Advertisement

ಬೆಳ್ಮಣ್‌ ಟೋಲ್‌ಗೇಟ್‌ ವಿರುದ್ಧ ಹೋರಾಟಕ್ಕೆ ವ್ಯಾಪಕ ಬೆಂಬಲ

09:52 AM Oct 08, 2018 | |

ಬೆಳ್ಮಣ್‌: ಪ್ರಸ್ತಾವಿತ ಟೋಲ್‌ಗೇಟ್‌ ವಿರುದ್ಧ ರವಿವಾರ ನಡೆದ ಪ್ರತಿಭಟನೆಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಕ್ಷಭೇದ ಮರೆತು ಒಕ್ಕೊರಲ ದನಿ ಮೊಳಗಿದೆ.

Advertisement

ಶಾಸಕ ವಿ. ಸುನಿಲ್‌ ಕುಮಾರ್‌ ಮಾತನಾಡಿ, ಮುಖ್ಯಮಂತ್ರಿಗಳ ಜತೆ ಚರ್ಚಿಸಿ, ಟೋಲ್‌ ಅಳವಡಿಕೆ ಮಾಡದಂತೆ ವಿನಂತಿಸುತ್ತೇನೆ ಎಂದರು. ಕೇಮಾರು ಸಾಂದೀಪನೀ ಸಾಧನಾ ಶ್ರಮದ ಶ್ರೀ ಈಶವಿಟಲದಾಸ ಸ್ವಾಮೀಜಿ, ಬೆಳ್ಮಣ್‌ ಸಂತ ಜೋಸೆಫರ ಚರ್ಚ್‌ನ ಪ್ರಧಾನ ಧರ್ಮಗುರು ವಂ| ಎಡ್ವಿನ್‌ ಡಿ’ಸೋಜಾ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿದರು.
 
ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌, ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಮಾಜಿ ಶಾಸಕ ಎಚ್‌. ಗೋಪಾಲ ಭಂಡಾರಿ, ಬೆಳ್ಮಣ್‌ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಆಡಳಿತ ಮೊಕ್ತೇಸರ ವಿಘ್ನೇಶ್‌ ಭಟ್‌, ಕಲ್ಯಾ ಉಮಾಮಹೇಶ್ವರ ಸ್ವಾಮೀಜಿ, ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ಜೀವಂಧರ ಅಧಿಕಾರಿ, ಉಪಾಧ್ಯಕ್ಷ ಕಿನ್ನಿಗೋಳಿ ದುರ್ಗಾಪ್ರಸಾದ ಹೆಗ್ಡೆ, ಸುರೇಶ್‌ ಶೆಟ್ಟಿ ಗುರ್ಮೆ, ಕಾಪು ದೇವಿಪ್ರಸಾದ್‌ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಮಣಿರಾಜ ಶೆಟ್ಟಿ, ಮುನಿಯಾಲು ಉದಯ ಶೆಟ್ಟಿ, ಶೀಲಾ ಕೆ. ಶೆಟ್ಟಿ, ಕಾರ್ಕಳ ಲಾರಿ ಮಾಲಕರ ಸಂಘದ ಅಧ್ಯಕ್ಷ ಉದಯ ಕುಮಾರ್‌, ಉದಯ ಎಸ್‌. ಕೋಟ್ಯಾನ್‌ ಬೆಂಬಲ ಸೂಚಿಸಿದರು. ಸುಹಾಸ್‌ ಹೆಗ್ಡೆ ಪ್ರಸ್ತಾವನೆಗೈದು, ರೇಶ್ಮಾ ಉದಯ ಶೆಟ್ಟಿ, ಎನ್‌.ಎಂ. ಹೆಗಡೆ, ಗಣಪತಿ ಆಚಾರ್ಯ, ಶ್ರೀಕಾಂತ ಶೆಟ್ಟಿ ನಿರೂಪಿಸಿದರು.

ಮಾಹಿತಿ ಅಲಭ್ಯ
ಬೆಳ್ಮಣ್ಣು ಟೋಲ್‌ ಗೇಟ್‌ ವಿರುದ್ಧ ಪ್ರತಿಭಟನೆ ಬಗ್ಗೆ ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ರಾಜ್ಯದ ಇತರ ಜಿಲ್ಲೆಗಳಲ್ಲಿ ಹಲವೆಡೆ ನಿರ್ಮಿಸಲಾದ ರಾಜ್ಯ ಹೆದ್ದಾರಿಗಳಲ್ಲಿ ಸುಂಕ ವಸೂಲಾತಿಗೆ ಮುಂದಾಗಿದ್ದಾರೆ. ಕೆಆರ್‌ಡಿಸಿಎಲ್‌ ನಿರ್ಮಿಸಿದ ರಾಜ್ಯ ಹೆದ್ದಾರಿ ನಿರ್ವಹಣೆಗಾಗಿ ಮೈಸೂರಿನ ಮಿತ್ರ ಇನ್ಫೋ ಸೊಲ್ಯುಶನ್ಸ್‌ ಖಾಸಗಿ ಸಂಸ್ಥೆಗೆ ಟೋಲ್‌ ಗೇಟ್‌ ನಿರ್ಮಿಸಿ ಸುಂಕ ವಸೂಲಾತಿಗೆ ಕೆಆರ್‌ಡಿಸಿಎಲ್‌ ಜವಾಬ್ದಾರಿ ವಹಿಸಿದೆ. ಈ ಬಗ್ಗೆ ಮಾಹಿತಿ ಕೇಳಿದ್ದರೂ ಲೋಕೋಪಯೋಗಿ ಇಲಾಖೆ ಇನ್ನೂ ಲಿಖೀತವಾಗಿ ನೀಡಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next