Advertisement

ಕಾರ್ಯದರ್ಶಿ ಹುದ್ದೆ ನೇಮಕ ವಿರೋಧಿಸಿ ಪ್ರತಿಭಟನೆ

06:34 AM Jun 07, 2020 | Team Udayavani |

ಚನ್ನಪಟ್ಟಣ: ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಅಪರಾಧ ಹಿನ್ನೆಲೆ ಹೊಂದಿರುವವರನ್ನು ನೇಮಕ ಮಾಡಲಾಗಿದೆ ಎಂದು ಆರೋಪಿಸಿ ತಾಲೂಕಿನ ಕನ್ನಸಂದ್ರ ಗ್ರಾಮಸ್ಥರು ಸಂಘದ ಮುಂದೆ ಪ್ರತಿಭಟನೆ  ನಡೆಸಿದ್ದಾರೆ. ಸಂಘದ ನಿವೃತ್ತ ಕಾರ್ಯದರ್ಶಿ ಚಂದ್ರಯ್ಯರ ಪುತ್ರ ಜಯಂತ್‌ ಎಂಬುವರನ್ನು ಆಯ್ಕೆ ಮಾಡಲಾಗಿದೆ.

Advertisement

ಆಯ್ಕೆ ವಿಚಾರದಲ್ಲಿ ಸಹಕಾರಿ ಸಂಘಗಳ ನಿಯಮ ಗಾಳಿಗೆ ತೂರಲಾಗಿದೆ. ಅಧಿಕಾರಿಗಳ ಮಟ್ಟದಲ್ಲಿ ಗುಪ್ತವಾಗಿ  ಆಯ್ಕೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಹಾಲು ಉತ್ಪಾದಕರ ಪ್ರೋತ್ಸಾಹಧನ ಧನ ಹಾಗೂ ಬೋನಸ್‌ ದುರುಪಯೋಗದ ಗಂಭೀರ ಆರೋಪ ಹೊತ್ತಿರುವ ನಿವೃತ್ತ ಕಾರ್ಯದರ್ಶಿ ಚಂದ್ರಯ್ಯರ ಪುತ್ರ ಜಯಂತ್‌ಗೆ ಕಾರ್ಯದರ್ಶಿ ಹುದ್ದೆ ನೀಡಿರುವುದು ಸರಿಯಲ್ಲ.

ಅವರಿಗೆ ಅನುಕೂಲವಾಗುವಂತೆ ಕಡತ ಸಿದಪಡಿಸಲಾಗಿದೆ ಎಂದು ಆರೋಪಿಸಿದರು. ಪೋ›ತ್ಸಾಹಧನ ಹಾಗೂ ಬೋನಸ್‌ ಅಕ್ರಮದ ಬಗ್ಗೆ ಆರೋಪ ಬಂದ ಸಂದರ್ಭದಲ್ಲಿ ತಂದೆ ಚಂದ್ರಯ್ಯ ರಕ್ಷಣೆಗೆ ಬಂದ ಪುತ್ರ ಜಯಂತ್‌ ಸಂಘದ ಕಚೇರಿ ಯಲ್ಲಿದ್ದ ಪೀಠೊಪಕರಣ ಧ್ವಂಸಗೊಳಿಸಿ, ಅಸಭ್ಯ ವಾಗಿ ವರ್ತಿಸಿದ್ದರು. ಕಾರ್ಯದರ್ಶಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಅವರನ್ನು ಕಾರ್ಯದರ್ಶಿಯಾಗಿ ನೇಮಿಸಿದರೆ  ಇನ್ನಷ್ಟು ಅಕ್ರಮ ನಡೆಸುತ್ತಾರೆ. ಹೀಗಾಗಿ ಕೂಡಲೇ ಬೇರೆಯವರನ್ನು ನೇಮಕ ಮಾಡಬೇಕೆಂದು ಆಗ್ರಹಪಡಿಸಿದರು.

ಸಂಘದ ಮಾಜಿ ಅಧ್ಯಕ್ಷ ಕೆ.ಎಂ. ಗುರು, ಪುಟ್ಟಸಿದ್ದೇಗೌಡ, ಮಾಜಿ ನಿರ್ದೇಶಕ  ವಿನೋದ್‌, ಮಾಜಿ ಸದಸ್ಯೆ ಚಿಕ್ಕತಾಯಮ್ಮ, ಪುಟ್ಟಲಿಂಗಮ್ಮ, ಕಮಲಮ್ಮ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next