Advertisement

ಕೇಂದ್ರದಿಂದ ತಪ್ಪು ಹೆಜ್ಜೆ: ಶಾಸಕ ನಾರಾಯಣಸ್ವಾಮಿ

05:38 PM Dec 09, 2020 | Suhan S |

ಬಂಗಾರಪೇಟೆ: ಕೇಂದ್ರ ಸರ್ಕಾರ ಹಲವು ತಪ್ಪು ಹೆಜ್ಜೆ ಗಳನ್ನು ಇಡುವ ಮೂಲಕ ರೈತರನ್ನು ಹಾಗೂ ಕಾರ್ಮಿಕ ವರ್ಗವನ್ನು ಕತ್ತಲಲ್ಲಿ ಇಟ್ಟಿದ್ದು, ಪ್ರಧಾನಿ ಮೋದಿ ದೇಶದ ಜನರಿಗೆ ಕೊಟ್ಟ ಮಾತಿನಂತೆ ನಡೆದು ಕೊಳ್ಳದೇ ವಚನ ಭ್ರಷ್ಟರಾಗಿದ್ದಾರೆಂದು ಶಾಸಕ ಎಸ್‌. ಎನ್‌.ನಾರಾಯಣಸ್ವಾಮಿ ಟೀಕಿಸಿದರು.

Advertisement

ಜಿಲ್ಲಾ ಕಾಂಗ್ರೆಸ್‌ ಸಮಿತಿಯು ಪಟ್ಟಣದ ವಿವಿಧ ಸಂಘಟನೆಗಳ ಕಾರ್ಯಕರ್ತರೊಂದಿಗೆ ಕೋಲಾರ ರಸ್ತೆಯಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಯಿಂದ ಮೆರವಣಿಗೆ ಮೂಲಕ ಆಸ್ಪತ್ರೆ ವೃತ್ತದಲ್ಲಿ ರಸ್ತೆ ತಡೆದು ಅರ್ಧ ಗಂಟೆ ಪ್ರತಿಭಟನೆ ಮಾಡಿದರು. ಈ ವೇಳೆ ಪ್ರತಿಭಟನಾಕಾರರನ್ನುಉದ್ದೇಶಿಸಿ ಮಾತನಾಡಿದ ಶಾಸಕರು, ದೇಶದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದರೆ ಮಾತ್ರ ಎಲ್ಲಾ ವರ್ಗದ ಜನರು ಸುಭೀಕ್ಷೆಯಿಂದಿರಲು ಸಾಧ್ಯ ಎಂದರು. ಬಂದ್‌ಗೆ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆವ್ಯಕ್ತವಾಯಿತು.ಹೊಸಕೃಷಿಕಾಯ್ದೆಯನ್ನು ಜಾರಿಗೆ ತರಬಾರದೆಂದು ರೈತ ಸಂಘಟನೆಗಳು ಭಾರತ ಬಂದ್‌ಗೆ ಕರೆ ನೀಡಿದ್ದು, ತಾಲೂಕಿನಲ್ಲಿಯೂ ಕಾಂಗ್ರೆಸ್‌, ಸಿಪಿಎಂ, ಸಿಪಿಐ, ಸಿಂಹ ಗರ್ಜನೆ, ದಲಿತಸಮಾಜಸೇನೆ ಸೇರಿದಂತೆ ಹಲವು ಸಂಘನೆಗಳುಬಂದ್‌ಗೆಬೆಂಬಲಸೂಚಿಸಿದವು.ಬಂದ್‌ಪ್ರತಿಭಟನೆಗೆ ಮಾತ್ರ ಸೀಮಿತವಾಗಿತ್ತು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ. ಚಂದ್ರಾರೆಡ್ಡಿ, ಪುರಸಭೆ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷೆಪೊನ್ನಿ ರಮೇಶ್‌, ಸದಸ್ಯರಾದ ಪ್ರಭಾಕರ್‌, ಸಾದಿಕ್‌, ಸುಹೇಲ್‌, ಗೋವಿಂದ, ಕುಂಬಾರಪಾಳ್ಯ ಮಂಜುನಾಥ್‌, ರೇಣುಕಾ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಎ. ಪಾರ್ಥಸಾರಥಿ, ಒಬಿಸಿ ಕಾಂಗ್ರೆಸ್‌ ಘಟಕದ ಅಧ್ಯಕ್ಷ ರೈಲ್ವೆ ಮಂಜುನಾಥ್‌, ಬೂದಿಕೋಟೆ ಶೋಭನ್‌ ಬಾಬು, ಟಿಎಪಿಸಿಎಂಎಸ್‌ ಉಪಾಧ್ಯಕ್ಷ ಟಿ.ಎನ್‌. ರಾಮೇಗೌಡ, ರೈತ ಸಂಘದ ಮರಗಲ್‌ ಶ್ರೀನಿವಾಸ್‌,ಕರವೇ ಚಲಪತಿ, ಪ್ರಸನ್ನಕುಮಾರಸ್ವಾಮಿ, ಮುದಾಸೀರ್‌, ಅಯ್ಯಮಂಜು ಹಾಜರಿದ್ದರು.

