ಚಿಕ್ಕನಾಯಕನಹಳ್ಳಿ : ಹಲವಾರು ತಿಂಗಳಿಂದ ತಾಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ನೀರಿಗಾರಿ ಹಾಹಾಕಾರ ಹೆಚ್ಚಾಗಿದ್ದು, ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಮಸ್ಯೆಯ ಬಗ್ಗೆ ಅನೇಕ ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲಎಂದು ಗ್ರಾಮ ಪಂಚಾಯಿತಿಗೆ ಕಚೇರಿಗೆ ಬೀಗ ಹಾಕಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಹೊನ್ನೆಬಾಗಿ ಗ್ರಾಮದಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಹನಿ ನೀರಿಗು ಪರದಾಡುವ ಸ್ಥಿತಿ ಎದುರಾಗಿದೆ. ಈ ಗ್ರಾಮದಲ್ಲಿ ಸುಮಾರು 100 ಮನೆಗಳಿದ್ದು, 350 ಜನ ವಾಸಮಾಡುತ್ತಿದ್ದಾರೆ. ಈ ಗ್ರಾಮದಲ್ಲಿ ಬಹುತೇಕರು ಕೃಷಿಚಟುವಟಿಕೆ ನಡೆಸುತ್ತಿದ್ದು. ಜಾನುವಾರುಗಳನ್ನು ಸಾಕಿಕೊಂಡಿ ದ್ದಾರೆ. ನೀರಿನ ಹಾಹಾಕಾರ ಮುಗಿಲುಮುಟ್ಟಿದ್ದು , ಸಾರ್ವಜನಿಕರಿಗೆ ಕುಡಿಯಲು ಸಹನೀರು ಸಿಗದಂತಾಗಿದೆ. ಇದರಿಂದ ಸಿಟ್ಟಿಗೆದ್ದ ಊರಿನಯುವಕರು ಹಾಗೂ ಗ್ರಾಮಸ್ಥರು ಸೋಮವಾರ ಹೊನ್ನೆಬಾಗಿ ಗ್ರಾಪಂಗೆ ದಿಢೀರ್ ಭೇಟಿ ನೀಡಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಅದೇಶವಾದರು ಬೋರ್‌ವೆಲ್ ಹಾಕಿಸಿಲ್ಲ: ನೀರಿನ ಸಮಸ್ಯೆ ಬಗೆಹರಿಸಲು ಹೊನ್ನೆಬಾಗಿಗ್ರಾಮಕ್ಕೆ ಕೊಳವೆಬಾವಿ ಹಾಕಿಸಲು ತಾಪಂ ಇಒಆದೇಶ ನೀಡಿ ಒಂದು ತಿಂಗಳು ಕಳೆದರೂ ಗ್ರಾಪಂಪಿಡಿಒ ಕೊಳವೆ ಬಾವಿ ಹಾಕಿಸದಿರುವುದರಿಂದಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಹನಿ ನೀರಿಗಾಗಿ ಪ್ರತಿದಿನ ಸಮಸ್ಯೆ ಅನುಭವಿಸುತ್ತಿರುವ ಗ್ರಾಮಸ್ಥರ ಕಷ್ಟ ಅವರಿಗೆ ತಿಳಿದಿದೆ. ಆದರೆ,ಕೊಳವೆಬಾವಿ ತೆಗೆಸಲು ಆ್ಯಕ್ಷನ್‌ಪ್ಲಾನ್ ಆಗಿದ್ದರೂಪಿಡಿಒ ತೇಜಸ್ವಿಯವರು ಯಾಕೆ ಉದಾಸಿನ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊನ್ನೆಬಾಗಿ ಗ್ರಾಮದಲ್ಲಿ ನೀರಿನ ಸಮಸ್ಯೆ ತಿಳಿದ ಮೇಲೆ ಹೊಸದಾಗಿಕೊಳವೆ ಬಾವಿ ಹಾಕಿಸಲು ಹಲವು ದಿನಗಳಹಿಂದೆ ಪಿಡಿಒಗೆ ಆದೇಶ ನೀಡಲಾಗಿದೆ.ಭೂವಿಜ್ಞಾನಿ ಕೊಳವೆಬಾವಿ ತೆಗೆಸಲುಪಾಯಿಂಟ್ ಮಾಡಿಲ್ಲ ಎಂಬ ಉತ್ತರ ಬಂದಿದ್ದು, ಕೂಡಲೇ ಹೊಸ ಕೊಳವೆ ಬಾವಿ ತೆಗೆಸಲಾಗುತ್ತದೆ.
– ಅತೀಕ್ ಪಾಷ, ತಾಪಂ ಇಒ
ಹೊನ್ನೆಬಾಗಿ ಗ್ರಾಮದಲ್ಲಿ ಹಲವು ತಿಂಗಳಿಂದ ಕುಡಿವ ನೀರಿಗಾಗಿ ತತ್ವಾರಉಂಟಾಗಿದ್ದು ಜನ, ಜಾನುವಾರುಗಳು ಪರಿತಪಿಸುವಂತಾಗಿದೆ. ಜನಪ್ರತಿನಿಧಿಗಳು,ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಸರ್ಕಾರದಿಂದ ಕೊಳವೆ ಬಾವಿ ಕೊರೆಸಲುಆದೇಶವಿದ್ದರೂ ಅಧಿಕಾರಿಗಳ ವಿಳಂಬ ದೊರಣೆ ಜನರನ್ನು ಕಷ್ಟಕ್ಕೆ ದೂಡಿದೆ.
– ಮಂಜುನಾಥ್, ಗ್ರಾಮಸ್ಥ