Advertisement

ರಾಷ್ಟ್ರಪತಿ ಆಡಳಿತ ಜಾರಿಗೆ ಒತ್ತಾಯ

06:51 PM Oct 09, 2020 | Suhan S |

ರಾಯಚೂರು: ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಕೂಡಲೇ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಪಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆ ಸದಸ್ಯರು ಒತ್ತಾಯಿಸಿದರು. ಈ ಕುರಿತು ಡಿಸಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

Advertisement

ಯುವತಿ ಅತ್ಯಾಚಾರ, ಕೊಲೆ ಪ್ರಕರಣ ಸಮರ್ಪಕವಾಗಿ ಭೇದಿಸುವಲ್ಲಿ ಅಲ್ಲಿನಸರ್ಕಾರ ಸಂಪೂರ್ಣ ವಿಫಲವಾಗಿದೆ. ತನಿಖೆಯ ಗಮನ ಬೇರೆಡೆ ಸೆಳೆಯಲು ಪಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾ ಕಾರ್ಯಕರ್ತರನ್ನು ಘಟನೆಯಲ್ಲಿ ಎಳೆದು ತರಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತರು ಮಾತ್ರವಲ್ಲದೇ ದಲಿತರು, ಮಹಿಳೆ ಯರಿಗೂ ಸುರಕ್ಷತೆ ಇಲ್ಲದಾಗಿದೆ ಎಂದುದೂರಿದರು.

ಘಟನೆ ಕುರಿತು ಜನಾಂಗೀಯ ಮತ್ತು ಕೋಮು ಹಿಂಸಾಚಾರಕ್ಕೆ ಪ್ರಚೋದಿಸಲಾಗುತ್ತಿದೆ. ಪಾಪುಲರ್‌ಫ್ರಂಟ್‌ ಸಂಘಟನೆ ಮುಖಂಡರನ್ನುಸಂತ್ರಸ್ತ ಕುಟುಂಬಕ್ಕೆ ಭೇಟಿ ನೀಡಲುಅವಕಾಶ ನೀಡದೆ ನಾಲ್ವರನ್ನು ಬಂಧಿಸಲಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಹತ್ತಿಕ್ಕುವ ಮಾರ್ಗವಾಗಿದೆ ಎಂದು ದೂರಿದರು.

ಸಂಘಟನೆ ಜಿಲ್ಲಾಧ್ಯಕ್ಷ ಮಹ್ಮದ್‌ ಇಸ್ಮಾಯಿಲ್‌, ಸದಸ್ಯರಾದ ಅಸೀಮ್‌ ಖಾದ್ರಿ, ಗಫರ್‌, ಮಹೆಬೂಬ್‌ ಇತರರಿದ್ದರು.

ಕಲ್ಯಾಣ ಕರ್ನಾಟಕ ಹಿತರಕ್ಷಣಾ ಸೇನೆ ಪ್ರತಿಭಟನೆ: ಉತ್ತರ ಪ್ರದೇಶದ ಹತ್ರಾಸ್‌ ನಲ್ಲಿ ಯುವತಿ ಮೇಲೆ ಅತ್ಯಾಚಾರವೆಸಗಿಕೊಲೆಗೈದ ಆರೋಪಿಗಳನ್ನು ಗಲ್ಲಿಗೇರಿಸಲು ಆಗ್ರಹಿಸಿ ಕಲ್ಯಾಣ ಕರ್ನಾಟಕ ಹಿತರಕ್ಷಣಾ ಸೇನೆ ಸದಸ್ಯರುಡಿಸಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೇಟಿ ಬಚಾವೋ, ಬೇಟಿ ಪಡಾವೊ ಎನ್ನುತ್ತಾರೆ. ಮತ್ತೂಂದೆಡೆ ಬಿಜೆಪಿನೇತೃತ್ವದ ಸರ್ಕಾರ ಅಧಿಕಾರದಲ್ಲಿರುವ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದೆ. ದುಷ್ಕರ್ಮಿಗಳನ್ನು ಗಲ್ಲುಶಿಕ್ಷೆಗೆ ಗುರಿಪಡಿಸಬೇಕು. ಯುವತಿ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಬೇಕು. ಒಂದು ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

Advertisement

ಸಂಘಟನೆ ಅಧ್ಯಕ್ಷ ಎಸ್‌. ಹುಲಿಗೆಪ್ಪ, ಗೌರವಾಧ್ಯಕ್ಷ ಚಂದ್ರಶೇಖರಯಕ್ಲಾಸಪುರ, ಪ್ರಧಾನ ಕಾರ್ಯದರ್ಶಿಬ್ರಹ್ಮಯ್ಯ ಕಡೂºರು, ಸದಸ್ಯರಾದ ಎಸ್‌. ವೆಂಕಟೇಶ, ಎಸ್‌.ನರಸಪ್ಪ, ತಿಮ್ಮಾರೆಡ್ಡಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next