Advertisement
ಕೋವಿಡ್ ಮಹಾಮಾರಿಯಿಂದ ಈಗಾಗಲೇ ಸಂಕಷ್ಟದಲ್ಲಿರುವ ರೈತ-ಕಾರ್ಮಿಕರಿಗೆ ಕೇಂದ್ರ ಸರ್ಕಾರ ಅಂಗೀಕರಿಸಿರುವ ಎಪಿಎಂಸಿ, ಅಗತ್ಯವಸ್ತುಗಳು, ವಿದ್ಯುತ್, ಭೂ ಸುಧಾರಣೆ ಕಾಯ್ದೆಗಳಂತ ಮುಂತಾದ ನೀತಿಗಳು ಗಾಯದ ಮೇಲೆ ಬರೆ ಎಳೆದಂತಾಗಿವೆ. ದೇಶದಲ್ಲಿ ಬಡತನ,ನಿರುದ್ಯೋಗಳಂತಹ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಚಕಾರ ಎತ್ತದ ಸರ್ಕಾರಗಳು ಜನವಿರೋಧಿ ನೀತಿ ಜಾರಿಗೊಳಿಸುತ್ತಿವೆ ಎಂದು ಪ್ರತಿಭಟನಾಕಾರರು ದೂರಿದರು.
Related Articles
Advertisement
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ :
ದಾವಣಗೆರೆ: ಮಟ್ಟಿಕಲ್ಲು ಕೊಳೆಗೇರಿ ಪ್ರದೇಶದಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ, ಮನೆ ಕಟ್ಟಿಸಿಕೊಡುವುದು ಒಳಗೊಂಡ ಂತೆ ವಿವಿಧಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಭಾರತ್‌ಕಮ್ಯೂನಿಸ್ಟ್ ಪಕ್ಷ(ಸಿಪಿಐ) ನೇತೃತ್ವದಲ್ಲಿಕೊಳೆಗೇರಿ ನಿವಾಸಿಗಳು ಮಂಗಳವಾರ ಮಹಾ ನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.
ಮಟ್ಟಿಕಲ್ಲು ಕೊಳಚೆ ಪ್ರದೇಶದಲ್ಲಿನ ಜನರಿಗೆ ಅನುಕೂಲ ಆಗುವಂತೆ ಶೌಚಾಲಯ, ಸಿಮೆಂಟ್ ರಸ್ತೆ ನಿರ್ಮಾಣ, ಹಕ್ಕುಪತ್ರ ಮತ್ತುಮನೆ ಕಟ್ಟಿಸಿಕೊಡಿ ಎಂದು ಹಲವಾರು ವರ್ಷಗಳಿಂದ ಪ್ರತಿಭಟಿಸಿ, ಮನವಿ ಸಲ್ಲಿಸುತ್ತಲೇ ಬರಲಾಗುತ್ತಿದೆ. ಹೋರಾಟದಸಂದರ್ಭದಲ್ಲಿ ನೀಡಿದಂತಹ ಯಾವುದೇ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಟ್ಟಿಕಲ್ಲು ಕೊಳಚೆ ಪ್ರದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗದವರೇ ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ. ಬಹಳ ಬಡತನದ ಜೀವನ ಸಾಗಿಸುತ್ತಿದ್ದಾರೆ. ಹಸಿ ಹುಲ್ಲು ಮಾರಾಟ, ಛತ್ರಗಳಲ್ಲಿ ಊಟದ ಎಲೆ ತೆಗೆಯುವ, ಮುಸುರೆಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದಾರೆ. 40 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಮಾಡುತ್ತಿದ್ದಾರೆ. ವಯಸ್ಸಾಗಿ ಎಷ್ಟೋ ನಿವಾಸಿಗಳು ಮರಣ ಹೊಂದಿದ್ದಾರೆ. ಎರಡನೇ ಪೀಳಿಗೆ ಜೀವನ ಅಲ್ಲಿಯೇ ಸಾಗಿಸುತ್ತಿದ್ದಾರೆ. ಅನೇಕರಿಗೆ ಮನೆಯ ಹಕ್ಕುಪತ್ರ ನೀಡಿಲ್ಲ. ಮನೆ ಇಲ್ಲದವರಿಗೆ ಮನೆ ಕಟ್ಟಿಸಿಕೊಡಬೇಕು ಎಂದು ಒತ್ತಾಯಿಸಿದರು.
ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಶೌಚಾಲಯ ಕಟ್ಟಿಸಿ ಕೊಡೋಕೆ ಆಗುತ್ತಿಲ್ಲ. ನಗರದ ಹೃದಯ ಭಾಗದಲ್ಲಿರುವ ಸ್ಲಂ ನಿವಾಸಿಗಳು ತೀವ್ರ ತೊಂದರೆ ಆನುಭವಿಸುತ್ತಿದ್ದಾರೆ. ರಾತ್ರಿಯಾಗುವುದನ್ನ ಕಾಯುವಂತಹ ಸ್ಥಿತಿಯೂ ಇದೆ. ಕೂಡಲೇ ಶೌಚಾಲಯ, ಸಿಮೆಂಟ್ ರಸ್ತೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ಮಳೆ ಬಂದರೆ ಗುಡಿಸಲ ಒಳಗೆ ಮಳೆ ನೀರು ತುಂಬಿಕೊಳ್ಳುತ್ತದೆ. ಮಹಾನಗರಪಾಲಿಕೆ ಮೂಲಭೂತ ಸೌಲಭ್ಯ ಬೇಡಿಕೆಈಡೇರಿಸಿ ಸಮಸ್ಯೆ ಮುಕ್ತಿಗೊಳಿಸಬೇಕೆಂದುಭಾರತ ಕಮ್ಯುನಿಸ್ಟ್ ಪಕ್ಷ ಒತ್ತಾಯಿಸುತ್ತದೆ. ಬೇಡಿಕೆ ಈಡೇರಿಸದಿದ್ದರೆ ಮಹಾನಗರ ಪಾಲಿಕೆ ಮುಂದೆ ನಿರಂತರ ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಕಾರ್ಯದರ್ಶಿ ಎಚ್.ಕೆ. ರಾಮಚಂದ್ರಪ್ಪ, ತಾಲೂಕು ಕಾರ್ಯದರ್ಶಿ ಆವರಗೆರೆ ವಾಸು, ಷಣ್ಮುಖಸ್ವಾಮಿ ,ಕೆರನಹಳ್ಳಿ ರಾಜು, ಎಂ.ಬಿ. ಶಾರದಮ್ಮ,ಕಂಚಿಕೆರೆ ಹನುಮಂತಪ್ಪ, ಚಿನ್ನಪ್ಪ, ನಿಟ್ಟುವಳ್ಳಿ ಬಸಣ್ಣ, ಗದಿಗೇಶ್, ಸುಧಮ್ಮ, ಇತರರಿದ್ದರು.