Advertisement

ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

09:56 AM Jun 12, 2021 | Team Udayavani |

ಬೀದರ: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪಕ್ಷದಿಂದ ಶುಕ್ರವಾರ “100 ನಾಟೌಟ್‌’ ಘೋಷ ವಾಕ್ಯದಡಿ ನಗರದ ಹತ್ತು ಕಡೆ ಪೆಟ್ರೋಲ್‌ ಬಂಕ್‌ಗಳ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಅಂಬೇಡ್ಕರ್‌ ವೃತ್ತ ಸಮೀಪದ ಪೆಟ್ರೋಲ್‌ ಬಂಕ್‌ ಹತ್ತಿರ ಕಾಂಗ್ರೆಸ್‌ ಜಿಲ್ಲಾ ಘಟಕ, ಮಹಾವೀರ ವೃತ್ತ ಹತ್ತಿರದ ಪೆಟ್ರೋಲ್‌ ಬಂಕ್‌ ಬಳಿ ಯುವ ಘಟಕ, ಬಸವೇಶ್ವರ ವೃತ್ತ ಸಮೀಪದ ಪೆಟ್ರೋಲ್‌ ಬಂಕ್‌ ಸಮೀಪ ಅಲ್ಪಸಂಖ್ಯಾತರ ಘಟಕ, ಶಿವನಗರದ ಪೆಟ್ರೋಲ್‌ ಬಂಕ್‌ ಬಳಿ ಮಹಿಳಾ ಘಟಕ, ಕೇಂದ್ರ ಬಸ್‌ ನಿಲ್ದಾಣ ಸಮೀಪ ಹಿಂದುಳಿದ ವರ್ಗಗಳ ಘಟಕ, ಜನವಾಡ ರಸ್ತೆಯ ಪೆಟ್ರೋಲ್‌ ಬಂಕ್‌ ಹತ್ತಿರ ಪರಿಶಿಷ್ಟ ಜಾತಿ ಘಟಕ, ಮೈಲೂರ ರಸ್ತೆಯ ಪೆಟ್ರೋಲ್‌ ಬಂಕ್‌ ಬಳಿ ಅಸಂಘಟಿತ ಕಾರ್ಮಿಕರ ಘಟಕ, ಓಲ್ಡ್‌ ಸಿಟಿಯಲ್ಲಿ ನಗರ ಘಟಕ, ಬೊಮ್ಮಗೊಂಡೇಶ್ವರ ವೃತ್ತ ಸಮೀಪದಪೆಟ್ರೋಲ್‌ ಬಂಕ್‌ ಹತ್ತಿರ ವಿದ್ಯಾರ್ಥಿಘಟಕ ಹಾಗೂ ಹೈದರಾಬಾದ್‌ ರಸ್ತೆಯಲ್ಲಿಪದವೀಧರರ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ತಲೆ ಮೇಲೆ ಟೊಪ್ಪಿಗೆ ಧರಿಸಿದ್ದ ಕಾರ್ಯಕರ್ತರು, ಕೈಯಲ್ಲಿ ಪಕ್ಷದ ಧ್ವಜ-ಫಲಕ ಹಿಡಿದಿದ್ದರು. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆ ಏರಿವೆ. ಜನಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ಆರೋಪಿಸಿದರು.

13 ತಿಂಗಳ ಅವ ಧಿಯಲ್ಲಿ ಪೆಟ್ರೋಲ್‌ ಬೆಲೆಯಲ್ಲಿ ಲೀಟರ್‌ಗೆ 25.72 ರೂ. ಹಾಗೂ ಡೀಸೆಲ್‌ ಬೆಲೆಯಲ್ಲಿ 23.93 ರೂ. ಹೆಚ್ಚಳ ಮಾಡಲಾಗಿದೆ. ಐದು ತಿಂಗಳಲ್ಲಿ 43 ಬಾರಿ ಬೆಲೆ ಏರಿಕೆ ಮಾಡಲಾಗಿದೆ. ಕೆಲವೆಡೆಲೀಟರ್‌ ಬೆಲೆ ನೂರರ ಗಡಿ ದಾಟಿದ್ದರೆ, ಇನ್ನು ಕೆಲವೆಡೆ ನೂರರ ಸನಿಹದಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಶಾಸಕ ರಹೀಂಖಾನ್‌, ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌ ಮಾತನಾಡಿದರು. ಈ ವೇಳೆ ಮಾಜಿ ಸಂಸದ ನರಸಿಂಗರಾವ್‌ ಸೂರ್ಯವಂಶಿ, ಮಾಜಿ ಎಂಎಲ್‌ಸಿ ಕೆ. ಪುಂಡಲೀಕರಾವ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಮುರಳಿಧರ ಎಕಲಾರಕರ್‌, ಅಮೃತರಾವ್‌ ಚಿಮಕೋಡೆ, ಎಂ.ಎ. ಸಮಿ, ಜಾರ್ಜ್‌ ಫರ್ನಾಂಡೀಸ್‌, ಶಂಕರರಾವ್‌ ದೊಡ್ಡಿ, ರೋಹಿದಾಸ್‌ ಘೋಡೆ, ಅಬ್ದುಲ್‌ ಮನ್ನಾನ್‌ ಸೇಠ್, ನಿಸಾರ್‌ ಅಹಮ್ಮದ್‌, ಫರೀದ್‌ಖಾನ್‌, ಮೀನಾಕ್ಷಿ ಸಂಗ್ರಾಮ, ಸಂಜುಕುಮಾರ ಡಿ.ಕೆ, ಅಜರ್‌ ರೆಹಾನ್‌, ಯುಸೂಫ್‌, ಶಂಕರ ರೆಡ್ಡಿ ಚಿಟ್ಟಾ,ಗೋವರ್ಧನ ರಾಠೊಡ್‌, ಜಾನ್‌ ವೆಸ್ಲಿ,ಬಸವರಾಜ, ಲತಾ ರಾಠೊಡ್‌, ಸುಧಾಕರ ಕೊಳ್ಳೂರ, ಶಾಮರಾವ್‌ ಬಂಬಳಗಿ, ಮಿಸ್ಬಾ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next