Advertisement

“ಕೋಡಿಹಳ್ಳಿ’ಭ್ರಷ್ಟಾಚಾರ ಖಂಡಿಸಿ ಪ್ರತಿಭಟನೆ

03:48 PM May 28, 2022 | Team Udayavani |

ಅರಸೀಕೆರೆ: ರಾಜ್ಯ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಹಗರಣ ಖಂಡಿಸಿ,ರಾಜ್ಯದಿಂದ ಗಡಿಪಾರು ಮಾಡುವಂತೆ ತವರೂರುಅರಸೀಕೆರೆಯಲ್ಲಿ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ಬೃಹತ್‌ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ವಿದ್ಯಾ ವಿಭಾ ರಾಥೋಡ್‌ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕೋಡಿಹಳ್ಳಿ ಚಂದ್ರಶೇಖರ್‌ ಹಗರಣಗಳ ಬಗ್ಗೆಮಾಧ್ಯಮಗಳಲ್ಲಿ ಸುದ್ದಿಗಳು ಪ್ರಸಾರವಾಗುತ್ತಿರುವಹಿನ್ನೆಲೆ ಚಂದ್ರ ಶೇಖರ್‌ ಹುಟ್ಟೂರು ಅರಸೀಕೆರೆ ತಾಲೂಕಿನ ಕೋಡಿಹಳ್ಳಿ ರಾಜ್ಯದಲ್ಲಿ ಎಂಬುದುಎಷ್ಟೋ ಜನರಿಗೆ ತಿಳಿದಿಲ್ಲ. ತಮ್ಮ ತವರೂರಿಗೆ ಕೆಟ್ಟಹೆಸರು ತಂದಿರುವ ಚಂದ್ರಶೇಖರ್‌ ಭ್ರಷ್ಟ ಕೃತ್ಯ ಖಂಡಿಸಿ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ತಾಲೂಕು ಘಟಕದ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೂ ರಾಷ್ಟ್ರೀಯ ಹೆದ್ದಾರಿ ಬಿ.ಎಚ್‌.ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಹಾಸನ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೋರನಕೊಪ್ಪಲು ಶಿವಲಿಂಗಪ್ಪ ಮಾತನಾಡಿ, ರಾಜ್ಯ ರೈತ ಸಂಘದ ಅಧ್ಯಕ್ಷರಾಗಿದ್ದ ಪ್ರೋ.ನಂಜುಂಡ ಸ್ವಾಮಿ ನೇತೃತ್ವದ ಸಂಘವು ತನ್ನದೇ ಘನತೆ ಗೌರವಕಾಪಾಡಿಕೊಂಡು ಬಂದಿತ್ತು. ಕೋಡಿಹಳ್ಳಿ ಚಂದ್ರ ಶೇಖರ್‌ ಮುಖಂಡತ್ವದಲ್ಲಿ ನಾವುಗಳು ಅಂದಿನ ದಿನಗಳ ಹೋರಾಟದಲ್ಲಿ ಕೈ ಜೋಡಿಸಿ ಭಾಗಿಯಾಗಿ ಆತನನ್ನು ರೈತಸಂಘದ ಮುಖಂಡನನ್ನಾಗಿ ಬೆಳೆಸಿದ್ದೇವು.

ತಾಲೂಕಿಗೆ ಕಪ್ಪು ಚುಕ್ಕೆ: ನಾವುಗಳೇ ಸಾಕಿ ಬೆಳೆಸಿದ ರಾಜ್ಯ ನಾಯಕ ಈಗ ಮಾಡಿರುವ ಭ್ರಷ್ಟಾಚಾರಗಳಸರಮಾಲೆಗಳು ನಮ್ಮ ತಾಲೂಕಿಗೆ ಕಪ್ಪು ಚುಕ್ಕೆಯಾಗಿದೆ. ರೈತರಿಗಾಗಿ ಮೀಸಲಾಗಿದ್ದ ರೈತ ಸಂಘದ ಹೆಸರನ್ನು ದುರುಪಯೋಗ ಮಾಡಿಕೊಂಡು ರೈತಕುಲವನ್ನು ಬೀದಿಗೆಳೆದಿದ್ದಾರೆ. ನ್ಯಾಯ ಕೊಡಿಸುವನೆಪದಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರಿಗೆ ಅನ್ಯಾಯ ಮಾಡಿದ್ದಾನೆ. 35 ಕೋಟಿರೂ.ಹಣವನ್ನು ಅಮಾಯಕ ನೌಕರರಿಂದ ವಸೂಲು ಮಾಡಿರುವ ಚಂದ್ರಶೇಖರ್‌ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿಯನ್ನು ದಾರಿ ತಪ್ಪಿಸಿದರು.

