ಆಲೂರು: ಆಲೂರು ಪಟ್ಟಣದಲ್ಲಿರುವ 3 ಶುದ್ದ ನೀರಿನ ಘಟಕಗಳು ಕಳೆದ ಹದಿನೈದು ದಿನಗಳ ಹಿಂದೆ ಕೆಟ್ಟು ಹೋಗಿದ್ದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ದುರಸ್ತಿ ಪಡಿಸದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದರು.
ಆಲೂರು ಪಟ್ಟಣದ ಕೋನೆ ಪೇಟೆಯ ಮಸೀದಿ ಬಳಿಯಿರುವ ಶುದ್ದ ನೀರಿನ ಘಟಕ,ಆಸ್ಪತ್ರೆ ಮುಂಭಾಗವಿರುವ ಶುದ್ಧ ನೀರಿನ ಘಟಕ,ಹಾಗೂ ಪಾರ್ಕ್‌ನಲ್ಲಿರುವ ಶ್ರೀ ಧರ್ಮಸ್ಥಳ ಸಂಘದ ಶುದ್ದ ನೀರಿನ ಘಟಕಗಳು ಕೆಟ್ಟು ಹೋಗಿ 15 ದಿನಗಳೇ ಕಳೆದಿವೆ ಪಟ್ಟಣದ ಜನರು ಕ್ಯಾನ್ ಗಳನ್ನು ಹಿಡಿದು ನೀರಿಗಾಗಿ ಸುತ್ತುತ್ತಿದ್ದಾರೆ ಅದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಸಂಬಂದವೇ ಇಲ್ಲವೆಂದು ಕಣ್ಣು ಮುಚ್ಚಿ ಕುಳಿತಿದ್ದಾರೆ ಇವರ ವರ್ತನೆ ಇದೇ ರೀತಿ ಮಂದುವರಿದರೇ ಪಟ್ಟಣ ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಸಾರ್ವಜನಿಕ ಎಚ್ಚರಿಸುತ್ತಿದ್ದಾರೆ.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಬಿ.ಧರ್ಮರಾಜ್ ಮಾತನಾಡಿ ಪಟ್ಟಣದಲ್ಲಿರುವ ಮೂರು ಶುದ್ಧ ನೀರಿನ ಘಟಕಗಳು ಕೆಟ್ಟು ಹೋಗಿ ಹದಿನೈದು ದಿನಗಳು ಕಳೆದಿವೆ ಆಲೂರು ಪಟ್ಟಣದ ಉದ್ಯಾನವನದಲ್ಲಿರುವ ಶ್ರೀ ಧರ್ಮಸ್ಥಳ ಸಂಘದ ಶುದ್ಧ ನೀರಿನ ಘಟಕಕ್ಕೆ ವಿದ್ಯುತ್ ನಿಲ್ಲಿಸಲಾಗಿದೆ ಇದರಿಂದ ಪಟ್ಟಣದ ಜನರು ನೀರಿಗಾಗಿ ಅಲೆಯುವಂತಾಗಿದೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿದ್ದೆ ಹೊಡೆಯುವುದು ಬಿಟ್ಟು ಎರಡ್ಮೂರು ದಿವಸದೊಳಗೆ ದುರಸ್ತಿ ಪಡಿಸಿ ಶುದ್ಧ ಕುಡಿಯುವ ನೀರು ಒದಗಿಸಬೇಕು ಇಲ್ಲದಿದ್ದರೆ ಪಟ್ಟಣ ಪಂಚಾಯಿತಿ ಕಛೇರಿ ಮುಂದೆ ಪ್ರತಿಭಟನೆ ನೆಡಸಲಾಗಿವುದು ಎಂದು ಎಚ್ಚರಿಸಿದರು.
