ವಿಜಯಪುರ: ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮೇಲಿನ ಹಲ್ಲೆ ಖಂಡಿಸಿ ನಗರದಲ್ಲಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ಕನಕದಾಸ ವೃತ್ತದಿಂದ ಪ್ರತಿಭಟನಾ ರ್ಯಾಲಿ ನಡೆಸಿ ಗಾಂಧೀಜಿ ವೃತ್ತದಲ್ಲಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆ ಆಯುಕ್ತರ ಮೇಲೆ ವಿನಾಕಾರಣ ಮೇಲೆ ಹಲ್ಲೆ ಮಾಡಿ, ರಕ್ಷಣೆಗೆ ಬಂದ ಪೊಲೀಸರು, ನ್ಯಾಯವಾದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ ಸರಕಾರಿ ನೌಕರರ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಖಂಡನೀಯ ಎಂದು ಹರಿಹಾಯ್ದರು.
ಕರ್ತವ್ಯ ನಿರತ ಅಧಿಕಾರಿಗಳ ಮೇಲಿನ ಇಂಥ ಹಲ್ಲೆ ಘಟನೆ ಇಡಿ ಸಮಾಜಕ್ಕೆ ಕಪ್ಪು ಚುಕ್ಕೆಯಾಗಿದೆ. ಸರ್ಕಾರಿ ಅಧಿಕಾರಿಗಳ ಮೇಲೆಯೆ ಹಲ್ಲೆಗಳು ನಡೆದರೆ ಸಾರ್ವಜನಿಕರ ಪಾಡೇನು ಎಂಬುದು ಪ್ರಶ್ನೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸದರಿ ಪ್ರಕರಣದಲ್ಲಿ ಎಲ್ಲ ಹಲ್ಲೆಕೋರರನ್ನು ಗಡಿಪಾರು ಮಾಡಬೇಕು. ಎಲ್ಲರನ್ನೂ ಬಂಧಿಸಿ 20 ವರ್ಷ ಕಠಿಣ ಶಿಕ್ಷೆ ವಿಧಿಸಬೇಕು. ಸದರಿ ಪ್ರಕರಣದ ಹಿಂದಿರುವ ಪ್ರಭಾವಿಗಳನ್ನೂ ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಕಾಮನಕೇರಿ ಪರಮಾನಂದ ಮಹಾರಾಜರು, ಮಖಣಾ ಪುರದ ಸೋಮೇಶ್ವರ ಶ್ರೀಗಳು, ಹುಲಜಂತಿ ಮಾಳಿಂಗರಾಯ ಪೂಜಾರಿಗಳು, ಸರೂರುಪೀಠದ ಶರಣಬಸಯ್ಯ ಶ್ರೀಗಳು, ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಕುರುಬ ಸಮಾಜದ ಜಿಲ್ಲಾಧ್ಯಕ್ಷ ರಾಜು ಕಂಬಾಗಿ, ರಾಜ್ಯ ಸಂಘಟನಾ ಕಾರ್ಯದರ್ಶಿ ರವಿ ಕಿತ್ತೂರ, ಮೋಹನ ಮೇಟಿ, ಸದಾಶಿವ ಪೂಜಾರಿ, ಅಡಿವೆಪ್ಪ ಸಾಲಗಲ್, ಉಮೇಶ ವಂದಾಲ, ಎಂ.ಸಿ. ಮುಲ್ಲಾ, ಫಯಾಜ್ ಕಲಾದಗಿ, ದುಂಡಪ್ಪ ಕುಮಟಗಿ, ಸಂಗಮ್ಮ ದೇವರಳ್ಳಿ, ಜಗದೇವಿ ಗುಂಡಳ್ಳಿ, ಶಕುಂತಲಾ ಕಿರಸೂರ, ಶಾರದಾ ವಾಲೀಕಾರ, ಲಕ್ಷ್ಮೀ ಅಗಸಬಾಳ, ಪ್ರಭಾವತಿ ನಾಟೀಕಾರ, ಕಾಡಸಿದ್ದ ವಕೀಲರು, ಮಲ್ಲಣ್ಣ ಕಾಮನಕೇರಿ, ಸಿದ್ದು ಬಾವಿಕಟ್ಟಿ, ಮಲ್ಲು ಪರಸಣ್ಣವರ, ಪರಮೇಶ್ವರ ಭೋಸಗಿ, ರಾಜು ಸಗಾಯಿ, ಸಿದ್ದು ಭಾವಿಕಟ್ಟಿ, ಬಸವರಾಜ ಕಾತ್ನಾಳ, ಕಾಂತು ಇಂಚಗೇರಿ ಇತರರು ಇದ್ದರು.