Advertisement

Ottawa: ವಲಸೆ ನೀತಿ ವಿರುದ್ಧ ಪ್ರತಿಭಟನೆ: ಕೆನಡಾದಿಂದ 70000 ವಿದ್ಯಾರ್ಥಿಗಳ ಗಡಿಪಾರು?

09:07 PM Aug 27, 2024 | Team Udayavani |

ಒಟ್ಟಾವಾ: ವಲಸೆ ನೀತಿಯಲ್ಲಿ ಉಂಟಾದ ಬದಲಾವಣೆಯಿಂದಾಗಿ ಸುಮಾರು 70,000 ವಿದ್ಯಾರ್ಥಿಗಳನ್ನು ಗಡಿಪಾರು ಮಾಡಲು ನಿರ್ಧರಿಸಲಾಗಿದೆ. ಹೊಸ ಜೀವನ ಕಟ್ಟಿಕೊಳ್ಳುವುದಕ್ಕಾಗಿ ಕೆನಡಾಗೆ ಪ್ರಯಾಣಿಸಿದ್ದ ವಿದ್ಯಾರ್ಥಿಗಳಿಗೆ ಈ ನಿರ್ಧಾರ ಸಮಸ್ಯೆ ಉಂಟು ಮಾಡಿದ್ದು, ಇದನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ಆರಂಭಿಸಿದ್ದಾರೆ.

Advertisement

ಕೆನಡಾದಲ್ಲಿ ಭಾರತದ ಹಲವು ವಿದ್ಯಾರ್ಥಿಗಳೂ ಇದ್ದು, ಅವರೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ದೇಶದ ಪ್ರತಿ ನಗರಗಳಲ್ಲೂ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತಿದ್ದು, ಪ್ರಧಾನಿ ಜಸ್ಟಿನ್‌ ಟ್ರೂಡೋ ಅವರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಕೆನಡಾಗೆ ಬರಲು ಸಾಕಷ್ಟು ಅಪಾಯಗಳನ್ನು ಎದುರಿಸಿ 6 ವರ್ಷಗಳನ್ನು ಕಳೆದಿದ್ದೇನೆ. ನಾನು ಇಲ್ಲಿ ಅಧ್ಯಯನ ಮಾಡಿದೆ. ಕೆಲಸ ಮಾಡಿದೆ. ತೆರಿಗೆ ಪಾವತಿಸಿದೆ. ನಮ್ಮಿಂದ ಸರ್ಕಾರ ಲಾಭ ಗಳಿಸಿಕೊಂಡಿದ್ದರೂ ಈಗ ಹೊರ ಹಾಕುವ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಅಂತಾರಾಷ್ಟ್ರೀಯ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next