Advertisement

ತೈಲೋತ್ಪನ್ನ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

11:03 AM Jul 08, 2020 | Suhan S |

ಹರಿಹರ: ಪೆಟ್ರೋಲ್‌, ಡೀಸೆಲ್‌ ಬೆಲೆ ಎರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಮಂಗಳವಾರ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ಫಕ್ಕೀರಸ್ವಾಮಿ ಮಠದಿಂದ ಪ್ರತಿಭಟನೆಯಲ್ಲಿ ಮಿನಿ ವಿಧಾನಸೌಧಕ್ಕೆ ಆಗಮಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್‌. ರಾಮಪ್ಪ, ಕೋವಿಡ್  ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಜನರ ನೆರವಿಗೆ ಬರುವ ಬದಲು ಗಾಯದ ಮೇಲೆ ಬರೆ ಎಳೆದಂತೆ ತೈಲೋತ್ಪನ್ನಗಳ ಬೆಲೆ ಏರಿಕೆ ಮಾಡಿರುವುದು ಖಂಡನೀಯ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಲ್‌.ಬಿ. ಹನುಮಂತಪ್ಪ ಮಾತನಾಡಿ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಕೋವಿಡ್  ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಮೂಲಕ ಜನ ಸಾಮಾನ್ಯರನ್ನು ಲೂಟಿ ಮಾಡಲು ಅವಕಾಶ ನೀಡುವುದಿಲ್ಲ. ಕೂಡಲೇ ಬೆಲೆ ಇಳಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಜಿಪಂ ಮಾಜಿ ಸದಸ್ಯ ಎನ್‌. ನಾಗೇಂದ್ರಪ್ಪ ಮಾತನಾಡಿದರು. ಮಲೇಬೆನ್ನೂರು ಬ್ಲಾಕ್‌ ಕಾಂಗ್ರೆಸ್‌ ಆಧ್ಯಕ್ಷ ಆಬೀದ್‌ ಅಲಿ, ನಗರಸಭಾ ಸದಸ್ಯರಾದ ಎಸ್‌.ಎಂ. ವಸಂತ್‌, ಮೊಹಮ್ಮದ್‌ ಅಲೀ, ಕೆ.ಜಿ. ಸಿದ್ದೇಶ್‌, ಶಂಕರ ಖಟಾವಕರ್‌, ಬಾಬುಲಾಲ್‌, ಮುಖಂಡರಾದ ಬಿ. ರೇವಣಸಿದ್ದಪ್ಪ, ಪರಶುರಾಮ ಕಾಟೆÌ, ಜಿಗಳಿ ಆನಂದಪ್ಪ, ಕೆ. ಜಡಿಯಪ್ಪ, ಜಿ.ವಿ. ವೀರೇಶ್‌, ತಿಪ್ಪೇಶ್‌, ನೇತ್ರಾವತಿ, ಭಾಗ್ಯದೇವಿ, ಪಾರ್ವತಿ, ವಿದ್ಯಾ ಗಡದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next