Advertisement
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜನಾಂದೋಲನ ಮಹಾಮೈತ್ರಿ ದಲಿತ ಸಂಘಟನೆ, ಸ್ವರಾಜ್ ಇಂಡಿಯಾ ಸಹಯೋಗದೊಂದಿಗೆ ಬುಧವಾರ ನಡೆದ ಧರಣಿಯಲ್ಲಿ ಅಖೀಲ ಭಾರತ ಯುವಜನ ಮಹಿಳಾ ಸಂಘ, ಅಖೀಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘ ಮತ್ತಿತರರ ಸಂಘಟನೆಗಳು ಪಾಲ್ಗೊಂಡರು ