Advertisement

ಮುರುಘಾ ಶರಣರ ವಿರುದ್ಧ ಪ್ರತಿಭಟನೆ

02:54 PM Sep 03, 2022 | Team Udayavani |

ಚಿಂಚೋಳಿ: ಚಿತ್ರದುರ್ಗ ಮುರುಘಾ ಶರಣರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕಿನ ದಲಿತ ಮತ್ತು ವಿದ್ಯಾರ್ಥಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಮುಖಂಡ ಮಾರುತಿಗಂಜಗಿರಿ ಮಾತನಾಡಿ, ಅನ್ಯಾಯಕ್ಕೊಳಗಾದ ಮಕ್ಕಳು ಖುದ್ದಾಗಿ ತಮಗಾದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಇದರ ನೈಜತೆ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನಾಕಾರರು ಬೇಡಿಕೆಗಳ ಮನವಿಪತ್ರವನ್ನು ತಹಶೀಲ್ದಾರ್‌ ಅಂಜುಮ ತಬಸುಮಗೆ ಸಲ್ಲಿಸಿದರು. ಅನ್ಯಾಯಕೊಳ್ಳಗಾದ ಮತ್ತು ದೂರು ನೀಡಿದ ಮಕ್ಕಳಿಗೆ ಸರ್ಕಾರ ಪ್ರತ್ಯೇಕವಾಗಿ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ದಲಿತ ವಿದ್ಯಾರ್ಥಿನಿ ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡಬೇಕು. ದೌರ್ಜನ್ಯಕ್ಕೊಳಗಾದ ಕುಟುಂಬಗಳಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು. ಪ್ರಕರಣವನ್ನು ಸಿಬಿಐ ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಅಜರೋದ್ದಿನ್‌ ಸೌದಾಗರ, ಗೋಪಾಲ ಗಾರಂಪಳ್ಳಿ, ವಾಮನರಾವ ಕೊರವಿ, ಪ್ರದೀಪ ಮೇತ್ರಿ, ಶ್ರೀನಿವಾಸ ತಾಜಲಪುರ, ಅಜರೋದ್ದಿನ್‌ ಎಂ.ಎಂ, ಕೆ. ಸುಭಾಷ ತಾಡಪಳ್ಳಿ, ಮೋಹನ ಐನಾಪುರ, ವಿಜಯ ತಾಡಪಳ್ಳಿ, ಪುಟ್ಟರಾಜ ತಾಡಪಳ್ಳಿ, ಗೋಪಾಲ ಎಂ.ಪಿ, ಮೌನೇಶ ಗಾರಂಪಳ್ಳಿ, ಉಲ್ಲಾಸ ಕೆರಳ್ಳಿ, ಸಿದ್ಧಲಿಂಗ ಮೇತ್ರಿ, ರಾಮಲಿಂಗ, ಮೆಹೆಬೂಬ್‌ ಅಲಿ, ಗುರುನಾಥ ಅಂಕಿತಾ ಕಮಲಕರ್‌ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next