Advertisement

ಕ್ವಾರಂಟೈನ್‌ ಕೇಂದ್ರ ವಿರೋಧಿಸಿ ಪ್ರತಿಭಟನೆ

01:51 PM May 25, 2020 | Suhan S |

ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಕ್ವಾರಂಟೈನ್‌ ಕೇಂದ್ರ ಪ್ರಾರಂಭಿಸುತ್ತಿರುವುದನ್ನು ವಿರೋಧಿ ಸಿ ಗ್ರಾಮಸ್ಥರು ರವಿವಾರ ಪ್ರತಿಭಟನೆ ನಡೆಸಿದರು.

Advertisement

ಗ್ರಾಮದ ಹೂವಿನ ಶಿಗ್ಲಿ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಆಶ್ರಮ ಶಾಲೆಯಲ್ಲಿ ಮಹಾರಾಷ್ಟ್ರದಿಂದ ಬಂದವರಿಗೆ ಕ್ವಾರಂಟೈನ್‌ ವ್ಯವಸ್ಥೆ ಮಾಡಲು ತಾಲೂಕಾಡಳಿತ ಮುಂದಾಗಿದೆ. ವಿಷಯ ತಿಳಿದ ಗ್ರಾಮಸ್ಥರು ಈ ರಸ್ತೆ ಬಂದ್‌ ಮಾಡಿ ಆಶ್ರಮ ಶಾಲೆ ಮುಂದೆ ಮುಳ್ಳಿನ ಕಂಟಿಗಳನ್ನಿಟ್ಟು ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಜಿಪಂ ಸದಸ್ಯ ಎಸ್‌.ಪಿ. ಬಳಿಗಾರ ಅವರು, ಕ್ವಾರಂಟೈನ್‌ ಮಾಡುತ್ತಿರುವ ಆಶ್ರಮ ಶಾಲೆಗೆ ಹೊಂದಿಕೊಂಡಿರುವ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರವಾಗಿದೆ. ಸುತ್ತಮುತ್ತಲೂ ನೂರಾರು ಮನೆಗಳಿವೆ. ಸುಮಾರು 18 ಸಾವಿರ ಜನಸಂಖ್ಯೆ ಇರುವ ಗ್ರಾಮಕ್ಕೆ ಹೊಂದಿಕೊಂಡಿರುವ ಆಶ್ರಮ ಶಾಲೆಯಲ್ಲಿ ಕ್ವಾರಂಟೈನ್‌ ವ್ಯವಸ್ಥೆ ಮಾಡುತ್ತಿರುವುದರಿಂದ ಗ್ರಾಮದ ಜನರು ಆತಂಕ್ಕೀಡಾಗಿದ್ದಾರೆ. ಆದ್ದರಿಂದ ಇಲ್ಲಿ ಕ್ವಾರಂಟೈನ್‌ ಮಾಡುವುದು ಬೇಡ. ಈ ಕುರಿತು ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್‌ಗೆ ಮನವರಿಕೆ ಮಾಡಿ, ಮನವಿ ಸಲ್ಲಿಸಲಾಗುವುದು ಎಂದರು.

ಸ್ಥಳಕ್ಕಾಗಮಿಸಿದ ಪಿಎಸ್‌ಐ ಪಿ.ಎಂ. ಬಡಿಗೇರ, ಗ್ರಾಮಸ್ಥರು ವಿರೋಧ ಮಾಡುವುದಿದ್ದರೆ ಜಿಲ್ಲಾ ಧಿಕಾರಿ ಮತ್ತು ತಹಶೀಲ್ದಾರ್‌ಗೆ ಮನವಿ ಮಾಡಿಕೊಳ್ಳಿ. ಹೀಗೆ ರಸ್ತೆ ಬಂದ್‌ ಮಾಡುವುದು, ಮುಳ್ಳು ಹಚ್ಚುವುದು ಸರಿಯಲ್ಲ. ಯಾರೂ ಅಡ್ಡಿಪಡಿಸಬಾರದು ಎಂದು ಸೂಚಿಸಿದರು.

ಈ ಕುರಿತು ತಹಶೀಲ್ದಾರ್‌ ಭ್ರಮರಾಂಭ ಗುಬ್ಬಿಶೆಟ್ಟಿ ಅವರನ್ನು ಸಂಪರ್ಕಿಸಲಾಗಿ, ಜಿಲ್ಲಾಡಳಿತದ ಸೂಚನೆಯಂತೆ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗುತ್ತಿದೆ. ಉದ್ಯೋಗ ಅರಸಿ ಹೋದ ನಮ್ಮವರೇ ಈಗ ಮರಳಿ ಬರುತ್ತಿದ್ದಾರೆ. ಎಲ್ಲರ ಆರೋಗ್ಯ ರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದೆ. ಜನರ ಆರೋಗ್ಯದ ಕಾಳಜಿಯಿಂದಲೇ ಸರ್ಕಾರ ಕ್ವಾರಂಟೈನ್‌ ವ್ಯವಸ್ಥೆ ಮಾಡಿದ್ದು, ಸರ್ಕಾರದ ನಿಯಮಾವಳಿ ವಿರೋಧಿಸುವುದು ಕಾನೂನು ಬಾಹೀರವಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗವುದು ಎಂದರು.

Advertisement

ಪ್ರತಿಭಟನೆ ಸಂದರ್ಭದಲ್ಲಿ ಅಪ್ಪಣ್ಣ ನೂಲ್ವಿ, ರಾಜು ಓಲೇಕಾರ, ವೀರಣ್ಣ ಪವಾಡದ, ಮಂಜುನಾಥ ಶಂಭೋಜಿ, ಮಾಂತೇಶ ಬಡಿಗೇರ, ಜಹೀರಸಾಬ್‌ ಮತ್ತೂರ, ಬಸಣ್ಣ ಗೋದಿ, ಎನ್‌.ವಿ. ಕೊಳ್ಳಿ, ಸಿ.ಎಂ. ರಾಗಿ, ಬಿ.ಕೆ. ಕಾಳಪ್ಪನವರ, ಶಂಕ್ರಣ್ಣ ಅಣ್ಣಿಗೇರಿ, ವಿಜಯ ಪಾಟೀಲ, ಜಮೀರ ಅಗಡಿ, ಸಂತೋಷ ಕಲಾಲ, ಖಾಸಿಂ ಕೆರೂರ, ಈರಣ್ಣ ಹುಲಗೂರ, ಕುಬೇರಪ್ಪ ಅಣ್ಣಿಗೇರಿ ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next