Advertisement

ಅನಧಿಕೃತ ನೀರಿನ ಘಟಕದ ವಿರುದ್ಧ ಧರಣಿ

05:42 PM Dec 25, 2021 | Team Udayavani |

ಶಹಾಬಾದ: ಅನಧಿಕೃತ ನೀರಿನ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ಜೆಸ್ಕಾಂ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಅಫರೋಜ ನೀರು ಶುದ್ಧಿಕರಣ ಘಟಕದ ವತಿಯಿಂದ ಜೆಸ್ಕಾಂ ಕಚೇರಿ ಎದುರು ಧರಣಿ ನಡೆಸಲಾಯಿತು.

Advertisement

ಅಫರೋಜ ಶುದ್ಧಿಕರಣ ಘಟಕದ ಮಾಲೀಕ ಶೇಖ ಬಾಬು ಉಸ್ಮಾನ್‌ (ಗೋವಾ ಬಾಬು) ಮಾತನಾಡಿ, ನಗರದಲ್ಲಿ ಅನಧಿಕೃತ ನೀರಿನ ಘಟಕಗಳು ತಲೆ ಎತ್ತಿವೆ. ಅಲ್ಲದೇ ಸರ್ಕಾರದಿಂದ ಮಾನ್ಯತೆಯಿಲ್ಲದೇ ಕಾರ್ಯ ನಿರ್ವಹಿಸುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮೌನವಹಿಸಿದ್ದಾರೆ. ಅನೇಕ ಬಾರಿ ದೂರು ಸಲ್ಲಿಸಿದರೂ ನಗರಸಭೆ ಹಾಗೂ ಜೆಸ್ಕಾಂ ಅಧಿಕಾರಿಗಳು ಒಬ್ಬರ ಮೇಲೆ ಇನ್ನೊಬ್ಬರು ಹಾಕಿ ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಐಎಸ್‌ಐ ಮಾನ್ಯತೆ ಪಡೆದುಕೊಳ್ಳಲು ನಾವು ಸಾಕಷ್ಟು ಹಣ ವ್ಯಯಿಸಿದ್ದೇವೆ. ತಿಂಗಳಾದರೆ ತೆರಿಗೆ ಕಟ್ಟಬೇಕು. ಆದರೆ ಯಾವುದೇ ಮಾನ್ಯತೆ ಪಡೆಯದೇ, ತೆರಿಗೆ ನೀಡದೇ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಅನ ಧಿಕೃತ ಘಟಕಗಳು ಕಾರ್ಯನಿರ್ವಹಿಸುತ್ತಿದ್ದರೂ ಅಧಿಕಾರಿಗಳು ಯಾಕೆ ಮೌನವಹಿಸಿದ್ದಾರೆ ತಿಳಿಯುತ್ತಿಲ್ಲ. ಇದು ಹೀಗೆ ಮುಂದುವರಿದರೆ ಉಗ್ರ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

ನಂತರ ತಹಶೀಲ್ದಾರ್‌ ಸುರೇಶ ವರ್ಮಾ ಹಾಗೂ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಶಿವಶಾಲ ಪಟ್ಟಣಕರ,ಆಂಜನೆಯ ಕುಸಾಳೆ,ಪುನೀತ ಹಳ್ಳಿ,ಕಿರಣ ಜಿಡಗಿಕರ, ಮರಲಿಂಗ ಗಡೆಸೂಗೂರ, ಶಿವನಾಗ, ಶರಣು ತಲವಾರ, ಶೆಕ ಸುಫಿ ಯಾನ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next