Advertisement

ಹಲ್ಲೆ ಖಂಡಿಸಿ ಪ್ರತಿಭಟನೆ

07:04 AM Jan 22, 2019 | Team Udayavani |

ಹುಬ್ಬಳ್ಳಿ: ಪಾಲಿಕೆ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಬಿಜೆಪಿ ಕಾರ್ಯಕರ್ತ ಉಮೇಶ ದುಶಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಪಾಲಿಕೆ ಸದಸ್ಯರು ಹಾಗೂ ಸಿಬ್ಬಂದಿ ಪ್ರತಿಭಟನೆ ನಡೆಸಿದರು.

Advertisement

ಪಾಲಿಕೆ ಆಯುಕ್ತರ ಕಚೇರಿ ಮುಂಭಾಗದಲ್ಲಿ ಪಾಲಿಕೆಯ ಕಾಂಗ್ರೆಸ್‌ ಸದಸ್ಯರು ಹಾಗೂ ಸಿಬ್ಬಂದಿ ಸೋಮವಾರ ಪ್ರತಿಭಟನೆ ನಡೆಸಿದರು. ಕಟ್ಟಡ ಪರವಾನಗಿ ಶಾಖೆಯಲ್ಲಿ ಕಡತ ವಿಲೇವಾರಿಗೆ ಸಂಬಂಧಿಸಿ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ. ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಕೂಡಲೇ ದುಶಿ ವಿರುದ್ಧ ಪಾಲಿಕೆ ಆಯುಕ್ತರು ಪ್ರಕರಣ ದಾಖಲಿಸಬೇಕು, ದೂರು ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ಪಾಲಿಕೆ ವಿಪಕ್ಷ ನಾಯಕ ಗಣೇಶ ಟಗರಗುಂಟಿ ಮಾತನಾಡಿ, ಉಮೇಶ ದುಶಿ ಕಟ್ಟಡ ಪರವಾನಗಿ ನೀಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ. ಇದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಕಚೇರಿಯಲ್ಲಿದ್ದ ಕಂಪ್ಯೂಟರ್‌ ಧ್ವಂಸ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ. ಶಾಖೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸದಿರುವುದು ನೋಡಿದರೆ ಪ್ರಕರಣ ಮುಚ್ಚಿ ಹಾಕುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಆಯುಕ್ತರಿಗೆ ತಡೆ: ಪಾಲಿಕೆ ಆಯುಕ್ತ ಶಕೀಲ್‌ ಅಹ್ಮದ್‌ ಅವರು ಹೊರ ಹೋಗುವುದನ್ನು ತಡೆದ ಪ್ರತಿಭಟನಕಾರರು ಉಮೇಶ ಮೇಲೆ ಪ್ರಕರಣ ದಾಖಲಿಸಬೇಲು ಪಟ್ಟು ಹಿಡಿದರು. ಯಾವುದೇ ಕಾರಣಕ್ಕೂ ಸಂಧಾನ ಮಾಡಬಾರದು. ಪ್ರಕರಣ ದಾಖಲಿಸುವವರೆಗೂ ಹೊರಗಡೆ ಬಿಡುವುದಿಲ್ಲ ಎಂದು ತಡೆಯೊಡ್ಡಿದರು. ಪಾಲಿಕೆ ಸದಸ್ಯರಾದ ಪ್ರಫ‌ುಲ್ಲಚಂದ್ರ ರಾಯನಗೌಡ್ರ, ಪ್ರಕಾಶ ಕ್ಯಾರಕಟ್ಟಿ, ಸುವರ್ಣ ಕಲ್ಲಕುಂಟ್ಲಾ, ದೀಪಾ ಗೌರಿ, ಬಸೀರ ಅಹ್ಮದ್‌ ಗುಡಮಾಲ್‌, ರಬಿಯಾಬೇಗಂ ಅಮಟೂರ, ಕರಿಯಪ್ಪ ಬಿಸಗಲ್ಲ ಇನ್ನಿತರರಿದ್ದರು.

ಪ್ರಕರಣ ದಾಖಲು
ಪಾಲಿಕೆ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಕ್ಕೆ ಸಂಬಂಧಿಸಿ ಉಮೇಶ ದುಶಿ ವಿರುದ್ಧ ಎಫ್ಐಆರ್‌ ದಾಖಲಾಗಿದೆ. ಸರಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪದನ್ವಯ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next