ಚಾಮರಾಜನಗರ: ನೂತನ ಪಠ್ಯಪುಸ್ತಕ ಆಯ್ಕೆ ಸಮಿತಿಯನ್ನು ವಜಾಗೊಳಿ ಸುವಂತೆಹಾಗೂ ಅರ್ಹ ಶಿಕ್ಷಣ ತಜ್ಞರನ್ನು ಪಠ್ಯಪುಸ್ತಕ ಆಯ್ಕೆ ಸಮಿತಿಗೆ ನೇಮಿಸುವಂತೆ ಒತ್ತಾಯಿಸಿಭಾರತೀ ಯ ಪರಿವರ್ತನ ಸಂಘ (ಬಿಪಿಎಸ್) ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಪ್ರತಿಭಟನಾನಿರತರುಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪಠ್ಯಪುಸ್ತಕಗಳು ಮಕ್ಕಳ ವ್ಯಕ್ತಿತ್ವವನ್ನುರೂಪಿಸ ಬಲ್ಲ ಸಾಧನಗಳಾ ಗಿರುವುದರಿಂದಉದಾತ್ತರು, ವಿಶಾಲ ಮನಸ್ಥಿತಿ ಉಳ್ಳವರು,ಜಾತಿಧರ್ಮ ಪಂಥಗಳನ್ನು ಮೀರಿದವಸ್ತುನಿಷ್ಠ ಆಲೋಚನೆ ಯುಳ್ಳ ತಜ್ಞರು ಪಠ್ಯಪುಸ್ತಕ ಆಯ್ಕೆ ಸಮಿತಿಯಲ್ಲಿಇರಬೇಕಾಗುತ್ತದೆ. ಆದರೆ ಈಗ ಸರ್ಕಾರನೇಮಿಸಿರುವ ವಿದ್ಯಾರ್ಥಿಗಳ ಪಠ್ಯಪುಸ್ತಕಸಮಿತಿಯಲ್ಲಿ ಅಂತಹ ಗುಣಗಳು ಇಲ್ಲದವರಾಗಿದ್ದಾರೆ. ಲಿಂಗ ಸಮಾನತೆ, ಜಾತ್ಯಾತೀತ ಮೌಲ್ಯಗಳನ್ನು ನೇರವಾಗಿ ಅಣಕಿಸುವವರು, ಕನ್ನಡನಾಡಿಗೆ ಘನತೆತಂದುಕೊಟ್ಟ ಮಹಾಕವಿ ಕುವೆಂಪುಅಂಥವರನ್ನೇ ಅಣಕಿಸಿ ಬರೆಯುವಸಂಕುಚಿತ ಬುದ್ಧಿಯುಳ್ಳವರಾಗಿದ್ದಾರೆ. ಇಂತಹ ಮನುವಾದಿ ಮನಸ್ಥಿತಿಯುಳ್ಳ ಜನರು ಪಠ್ಯಪುಸ್ತಕ ಆಯ್ಕೆ ಸಮಿತಿಯಲ್ಲಿರುವುದು ಈ ನಾಡಿನ ವಿದ್ವತ್ ಲೋಕನಾಚಿಕೆಪಡುವಂತಹ ತಲೆತಗ್ಗಿಸುವಂತಹ ಸಂಗತಿಯಾಗಿದೆ ಎಂದು ದೂರಿದರು.
ಬರಗೂರು ರಾಮಚಂದ್ರಪ್ಪನವರ ಸಮಿತಿ ನೀಡಿದ್ದ ಪಠ್ಯಪುಸ್ತಕಗಳನ್ನೇ ಮುಂದು ವರಿಸಬೇಕು. ಹೊಸ ಶಿಕ್ಷಣ ತಜ್ಞರನ್ನು ನೇಮಿಸಿ ಪಠ್ಯಗಳನ್ನು ಸಿದ್ಧಪಡಿಸಬೇಕು ಎಂದು ಪ್ರತಿಭಟನಾನಿತರು ಅಗ್ರಹಿಸಿದರು.
ಭಾರತೀಯ ಪರಿವರ್ತನ ಸಂಘದ ರಾಜ್ಯ ಉಪಾಧ್ಯಕ್ಷ ಸೋಸಲೆ ಸಿದ್ದರಾಜು,ಟೌನ್ ಅಧ್ಯಕ್ಷ ರಾಮಸಮುದ್ರ ಬಾಬು,ಇರಸವಾಡಿ ಮಹೇಶ್, ಕಂದಹಳ್ಳಿರಮೇಶ್, ಗೌತಮ್, ಭರತ್, ಕೃಷ್ಣ, ಸ್ವಾಮಿ ಇದ್ದರು.