ಗುಂಡ್ಲುಪೇಟೆ: ತಾಲೂಕಿನ ಬೆಟ್ಟದ ಮಾದಹಳ್ಳಿ ಗ್ರಾಮದ ಬಳಿ ಇರುವಬೆಟ್ಟದಲ್ಲಿ ಗಣಿಗಾರಿಕೆಗೆ ಅವಕಾಶಮಾಡಿಕೊಡಬಾರದು, ಒಂದು ವೇಳೆ ನೀಡಿದರೆ ಸಾಮೂಹಿಕ ಆತ್ಮಹತ್ಯೆಮಾಡಿಕೊಳ್ಳುತ್ತೇವೆ ಎಂದು ಗ್ರಾಮಸ್ಥರು ಪ್ರತಿಭಟಿಸಿ, ಎಚ್ಚರಿಸಿದರು.
ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಓಂಕಾರ್ ಅರಣ್ಯ ವಲಯದಕಾಡಂಚಿನಲ್ಲಿರುವ ಬೆಟ್ಟದಮಾದಹಳ್ಳಿಸರ್ವೆ ನಂ.37 ರಲ್ಲಿ ಗಣಿಗಾರಿಕೆ ಮಾಡಲುಪ್ರಯತ್ನಿಸಲಾಗುತ್ತಿದೆ. ಒಂದು ವೇಳೆ ಈಭಾಗದಲ್ಲಿ ಗಣಿಗಾರಿಕೆ ನಡೆದರೆ ಪರಿಸರಕ್ಕೆಹಾಗೂ ರೈತರಿಗೆ ತೊಂದರೆ ಆಗುತ್ತದೆ.ಬೆಟ್ಟದ ಬಳಿ ಇರುವ ಕಾರಣದಿಂದಗ್ರಾಮಕ್ಕೆ ಬೆಟ್ಟದ ಮಾದಹಳ್ಳಿ ಎಂಬಹೆಸರು ಬಂದಿದೆ. ಇಂತಹ ಇತಿಹಾಸವನ್ನುನಾಶ ಪಡಿಸಬಾರದು ಎಂದು ಜನ ಒತ್ತಾಯಿಸಿದರು.
ಬೆಟ್ಟದ ಸುತ್ತಲೂ ನೂರಾರು ರೈತರು ವ್ಯವಸಾಯ ಮಾಡುತ್ತಿದ್ದಾರೆ. ಈ ಬೆಟ್ಟದಲ್ಲಿಕರಡಿ, ಚಿರತೆ, ಸೀಳು ನಾಯಿ, ಆನೆಗಳು,ಜಿಂಕೆ, ನವಿಲುಗಳು ವಾಸಿಸುತ್ತಿವೆ.ಗಣಿಗಾರಿಕೆಯಿಂದ ಇವುಗಳ ಸಹಜಜೀವನಕ್ಕೆ ತೊಂದರೆ ಆಗುತ್ತದೆ. 2012ರಲ್ಲಿಅಕ್ರಮವಾಗಿ ಗಣಿಗಾರಿಕೆ ನಡೆಸಿದಪರಿಣಾಮ, ಮಜ್ಜಿಗೆ ದೋಣಿ, ವಜ್ರದದೋಣಿ ಎಂಬ ಎರಡು ಬಂಡೆ ನಾಶವಾಗಿ ಅಂತರ್ಜಲ ಕುಸಿತಗೊಂಡಿದೆ. ಈ ಬಗ್ಗೆ ಹಿಂದೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಗಣಿಗಾರಿಕೆ ಸ್ಥಗಿತಗೊಳಿಸಲಾಗಿತ್ತು ಎಂದು ಹೇಳಿದರು.
ಗಣಿಗಾರಿಕೆಯಿಂದ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಬೀದಿಗೆ ಬೀಳಬೇಕಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು, ತಪ್ಪಿದಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.
ಗ್ರಾಮಸ್ಥರಾದ ಪ್ರಭುದೇವ, ಷಣ್ಮುಗ ಸ್ವಾಮಿ, ಪರಶಿವಮೂರ್ತಿ, ಬಸವರಾಜು, ಮಹದೇವಯ್ಯ, ನಾಗಮಲ್ಲಪ್ಪ, ಶಾಂತಪ್ಪ, ಮಹೇಶ್ ಇತರರು ಇದ್ದರು.