Advertisement

ಪೌರತ್ವ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

01:07 PM Jan 22, 2020 | Suhan S |

ವಿಜಯಪುರ: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಸಿಎಎ, ಎನ್‌.ಆರ್‌.ಸಿ, ಎನ್‌.ಪಿ.ಆರ್‌. ಕಾಯ್ದೆ ವಿರೋಧಿಸಿ ನಗರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಜಿಲ್ಲಾ ಸಂಚಾಲಕ ವಿನಾಯಕ ಗುಣಸಾಗರ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಆರ್ಥಿಕ ಹಿಂಜರಿಕೆ, ನೋಟು ಅಮಾನ್ಯೀಕರಣ ಮಹಿಳೆಯರ ಮೇಲೆ ಅತ್ಯಾಚಾರ ಮುಂತಾದ ಜ್ವಲಂತ ಸಮಸ್ಯೆಗಳಿಂದ ದೇಶದ ಜನರ ಗಮನವನ್ನು ಬೆರೆಡೆ ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ಸರಕಾರ ಎನ್‌ಆರ್‌ಸಿ ನೆಪ ಹೂಡಿದೆ. ದೇಶದಲ್ಲಿ ನಿರ್ದಿಷ್ಟವಾಗಿ ಒಂದು ಧರ್ಮವನ್ನು ಹೊರಗಿಟ್ಟು ಕಾನೂನು ರೂಪಿಸುವ ಅವಶ್ಯಕತೆ ಇಲ್ಲ. ಸಂವಿಧಾನದಲ್ಲಿ ಸಂಚಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ ಅವರು  ಈ ದೇಶದಲ್ಲಿ ಎಲ್ಲ ಧರ್ಮದವರು ಸಾಂವಿಧಾನಿಕವಾಗಿ ಸಮಾನವಾಗಿ ಜೀವಿಸುವ ಅವಕಾಶ ನೀಡಿದ್ದಾರೆ. ಹೀಗಾಗಿ ಸಲ್ಲದ ಯೋಜನೆ-ಕಾಯ್ದೆಗಳನ್ನು ಜಾರಿಗೆ ತರುವ ಬದಲು ಕೇಂದ್ರ ಸರ್ಕಾರ ಸಮಾಜದ ಎಲ್ಲರಿಗೂ ಒಳಿತಾಗುವ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣ ಮಾತನಾಡಿ, ಮಾನವಿಯತೆ ದೃಷ್ಟಿಯಿಂದ ಈ ಕಾಯ್ದೆಯಿಂದ ಇತರೆ ದೇಶಗಳಲ್ಲಿ ವಾಸಿಸಲು ಸಾಧ್ಯವಾಗದ ಜನರು ಭಾರತಕ್ಕೆ ಬಂದರೆ ಅಂಥವರಿಗೆ ಆಶ್ರಯ ನೀಡಲು ನಮ್ಮ ಕಾನೂನಿನಲ್ಲಿ ಅವಕಾಶ ಇರುತ್ತದೆ. ಆದರೆ ಒಂದು ಧರ್ಮದವರನ್ನು ಹೊರಗಿಟ್ಟು ಈ ಕಾಯ್ದೆಗೆ ತಿದ್ದುಪಡಿ ತಂದಿರುವುದು ಸರಿಯಲ್ಲ. ಎನ್‌.ಆರ್‌.ಸಿ. ಕಾಯ್ದೆ ಬಗ್ಗೆ ಕೇಂದ್ರ ಸರಕಾರ ಜನ ಯಾವ ದಾಖಲೆಗಳನ್ನು ನೀಡಬೇಕೆಂದು ಎಲ್ಲಿಯೂ ತಿಳಿಸಿಲ್ಲ. ಯಾವ ಸ್ಪಷ್ಟತೆಯನ್ನು ಬಹಿರಂಗ ಪಡಿಸಿಲ್ಲ. ಸಿಎಎ ಕಾಯ್ದೆ ದೇಶದ ಸಂವಿಧಾನದ ಮೂಲತತ್ವಗಳಾದ ಸಮಾನತೆಯ ವಿರುದ್ಧವಾಗಿದ್ದು ಇದು ದೇಶದ ಭದ್ರತೆ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಛಿದ್ರ ಮಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಅಶೋಕ ಚಲವಾದಿ, ರಾಜ್ಯ ಸಂಚಾಲಕ ರಮೇಶ ಆಸಂಗಿ, ಜಿಲ್ಲಾ ಸಂಘಟನಾ ಸಂಚಾಲಕ ರಮೇಶ ಧರಣಾಕರ, ರಾಜು ಪಿರಂಗಿ, ರೇವಣಸಿದ್ದ ಮಸಳಿಕೇರಿ, ರಾಮಚಂದ್ರ ದೊಡಮನಿ, ಸಿದ್ದು ತಳಕೇರಿ, ಸಂಜು ಜಾನಕರ, ಸಂಜು ಬನಸೋಡೆ, ಧರೆಪ್ಪ ಮರದೊಲಿ, ಮಲ್ಲು ಸಿಂಗೆ, ವಿಜಯ ಅರಕೇರಿ, ರಾಜಕುಮಾರ ಸಿಂದಗೇರಿ, ರಾವತಮಾಸ್ತರ ತಳಕೇರಿ, ಆನಂದ ಕಾಂಬಳೆ, ಬಸವರಾಜ ಇಂಗಳಗಿ, ಸುನೀಲ ಕಾಂಬಳೆ, ಮುತ್ತು ಹಾಲಕವಡಿ, ಡಿ.ಐ. ನಾಡಗೇರಿ, ರಾಘವೇಂದ್ರ ಪಡಗಾಡನೂರ, ರಮೇಶ ಅಜಮನಿ, ಸಿದ್ದು ದೇಗಿನಾಳ, ಸಂಜು ಮಸಳಕೇರಿ, ಅಶೋಕ ಮಾಣಕರ, ಶರಣಕುಮಾರ ನಾಟಿಕಾರ, ಸದಾಶಿವ ಚಿಗದೊಳ ಪರಶುರಾಮ ರೂಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next