ಬಿಜೆಪಿ ಹಿರಿಯ ಮುಖಂಡ ಸಂದೇಶ್ ಮಾತನಾಡಿ ಶುದ್ಧ ನೀರಿನ ಘಟಕ ವರ್ಷಕ್ಕೆ ಮೂರ್ನಾಲ್ಕು ಬಾರಿ ಕೆಟ್ಟು ಹೋಗುತ್ತಿವೆ ಕೆಟ್ಟು ಹೋದ ಸಂದರ್ಭದಲ್ಲಿ ತಿಂಗಳಾದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಇತ್ತ ತಿರುಗಿ ನೋಡುವುದಿಲ್ಲಾ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದು ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಸ್ಥಳಿಯ ಶಾಸಕರು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ ಆಲೂರು ತಾಲ್ಲೂಕಿನ ಬಗ್ಗೆ ತಾತ್ಸಾರ ಹೊಂದಿದ್ದು ಇವರ ಮಾತನ್ನು ಅಧಿಕಾರಿಗಳು ಕೇಳದಂತಹ ಪರಿಸ್ಥಿತಿಯಲ್ಲಿದ್ದಾರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಎರಡ್ಮೂರು ದಿವಸದೊಳಗೆ ರಿಪೇರಿ ಮಾಡಿಸದಿದ್ದರೆ ಕಪಟ್ಟಣ ಪಂಚಾಯಿತಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು.
ಸ್ಥಳಿಯ ಮುಖಂಡ ಹೊಸಹಳ್ಳಿ ಧರ್ಮಪ್ಪ ಮಾತನಾಡಿ ಶುದ್ಧ ನೀರಿನ ಘಟಕ ಕೆಟ್ಟು ಹೋಗಿ ಹದಿನೈದು ದಿನಗಳು ಕಳೆದಿವೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಗಮನಕ್ಕೆ ತರಲಾಗಿದೆ ಅದರೂ ಸರಿಪಡಿಸಿಲ್ಲ ಪಟ್ಟಣದ ಜನತೆ ನೀರಿನ ಡಬ್ಬಗಳನ್ನು ಹಿಡಿದು ನೀರಿಗಾಗಿ ಅಲೆಯುತ್ತಿದ್ದಾರೆ ಎರಡ್ಮೂರು ದಿನಗಳಲ್ಲಿ ದುರಸ್ತಿ ಪಡಿಸಿ ಶುದ್ದ ನೀರು ಕೊಡದಿದ್ದರೆ ನಾವು ಪಟ್ಟಣ ಪಂಚಾಯಿತಿ ಮುಂದೆ ಕಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಸವರಾಜ್ ಸಿಗ್ಗಾಂವಿ ಅವರು ಮಾದ್ಯಮ ಪ್ರತಿನಿದಿಗಳೊಂದಿಗೆ ಮಾತನಾಡಿ ನೀರೆತ್ತುವ ಪಂಪ್ ಆಗಿಂದಾಗ್ಗೆ ಸುಟ್ಟು ಹೋಗುತ್ತಿದೆ ರಿಪೇರಿ ಮಾಡಿಸಿದರು ಪ್ರಯೋಜನವಾಗಿಲ್ಲ ಕೆಲವೊಂದು ಕಡೆ ಪೈಪ್ ಹೊಡೆದು ಹೋಗಿದೆ ಅವುಗಳನ್ನು ಸರಿಪಡಿಸಿ ಹೊಸ ನೀರಿನ ಪಂಪ್ ಅಳವಡಿಸಿ ಅದಷ್ಟು ಬೇಗ ಜನರಿಗೆ ಶುದ್ಧ ನೀರನ್ನ ಒದಗಿಸಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಹೆಚ್.ಬಿ.ಧರ್ಮರಾಜ್,ಸಂದೇಶ್,ಮರಸು ಹೊಸಹಳ್ಳಿ ಧರ್ಮಪ್ಪ,ಪ್ರದೀಪ್,ನಂಧಾ,ಅಶ್ರಫ್,ತೇಜಾ ಹಾಗೂ ಇತರರು ಉಪಸ್ಥಿತರಿದ್ದರು.