 ರೈಲ್ವೆ ಅಧಿಕಾರಿಗಳಿಗೆ ಮನವಿ :

ಬಂಗಾರಪೇಟೆ: ಭಾರತ್‌ ಬಂದ್‌ ಪ್ರಯುಕ್ತ ನೂತನ ಕಾಯ್ದೆಗಳ ಬಗ್ಗೆ ಚರ್ಚೆ ಮಾಡಲು ವಿಶೇಷಸಂಸತ್‌ ಅಧಿವೇಶನ ಕರೆಯಬೇಕು. ಯಾವುದೇಷರತ್ತುಗಳಿಲ್ಲದೆ ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ರೈತ ಸಂಘದಿಂದ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ, ರೈಲ್ವೆ ಅಧಿಕಾರಿಗಳಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ದೆಹಲಿ ಚಲೋ ರೈತರು ಬೆಂಬಲಿಸಿ ಭಾರತ್‌ ಬಂದ್‌ ಪ್ರಯುಕ್ತ ಹೋರಾಟ ಮಾಡಿ ಯಾವುದೇ ಕಾಯ್ದೆ ಜಾರಿಗೆ ತರಬೇಕಾದರೆಆಯಾ ರಾಜ್ಯದ ಮುಖ್ಯಮಂತ್ರಿಗಳು, ಜನಪ್ರತಿನಿಧಿಗಳು, ಜನರ ಅಭಿಪ್ರಾಯದ ವರದಿ ನಂತರ ಕಾನೂನು ತಜ್ಞರು ಮತ್ತು ಕಾಯ್ದೆಗೆ ಸಂಬಂಧಪಟ್ಟ ನುರಿತ ಅಧಿಕಾರಿಗಳ ಅಭಿಪ್ರಾಯದ ನಂತರ ಜಾರಿಗೆ ಬರಬೇಕು ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐತಾಂಡಹಳ್ಳಿ ಮುನ್ನಾ ಮಾತನಾಡಿ, ರೈತರ ನ್ಯಾಯಯುತ ಬೇಡಿಕೆಗಳನ್ನು ಯಾವುದೇ ಷರತ್ತುಬದ್ಧ ನಿಯಮ ಇಲ್ಲದೇ ಪ್ರಧಾನ ಮಂತ್ರಿಗಳು ಹೋರಾಟದ ಸ್ಥಳಕ್ಕೆ ಬಂದು ಮಾತುಕತೆ ನಡೆಸಬೇಕೆಂದು ಆಗ್ರಹಿಸಿದರು. ಹೋರಾಟದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್‌, ಸ್ವಸ್ತಿಕ್‌ ಶಿವು, ಮೊಹಮದ್‌ ಶಯೂಬ್‌, ಹಸಿರು ಸೇನೆ ತಾಲೂಕುಅಧ್ಯಕ್ಷ ಚಾಂದ್‌ಪಾಷ, ಕಿರಣ್‌, ಜಮೀರ್‌, ಜಾವೀದ್‌, ನವಾಜ್‌ಪಾಷ, ಗೌಸ್‌ಪಾಷ, ಬಾಬಾ ಜಾನ್‌ ವಟ್ರಕುಂಟೆ ಆಂಜಿ, ಮಂಜುನಾಥ್‌,ಸುಪ್ರೀಂ ಚಲ, ಶಿವು, ಸುನೀಲ್‌, ವಿನೋದ್‌, ಅನಿಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next