Advertisement

ಬೆಳಗಾವಿಯಲ್ಲಿ ಎಂಇಎಸ್‌ ಪುಂಡಾಟಿಕೆ; ಆಕ್ರೋಶ

01:55 PM Dec 19, 2021 | Team Udayavani |

ಕೋಲಾರ: ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಬೆಳಗಾವಿ ನಗರದಲ್ಲಿ ಶಿವಸೇನೆ, ಎಂಇಎಸ್‌ ಸಂಘಟನೆ ಮರಾಠಿ ಮಹಾಮೇಳ ನಡೆಸಲು ಸರ್ಕಾರ ಅನುಮತಿ ನೀಡಲಿಲ್ಲ ಎಂಬ ಕಾರಣಕ್ಕೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಬಾವುಟ ಸುಟ್ಟು ಅವಮಾನಿಸಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಿನ್ನ ಮಾಡಿರುವುದನ್ನು ಖಂಡಿಸಿ ನಗರದಗಾಂಧಿಚೌಕದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಭವ್‌ ಠಾಕ್ರೆ ಭೂತದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿತು.

Advertisement

ಕನ್ನಡ ಪಕ್ಷ ಹಾಗೂ ಕೋಲಾರ ಜಿಲ್ಲಾ ಡಾ.ರಾಜಕುಮಾರ್‌ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಕೋ.ನ.ಪ್ರಭಾಕರ್‌ ಮಾತನಾಡಿ,ಬೆಳಗಾವಿಯಲ್ಲಿ ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಕರ್ನಾಟಕದ ರಾಜಕೀಯ ಪಕ್ಷಗಳು ಮತ,ರಾಜಕೀಯ ಲಾಭಕ್ಕಾಗಿ ಬೆಳಗಾವಿಯಲ್ಲಿಮರಾಠಿಗರನ್ನು ಬೆಳೆಸುತ್ತಿದ್ದಾರೆ. ಇವರಿಗೆ ರಾಜ್ಯದರಕ್ಷಣೆ ಬೇಕಿಲ್ಲ ಎಂದು ಆರೋಪಿಸಿದರು.

ಸದ್ಯ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದು, ವಿಧಾನಸಭೆ ಮತ್ತು ಪರಿಷತ್‌ನಲ್ಲಿಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಬಾವುಟಸುಟ್ಟು ಹಾಕಿರುವ ಬಗ್ಗೆ ಮಾತನಾಡಲು ಯಾರೂ ಇಲ್ಲ ಎಂದು ಕಿಡಿಕಾರಿದರು.

ಗಡಿಪಾರು ಮಾಡಿ: ಕರವೇ ಪ್ರವೀಣ್‌ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್‌ ಮಾತನಾಡಿ,ಎಂಇಎಸ್‌ ಸಂಘಟನೆಯನ್ನು ಕರ್ನಾಟಕದಿಂದಬಹಿಷ್ಕರಿಸಬೇಕು. ಕನ್ನಡ ಬಾವುಟ ಸುಟ್ಟು ಹಾಕಿದಎಂಇಎಸ್‌ ಪುಂಡರನ್ನು ಬಂಧಿಸಿ ಗಡಿಪಾರು ಮಾಡುವಂತೆ ಹಾಗೂ ಕ್ರಾಂತಿವೀರ ಸಂಗೊಳ್ಳಿರಾಯಣ್ಣನ ಪ್ರತಿಮೆ ಭಗ್ನಗೊಳಿಸಿರುವ ಎಂಇಎಸ್‌ ಪುಂಡರನ್ನು ಬಂಧಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕನ್ನಡಪರ ಹೋರಾಟಗಾರರಾದ ಸೋಮಶೇಖರ್‌, ಕಲಾವಿದ ವಿಷ್ಣು, ಜಯದೇವ ಪ್ರಸನ್ನ, ಚಂಬೆ ರಾಜೇಶ್‌, ಕೆ.ಆರ್‌. ತ್ಯಾಗರಾಜ್‌,ನಾ.ಮಂಜುನಾಥ್‌, ಸುನೀಲ್‌ರಾಜ್‌, ದಿಂಬನಾಗರಾಜ್‌, ಮುನಿಸ್ವಾಮಿ, ಆಂಜನೇಗೌಡ,ಶ್ರೀನಿವಾಸ್‌, ಕೆ.ಆರ್‌.ಧನರಾಜ್‌, ನರಸಾಪುರಶಿವಚಂದ್ರಯ್ಯ, ಶ್ರೀಧರ್‌, ಸುಧೀರ್‌, ಬಂಗಾರಪೇಟೆಸರಸ್ವತಮ್ಮ, ಮುನಿಕೃಷ್ಣಪ್ಪ, ಅಸ್ಲಂಪಾಷಾ, ಜಗದೀಶ್‌, ಬಾಲಾಜಿಸಿಂಗ್‌, ಬಾಬಿ, ರೋಟರಿ ಸುಧಾಕರ್‌, ಕನ್ನಡಪರ ಹೋರಾಟಗಾರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next