ವಿಜಯಪುರ: ಚನ್ನರಾಯಪಟ್ಟಣದಲ್ಲಿ ನಡೆಯುತ್ತಿರುವ ಭೂಸ್ವಾಧೀನ ವಿರೋಧಿ ಧರಣಿ 52ನೇ ದಿನಕ್ಕೆ ಕಾಲಿಟ್ಟಿದ್ದು, ನವ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಬೆಂಬಲ ಸೂಚಿಸಿದರು.
ಈ ವೇಳೆ ನವ ಕರ್ನಾಟಕ ರೈತ ಸಂಘದ ಅಧ್ಯಕ್ಷ ವಸಂತ್ ಪಾಟೀಲ್ ಮಾತನಾಡಿ, ನಿವೃತ್ತ ನ್ಯಾ. ವಿ. ಗೋಪಾಲಗೌಡರು ರೈತರ ಜತೆಗಿರುವುದಾಗಿ ಹೇಳಿರುವುದು ನಮಗೆ ಶಕ್ತಿಇಮ್ಮಡಿಗೊಳಿಸಿದೆ. ಇಲ್ಲಿಗೆ ಬಂದು ಹೋಗಿ ರುವ ರೈತಪರ, ದಲಿತ ಪರ, ಕಾರ್ಮಿಕ ಪರಮುಖಂಡರು ಸಾಮಾನ್ಯ ದವರಲ್ಲ. ಅವರು ಮನಸ್ಸು ಮಾಡಿದರೆ ಇಡೀ ಸರ್ಕಾರ ಅಲುಗಾಡುತ್ತದೆ ಎನ್ನುವ ಎಚ್ಚರ ಸರ್ಕಾರ ನಡೆಸುವವರಿಗಿರಬೇಕು ಎಂದರು.
ಯೋಜನೆ ಕೈಬಿಡಿ: ಸರ್ಕಾರ ರೈತರ ಭೂಮಿಯ ಕಳ್ಳತನ ಮಾಡಲು ಹೊರಟಿದೆ. ಇಲ್ಲಿನ ನೂರಾರು ರೈತ ಕುಟುಂಬ ಬದುಕು ಕಳೆದುಕೊಳ್ಳುವ ಈ ಯೋಜನೆ ಕೈ ಬಿಡಲೇಬೇಕು.ಕೈಗಾರಿಕೆಗಳಲ್ಲಿ ಕೆಲಸ ಕೊಡು ವುನೆಂದು ಹೇಳಿದ ಸರ್ಕಾರ ಎಷ್ಟುಜನಕ್ಕೆ ಕೆಲಸ ಕೊಟ್ಟಿದೆ ಎನ್ನುವುದು ನಮಗೆ ತಿಳಿದಿದೆ. ವಶಪಡಿಸಿಕೊಂಡಿ ರುವ ಸುಮಾರು ಭೂಮಿ ಖಾಲಿ ಬಿದ್ದಿದೆ.ಹೊಸ ದಾಗಿ ಈ ಭೂಮಿ ಯಾಕೆ ಬೇಕು ಎಂದು ಪ್ರಶ್ನಿಸಿದರು.
ಮುಖಂಡ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಬ್ರಿಟಿಷ್ ಸರ್ಕಾರ ನಮ್ಮನ್ನು ಸುಮಾರು ವರ್ಷ ಆಳ್ವಿಕೆ ಮಾಡಿ, ಕೊನೆಗೆ ಭೂಮಿಯನ್ನಾದರೂ ಬಿಟ್ಟು ಹೋದರು. ಆದರೆ, ಈಗಿನ ಬ್ರಿಟಿಷ್ ಸಂತತಿಯಂತಿರುವ ಸರ್ಕಾರ ಇಲ್ಲೇ ಉಂಡು, ತಿಂದು, ಕೊನೆಗೆ ಭೂಮಿ ಬಿಡದೆ ಬೇರೆಯವರಿಗೆ ಮಾರಿ ನಮ್ಮನ್ನು ಬೀದಿಗೆ ತಂದು ನಿಲ್ಲಿಸುತ್ತಿದ್ದಾರೆ. ನಾವು ಅವರನ್ನು ನಮ್ಮ ತಾಲೂಕಿನೊಳಗೆ ಬಿಟ್ಟುಕೊಂಡಿದ್ದೆ ತಪ್ಪಾಯಿತು ಎಂದರು.
ಚನ್ನರಾಯಪಟ್ಟಣ ಗ್ರಾಪಂ ಅಧ್ಯಕ್ಷ ಮಂಜುನಾಥ್, ರೈತ ಮುಖಂಡ ಮಾರೇಗೌಡ, ನವ ಕರ್ನಾಟಕ ರೈತ ಸಂಘದ ಸುರೇಶ್‌ಗೌಡ, ಎಂ.ಡಿ. ಜಗದೀಶ್, ರಾಜು, ನಾಗರಾಜು, ರೈತ ಮುನಿರಾಜ್, ದೇವರಾಜ್, ನಂಜೇಗೌಡ, ಗೋಪಾಲಪ್ಪ, ಪುನೀತ್, ನಂಜಣ್ಣ, ಮುಕುಂದ, ವೆಂಕಟೇಶ್, ನಾರಾಯಣಮ್ಮ ಇದ್ದರು.