Advertisement

ಅದಾಗಲ್ಲ..ಅದಾಗ್ದಿದ್ರೆ ಯಾವುದು ಆಗಲ್ಲ:ರೈತರ ಪ್ರತಿಭಟನೆಯಲ್ಲಿ ಪ್ರಥಮ್

03:26 PM Mar 01, 2017 | Team Udayavani |

ಬೆಂಗಳೂರು: ವಿದೇಶಿ ಪಾನೀಯಗಳಾದ ಪೆಪ್ಸಿ ಕೋಕಾಕೋಲಾಗಳನ್ನು ಬಿಟ್ಟು ಎಳನೀರು ,ಮಜ್ಜಿಗೆ ಕಬ್ಬಿನ ಹಾಲು ಕುಡಿಯಿರಿ ಎಂದು ರೈತ ಪರ ಸಂಘಟನೆಗಳು ಬುಧವಾರ ನಗರದ ಟೌನ್‌ ಹಾಲ್‌ ಬಳಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಮಾಜಿ ಉಪಮುಖ್ಯಮಂತ್ರಿ ,ಬಿಜೆಪಿ ನಾಯಕ ಆರ್‌.ಅಶೋಕ್‌, ಬಿಗ್‌ಬಾಸ್‌ ವಿನ್ನರ್‌ ಪ್ರಥಮ್‌ ಸಾಥ್‌ ನೀಡಿದರು. 

Advertisement

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಥಮ್‌, ಪೋಷಕರು ಮಕ್ಕಳಿಗೆ ಪೆಪ್ಸಿ, ಕೋಕಾ ಕೋಲಾ ನೀಡಬೇಡಿ ಬದಲಾಗಿ ಎಳನೀರು ನೀಡಿ. ಸ್ಮೋಕಿಂಕ್‌ ಮತ್ತು ಡ್ರಿಂಕಿಂಗ್‌ನಷ್ಟೆ ವಿದೇಶಿ ಪಾನೀಯಗಳು ಹಾನಿಕಾರಕ, ಶರೀರವನ್ನು ಅಷ್ಟೇ ಹಾಳು ಮಾಡುತ್ತದೆ. ಇದರಿಂದ ಶರೀರದ ಕೆಲವು ಭಾಗಗಳು ತುಂಬಾ ನಿಷ್ಕ್ರೀಯವಾಗುತ್ತದೆ ಎಂದರು. ಅಷ್ಟು ವೇಳೆಗೆ ಪಕ್ಕದಲ್ಲಿದ್ದ ಅಶೋಕ್‌ ಅವರು ನರ್ವ್‌ ಸಿಸ್ಟಂ ಫೇಲ್‌ ಆಗುತ್ತದೆ ಎಂದರು. ಆಗ ಪ್ರಥಮ್‌ ಅದಾಗಲ್ಲ.. ಅದಾಗಲ್ಲ ಅಂದ್ರೆ ಯಾವುದು ಆಗಲ್ಲ ಎಂದರು. ಈ ವೇಳೆ ಪ್ರತಿಭಟನಾ ನಿರತರು ಗೊಳ್ಳನೆ ನಕ್ಕರು. 

ಆರ್‌ .ಅಶೋಕ್‌ ಮಾತನಾಡಿ  ಪೆಪ್ಸಿ ಕೋಲಾಗಳಿಂದ ನಮ್ಮ  ಮಕ್ಕಳ ಭವಿಷ್ಯ ಆರೋಗ್ಯ ಹಾಳಾಗುತ್ತಿದೆ. ಮುಂದಿನ ದಿನಗಳಲ್ಲಿ  ಮಜ್ಜಿಗೆ, ಎಳನೀರು ಬಳಸಬೇಕು. ಕೆಲವು ದೇಶಗಳಲ್ಲಿ ಅನಾಹುತಗಳಾಗಿರುವುದನ್ನು ಗಮನದಲ್ಲಿರಿಸಿ ನಾವು ಎಚ್ಚರಿಕೆ ವಹಿಸಬೇಕು ಎಂದರು. ಟ್ಯಾಕ್ಸ್‌ ಬರುವುದಿಲ್ಲ ಎಂದು ಸರ್ಕಾರಗಳು ವಿದೇಶಿ ಪಾನೀಯಗಳಿಗೆ ಬೆಂಬಲ ನೀಡಿದರೆ ನಮ್ಮ ಕಾವೇರಿ ನೀರು ಕುಡಿಯುವುದಕ್ಕಲ್ಲ ಸಂಪೂರ್ಣ ಪೆಪ್ಸಿ ಕೋಕಾಕೋಲಾಕ್ಕೆ ಹೊರಟುಹೋಗುತ್ತದೆ ಎಂದು ಆತಂಕ ವ್ಯಕ್ತ ಪಡಿಸಿದರು. 

ಪ್ರತಿಭಟನೆ ವೇಳೆ ಪೆಪ್ಸಿ ಕೋಕೋಕೋಲಾಗಳನ್ನು ರಸ್ತೆಗೆ ಚೆಲ್ಲಿ, ಎಳನೀರು, ಮಜ್ಜಿಗೆ, ಕಬ್ಬಿನ ಹಾಲನ್ನು  ವಿತರಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next