Advertisement

ಮೀಸಲಾತಿಗೆ ಧರಣಿ : ಪಕ್ಷಭೇದ ಮರೆತು ಸದನದ ಬಾವಿಗಿಳಿದು ಪ್ರತಿಭಟನೆ!

12:58 AM Feb 03, 2021 | Team Udayavani |

ಬೆಂಗಳೂರು: ಒಂದೆಡೆ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಹಾಗೂ ಕುರುಬ ಸಮುದಾಯದ ಮಂದಿ ಪಾದಯಾತ್ರೆ ನಡೆಸುತ್ತಿರುವ ಬೆನ್ನಲ್ಲೇ ರಾಜ್ಯ ವಿಧಾನ ಸಭೆಯಲ್ಲೂ ಮಂಗಳವಾರ ಈ ವಿಷಯ ಪ್ರತಿಧ್ವನಿಗೊಂಡು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು.

Advertisement

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ, ಕುರುಬ ಹಾಗೂ ಗಂಗಾಮತಸ್ಥ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ವಿಧಾನಸಭೆಯಲ್ಲಿ ಮೂರೂ ಪಕ್ಷಗಳ ಪಂಚಮಸಾಲಿ ಹಾಗೂ ಕುರುಬ ಸಮುದಾಯದ ಶಾಸಕರು ಸದನದ ಬಾವಿಗಿಳಿದು ಧರಣಿ ನಡೆಸಿದರು.

ಶೂನ್ಯವೇಳೆಯಲ್ಲಿ ಬಿಜೆಪಿಯ ಬಸನಗೌಡ ಪಾಟೀಲ್‌ ಯತ್ನಾಳ್‌ ವಿಷಯ ಪ್ರಸ್ತಾವಿಸಿ, ಪಂಚಮಸಾಲಿ ಲಿಂಗಾಯತ ಸಮುದಾಯವನ್ನು 2ಎ ಮೀಸಲಾತಿಗೆ ಸೇರಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಎರಡು ಬಾರಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಪರಿಶೀಲನೆ ನಡೆಸಿ ಕ್ರಮ
ಯತ್ನಾಳ್‌ ಪ್ರಸ್ತಾವಕ್ಕೆ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಉತ್ತರಿಸಿ, ಇದು ಸೂಕ್ಷ್ಮ ವಿಷಯ. ಪರಿಶೀಲಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಲ್ಲ ಪಕ್ಷಗಳ ನಾಯಕರೂ ಸಾಥ್‌
ಇದರಿಂದ ಅಸಮಾಧಾನಗೊಂಡ ಯತ್ನಾಳ್‌ ಸದನದ ಬಾವಿಗಿಳಿದು ಧರಣಿಗೆ ಮುಂದಾದರು, ಜೆಡಿಎಸ್‌ನ ಬಂಡೆಪ್ಪ ಕಾಶಂಪೂರ್‌, ವೆಂಕಟರಾವ್‌ ನಾಡಗೌಡ ಜತೆಗೂಡಿದರು. ಕಾಂಗ್ರೆಸ್‌ನ ಡಾ| ಯತೀಂದ್ರ ಸಿದ್ದರಾಮಯ್ಯ, ಕುಸುಮಾ ಶಿವಳ್ಳಿ, ರಾಘವೇಂದ್ರ ಹಿಟ್ನಾಳ್‌, ಬೈರತಿ ಸುರೇಶ್‌, ಅಮರೇ ಗೌಡ ಬಯ್ನಾಪುರ, ಯಶವಂತ ರಾಯ ಗೌಡ ಪಾಟೀಲ್‌ ಕೂಡ ಪ್ರತಿಭಟನೆಗೆ ಮುಂದಾದರು. ಬಿಜೆಪಿಯ ಸಿದ್ದು ಸವದಿ, ಅರವಿಂದ ಬೆಲ್ಲದ ಕೂಡ ಸದನದ ಬಾವಿಗಿಳಿದು ಧರಣಿಗೆ ಬೆಂಬಲ ಸೂಚಿಸಿ ಸರಕಾರಕ್ಕೆ ಮುಜುಗರ ಉಂಟು ಮಾಡಿದರು.

Advertisement

ಮುಖ್ಯಮಂತ್ರಿ ಮೌನ
ಧರಣಿ ಸಂದರ್ಭ ಮುಖ್ಯ ಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಜ  ರಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದೇ ಮೌನ ವಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next