ಮದ್ದೂರು: ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಉದ್ದೇಶ ಪೂರ್ವಕವಾಗಿ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ವಾಪಸ್ ಕಳು ಹಿಸಿರುವ ಕ್ರಮ ಖಂಡಿಸಿ ದಲಿತ ಸಮನ್ವಯ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿ ಬಳಿ ಜಮಾವಣೆ ಗೊಂಡ ಸಂಘಟನೆ ಕಾರ್ಯಕರ್ತರು ಇಲಾಖೆ ಅಧಿಕಾರಿಗಳವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಸರಕಾರ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳ ಉಳಿತಾಯ ಖಾತೆಗೆ ಜಮಾವಣೆ ಮಾಡಬೇಕು. 2018-19ನೇ ಸಾಲಿನ ವಿದ್ಯಾರ್ಥಿ ವೇತನ 1.95 ಕೋಟಿ ರೂ. ಅಧಿಕಾರಿಗಳ ಹಾಗೂ ಸಹಾಯಕ ನಿರ್ದೇಶಕಿ ಕಾವ್ಯಶ್ರೀ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದಾಗಿ ವಿದ್ಯಾರ್ಥಿಗಳಿಗೆ ಸಿಗ ಬೇಕಾದ ಸೌಲಭ್ಯ ವಾಪಸ್ ಹೋಗಿದ್ದರೂ ಕ್ರಮ ವಹಿಸದ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಮುಂದಿನ ವ್ಯಾಸಂಗಕ್ಕೆ ವಿದ್ಯಾರ್ಥಿಗಳು ತೆರಳಿದ್ದರೂ ಉಳಿತಾಯ ಖಾತೆಗೆ ಜಮಾವಾಗದೆ ಕರ್ತವ್ಯ ಲೋಪವೆಸಗಿದ್ದು ಇಂತಹ ನಿರ್ಲಕ್ಷ್ಯಧೋರಣೆ ಅನುಸರಿಸಿರುವ ಅಧಿಕಾರಿಗಳು ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರತಿಬಂಧಕ ಕಾಯಿದೆಯಡಿ ಪ್ರಕರಣ ದಾಖಲು ಮಾಡುವಂತೆ ಆಗ್ರಹಿಸಿದರು. ಕಳೆದ ಹಲವು ವರ್ಷಗಳಿಂದಲೂಇಲಾಖೆ ಯಲ್ಲಿ ವರ್ಗಾವಣೆಯಾಗದೆ ಠಿಕಾಣೆ ಹೂಡಿರುವ ಕೆಲ ಅಧಿಕಾರಿಗಳನ್ನು ಸರಕಾರ ಹಾಗೂ ಜಿಲ್ಲಾಡಳಿತ ವರ್ಗಾವಣೆ ಮಾಡಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಸರಕಾರ ದಿಂದ ಸಿಗಬೇಕಾದ ಸೌಲಭ್ಯಗಳನ್ನು ಸಕಾಲದಲ್ಲಿ ದೊರೆಯುವಂತೆ ತಾಲೂಕು ಆಡಳಿತ ಮುಂದಾಗಬೇಕೆಂದು ಒತ್ತಾಯಿಸಿ ಪ್ರತಿಭಟನೆ ಹಿಂಪಡೆದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕಾವ್ಯಶ್ರೀ ಮಾತನಾಡಿ,2018-19ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 1.95 ಕೋಟಿ ಅನುದಾನ ಬಿಡುಗಡೆಯಾಗಿದ್ದು ಕಾಲಾವ ಕಾಶದ ಕೊರತೆ ಯಿಂದಾಗಿ ವೆಚ್ಚವಾಗದೆ ಉಳಿದಿರುವ ಸದರಿಅನುದಾನ ವೆಚ್ಚ ಮಾಡಲು ಆರ್ಥಿಕ ಇಲಾಖೆಗೆ ಅನುದಾನ ಬಿಡುಗಡೆ ಮಾಡಲು ಪತ್ರ ಬರೆದಿರುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ಬೋರಯ್ಯ, ಮಾಜಿ ಸದಸ್ಯ ಎಚ್. ಹೊಂಬಯ್ಯ, ಮುಖಂಡರಾದ ರವಿಕುಮಾರ್, ಹುಲಿಗೆರೆಪುರ ಮಹದೇವು, ಶಿವು, ಬಸವರಾಜು, ರಾಜಣ್ಣ, ಮುತ್ತಯ್ಯ, ಹೊಂಬಾಳೆ, ಶಂಕರ್, ಶ್ರೀನಿವಾಸ್, ಅಂದಾನಿ ಸೋಮನಹಳ್ಳಿ ಭಾಗವಹಿಸಿದ್ದರು.