ಪರಿಣಾಮ 3360 ನೌಕರರು ಕೆಲಸ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. 28 ನೌಕರರನ್ನು ಬಲಿ ತೆಗೆದುಕೊಂಡಿದ್ದಾರೆ. ಅಮಾಯಕ ನೌಕರರನ್ನು ದಾರಿ ತಪ್ಪಿಸಿದ್ದಲ್ಲದೇ ತನ್ನ ಕುಟುಂಬದ ಸದಸ್ಯರೊಂದಿಗೆ ಐಷಾರಾಮಿಯಾಗಿ ವಿದೇಶಿ ಪ್ರವಾಸ ಮಾಡಿರುವುದು ಈತನ ವೈಭವ ಜೀವನವನ್ನು ಬಿಂಬಿಸುತ್ತಿದೆ.

Advertisement

ಗಡಿಪಾರು ಮಾಡಿ: ರೈತರ ಹೆಸರಿನಲ್ಲಿ ಐಷಾರಾಮಿ ಬದುಕನ್ನು ಸಾಗಿಸುತ್ತಿರುವ ಈತನನ್ನು ಸೆರೆಮನೆಗೆಹಾಕಿ ಮುಂದಿನ ದಿನಗಳಲ್ಲಾದರೂ ಅಮಾಯಕರೈತರು ಮತ್ತು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿನೌಕರರು ನೆಮ್ಮದಿ ಜೀವನ ಸಾಗಿಸಲು ಕ್ರಮ ತೆಗೆದುಕೊಳ್ಳಬೇಕು. ಈ ರಾಜ್ಯದ ರೈತರು ನೆಮ್ಮದಿಯಾಗಿರಬೇಕಾದರೆ ಇಂತಹ ಭ್ರಷ್ಟ ವ್ಯಕ್ತಿಯನ್ನುಕರ್ನಾಟಕ ರಾಜ್ಯದಿಂದ ಗಡಿಪಾರು ಮಾಡ ಬೇಕೆಂದರು.

ಈ ಸಂದರ್ಭದಲ್ಲಿ ರೈತ ಸಂಘ ತಾಲೂಕು ಅಧ್ಯಕ್ಷ ಶಿವಮೂರ್ತಿ, ಕಾರ್ಯದರ್ಶಿಮಲ್ಲಿಕಾರ್ಜುನ್‌, ಮಾಗೇನಹಳ್ಳಿ , ಮುದ್ದನಹಳ್ಳಿಮಂಜನಾಥ, ಜಗದೀಶ್‌ ಅಣ್ಣಾಯಕನಹಳ್ಳಿನವೀನ್‌ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವೈಭವ ಜೀವನ: ತನಿಖೆ ನಡೆಸಿ :

ಹುಟ್ಟೂರಿನಲ್ಲಿ ಇದ್ದಂತಹ ಸಮಯದಲ್ಲಿ ಆತನಿಗೆ ಒಂದು ಹೊತ್ತಿನ ಊಟಕ್ಕೂ ಗತಿ ಇರಲಿಲ್ಲ. ಅಂತಹ ಸಮಯದಲ್ಲಿ ರೈತಸಂಘದ ಸದಸ್ಯರು ಕೈಲಾದಂತಹ ಸಹಾಯ ಮಾಡಿದ್ದಾರೆ. ಕಡುಬಡತನದಿಂದ ಬಂದಂತಹ ಕೋಡಿಹಳ್ಳಿ ಚಂದ್ರಶೇಖರ್‌ಪ್ರಸ್ತುತ ದಿನಗಳಲ್ಲಿ ಐಷಾರಾಮಿ ಜೀವನ ಸಾಗಿಸುತ್ತಿರುವ ಬಗ್ಗೆ ಸರ್ಕಾರವು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next