Advertisement

ತಹಶೀಲ್ದಾರ್‌ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

12:53 PM Feb 15, 2022 | Team Udayavani |

ಚಿತ್ತಾಪುರ: ಹುಮನಾಬಾದ್‌ ತಹಶೀಲ್ದಾರ್‌ ಅವರ ಮೇಲೆ ನಡೆದ ಘಟನೆ ಖಂಡಿಸಿ ಅಖೀಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

Advertisement

ಹಲ್ಲೆ ಮಾಡಿದ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಅಂಕುಶ ಗೋಖಲೆ ಸೇರಿ 14 ಜನರನ್ನು ಗುಂಡಾ ಕಾಯ್ದೆಯಡಿ ಬಂ ಧಿಸಿ ಗಡಿಪಾರು ಮಾಡಬೇಕು. ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಿದ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ ಗೆ ಸಲ್ಲಿಸಲಾಯಿತು.

ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಮಾತನಾಡಿ, ತಹಶೀಲ್ದಾರ್‌ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕಚೇರಿಯ ಪಿಠೊಪಕರಣ ಒಡೆದು ಹಾಕಿ ಕಚೇರಿ ಧ್ವಂಸಗೊಳಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ, ಅಫಜಲಪುರ ಶಾಸಕ ಎಂ.ವೈ ಪಾಟೀಲ್‌, ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ, ಚಂದ್ರಶೇಖರ ಅವಂಟಿ, ಸೋಮಶೇಖರ ಬೆಳಗುಂಪ್ಪಾ, ರಮೇಶ ಮರಗೋಳ, ವೀರಣ್ಣಗೌಡ ಪರಸರೆಡ್ಡಿ, ನಾಗರೆಡ್ಡಿ ಗೋಪಸೇನ್‌, ವೀರಣ್ಣ ಸುಲ್ತಾನಪುರ, ನಾಗರಾಜ ರೇಶ್ಮಿ, ಜಗದೇವ ದಿಗ್ಗಾಂವಕರ್‌, ಅಂಬರೀಶ ಸುಲೇಗಾಂವ, ಶರಣಗೌಡ ಭೀಮನಳ್ಳಿ, ವಿಶ್ವನಾಥ ಪಾಟೀಲ್‌, ರವಿ ಇವಣಿ, ರವೀಂದ್ರ ಸಜ್ಜನಶೆಟ್ಟಿ, ಮಲ್ಲಿಕಾರ್ಜುನರೆಡ್ಡಿ ಇಜಾರ್‌, ಪ್ರಸಾದ ಅವಂಟಿ, ಆನಂದ ನರಿಬೋಳ, ಮಂಜುಗೌಡ, ಸೋಮು ನಾಲವಾರ, ಕೋಟೇಶ್ವರ ರೇಶ್ಮಿ, ಸಿದ್ದು ಸಾತನೂರ, ರಾಚಣ್ಣ ಬೊಮ್ಮನಳ್ಳಿ, ಶಂಭು ದಿಗ್ಗಾಂವ, ರಮೇಶ ಕಾಳನೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next