Advertisement

ಕರ್ನಾಟಕ ಜನಸೈನ್ಯ ಸಂಘಟನೆ ಪ್ರತಿಭಟನೆ

05:50 PM Dec 25, 2020 | Suhan S |

ಬಳ್ಳಾರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಜನಸೈನ್ಯ ಸಂಘಟನೆಯಿಂದ ನಗರದಲ್ಲಿ ಗುರುವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ನಗರೂರು ನಾರಾಯಣರಾವ್‌ ಉದ್ಯಾನವನದಿಂದ ಮಹಾನಗರ ಪಾಲಿಕೆಕಚೇರಿವರೆಗೆ ಮೆರವಣಿಗೆ ನಡೆಸಿದಪ್ರತಿಭಟನಾಕಾರರು ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಎರ್ರಿಸ್ವಾಮಿ,ನಗರದ ವಿವಿಧೆಡೆಗಳಲ್ಲಿ ರಾಜಕಾಲುವೆಗಳ ಸ್ವಚ್ಛತೆ ಇಲ್ಲದಿರುವುದರಿಂದ ಆಯಾ ಭಾಗಗಳ ಜನರು ಹಲವಾರು ರೋಗಗಳಿಗೆ ತುತ್ತಾಗಿ ಆಸ್ಪತ್ರೆ ಪಾಲಾಗುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಪ್ರಾಣ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕೂಡಾಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಅವರು ಆಗ್ರಹಿಸಿದರು.

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಬಹುತೇಕ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ಇರುವುದರಿಂದ ಹಳ್ಳಿ ಭಾಗಗಳಿಂದ ಬರುವ ಸಾರ್ವಜನಿಕರಿಗೆ ಶೌಚಾಲಯಗಳ ಕೊರತೆ ಎದ್ದು ಕಾಣಿಸುತ್ತಿದೆ. ಅದರಲ್ಲೂ ಪ್ರತ್ಯೇಕವಾಗಿ ಮಹಿಳೆಯರಿಗೆ ಮೂತ್ರ ವಿಸರ್ಜನೆ ಮಾಡಲು ತುಂಬಾ ಕಷ್ಟಕರವಾಗಿರುತ್ತದೆ. ರಾಜ್ಯ ಸರ್ಕಾರ ಆದೇಶದ ಪ್ರಕಾರ ಆಡಳಿತ ಭಾಷೆ ಯಾವುದೇ ಜಾಹೀರಾತು ಮತ್ತು ವ್ಯಾಪಾರ ವಹಿವಾಟುಗಳಲ್ಲಿ ಕನ್ನಡ ಅಕ್ಷರಗಳು ಶೇ.80 ರಷ್ಟು ದಪ್ಪ ಅಕ್ಷರಗಳಲ್ಲಿರುವಂತೆ ಆದೇಶಿಸಲಾಗಿತ್ತು. ಆದರೆ ಆಂಧ್ರದ ಗಡಿಭಾಗ ಬಳ್ಳಾರಿಯಲ್ಲಿ ಯಾವುದೇಜಾಹೀರಾತು ನಾಮಫಲಕಗಳಾಗಲೀ ಅಥವಾವ್ಯಾಪಾರ ವಹಿವಾಟುಗಳ ನಾಮಫಲಕಗಳಲ್ಲಿ ಆಂಗ್ಲಭಾಷೆಯೇ ರಾರಾಜಿಸುತ್ತಿರುವುದು ಕಂಡುಬರುತ್ತಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದಿರುವುದೇ ದುರ್ದೈವದ ಸಂಗತಿಯಾಗಿದೆ. ಒಂದ ವೇಳೆ ಇದನ್ನು ಹೀಗೆ ಬಿಟ್ಟಲ್ಲಿ ಮುಂದಿನ ದಿನಗಳಲ್ಲಿಕರ್ನಾಟಕ ಜನಸೈನ್ಯ ಸಂಘಟನೆ ವತಿಯಿಂದಹೋರಾಟ ಹಮ್ಮಿಕೊಂಡು ಜಾಹೀರಾತುಮತ್ತು ವ್ಯಾಪಾರ ವಹಿವಾಟುಗಳ ಆಂಗ್ಲಭಾಷೆ ನಾಮಫಲಕಗಳಿಗೆ ಕಪ್ಪು ಬಣ್ಣ ಹಚ್ಚುವಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಬಳ್ಳಾರಿ ನಗರದ ಪ್ರದೇಶದ ನಾನಾಭಾಗಗಳಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು,ಸ್ಥಳೀಯರಿಗೆ ಸಾಂಕ್ರಾಮಿಕ ರೋಗಗಳಾದಮಲೇರಿಯಾ, ಚಿಕುನ್‌ಗುನ್ಯಾ, ಡೆಂಘೀಮುಂತಾದ ರೋಗಗಳು ಹರಡುತ್ತಿವೆ. ಈಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಬೀದಿ ನಾಯಿಗಳ ಹಾವಳಿ ಸಹಹೆಚ್ಚಾಗಿದ್ದು, ದ್ವಿಚಕ್ರ ವಾಹನ ಸಂಚಾರಿಗಳಿಗೆ,ಪಾದಚಾರಿಗಳಿಗೆ ಮತ್ತು ವಿಶೇಷವಾಗಿ ಬೀದಿಗಳಲ್ಲಿ ಆಟವಾಡುವ ಚಿಕ್ಕಮಕ್ಕಳಿಗೆತುಂಬಾ ತೊಂದರೆಯಾಗುತ್ತಿದೆ. ಇವುಗಳನ್ನುತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಎಲ್ಲಾ ನ್ಯಾಯಯುತ ಬೇಡಿಕೆಗಳನ್ನು ಒಂದು ತಿಂಗಳೊಳಗೆ ಈಡೇರಿಸಬೇಕು ಎಂದವರು ಒತ್ತಾಯಿಸಿದರು.

Advertisement

ಬಳಿಕ ಪಾಲಿಕೆ ಅಧಿಕಾರಿಗೆಮನವಿ ಸಲ್ಲಿಸಲಾಯಿತು. ಈ ವೇಳೆ ಜನಸೈನ್ಯ ಸಂಘಟನೆ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next