Advertisement

ಸಕ್ಕರೆ ಕಾರ್ಖಾನೆ ವಿರುದ್ದ ಪ್ರತಿಭಟನೆ

05:58 PM Jan 20, 2022 | Shwetha M |

ಆಲಮೇಲ: ಕಬ್ಬು ಕಟಾವಿನಲ್ಲಿ ಕೆಪಿಆರ್‌ ಸಕ್ಕರೆ ಕಾರ್ಖಾನೆ ಅಧಿಕಾರಿಗಳು ರಾಜಕೀಯ ಮಾಡುತ್ತ ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಆಲಮೇಲ ಭಾಗದ ಕಬ್ಬು ಬೆಳೆಗಾರರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಕಟಾವು ಮಾಡುವ ಗುಂಪುಗಳಿಗೆ ಬೇರೆ ತಾಲೂಕುಗಳಿಗೆ ಕಳುಹಿಸಿ ಅಲ್ಲಿನ ಕಬ್ಬುಗಳನ್ನು ಕಟಾವು ಮಾಡಿಸಿ ಕಾರ್ಖಾನೆಗೆ ಸಾಗಿಸುತ್ತಿದ್ದು ಆಲಮೇಲ ಸುತ್ತಮುತ್ತಲಿನ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಖಾನೆ ಅಧಿಕಾರಿ ಗಂಗಾಧರ ಹುಕ್ಕೇರಿ ಪ್ರತಿಭಟನಾ ಸ್ಥಳಕ್ಕಾಗಮಿಸಿ ರೈತರ ಮನವೋಲಿಸಿ ಮಾತನಾಡಿ, ನಾನು ತಾರತಮ್ಯ ಮಾಡಿಲ್ಲ. ಎರಡು ದಿನದಲ್ಲಿ ಈ ಭಾಗದ ರೈತರ ಕಬ್ಬು ಕಟಾವು ಮಾಡಿಸಲಾಗುವುದು ಎಂದರು.

ಅಧಿಕಾರಿ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು. ಸುನೀಲ ನಾರಾಯಣಕರ, ದಾದಾ ಎಲ್ಲಗಾರ, ಮುನ್ನಾ ಚೌಧರಿ, ರಾಜು ಲ್ಯಾವಟೆ, ಅರ್ಜುನ ಮರಾಠೆ, ಉಮ್ಮರ ಬಿಳವಾರ, ರಫೀಕ್‌ ಕೋತಂಬರಿ, ದಯಾನಂದ ನಾರಾಯಣಕರ, ಸೈಫನ್‌ ಸೌದಾಗರ, ದೇವಾನಂದ ಲ್ಯಾವಟೆ, ವಿಶಾಲ ನಾರಾಯಣಕರ, ರಮೇಶ ಲ್ಯಾವಟೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next