಕೀಯ ಸೇರಿ ಹಲವು ಕೋರ್ಸ್ ಗಳನ್ನು ವಿದ್ಯಾಭ್ಯಾಸ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಕೇಂದ್ರ ಸರಕಾರ ಸುರಕ್ಷಿತವಾಗಿ ಕರೆ ತಂದಿದ್ದು ಉಳಿದವರನ್ನು ಕರೆ ತರುವ ಯತ್ನ ಮಾಡಬೇಕಿದೆ. ಯುದ್ಧ ಜೀವ ಸಂಕುಲವನ್ನು ಕಾಡುವ ಮಾರಕ ರೋಗದಂತಾಗಿದೆ. ಜಪಾನ್ ದೇಶ ಇನ್ನೂ ಅಣುಬಾಂಬ್ ಹೊಡೆತವನ್ನು ಸುಧಾರಿಸಿಕೊಳ್ಳಲು ಆಗುತ್ತಿಲ್ಲ. ಧರಣಿ ಮೂಲಕ ರಷ್ಯಾ ದೇಶ ಹಾಗೂ ಯುದ್ಧ ಬಯಕೆಯ ದೇಶಗಳಿಗೆ ಉತ್ತಮ ಸಂದೇಶ ಕಳಿಸುವ ಯತ್ನ ನಡೆಸಿರುವುದು ಶ್ಲಾಘನೀಯವಾಗಿದೆ ಎಂದರು.

ಧರಣಿ ಸತ್ಯಾಗ್ರಹದಲ್ಲಿ ಜೋಗದ ನಾರಾಯಣಪ್ಪ, ಶ್ರೀಶೈಲಾ ಪಟ್ಟಣಶೆಟ್ಟಿ, ಫಕೃದ್ದೀನ್ ಇಟಗಿ, ಟಿ.ಆಂಜನೇಯ, ಕೆ.ಬಸವರಾಜ, ಉಸ್ಮಾನ್, ಆಯೂಬ್ ಖಾನ್, ಕೆ.ಚನ್ನಬಸಯ್ಯಸ್ವಾಮಿ, ನಿಜಲಿಂಗಪ್ಪ ಮೆಣಸಗಿ, ಡಾ|ಭಾವಿಕಟ್ಟಿ, ಶ್ರವಣಕುಮಾರ ರಾಯಕರ್, ಪ್ರೋ. ಅಬ್ದುಲ್ ರಹೆಮಾನ್ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next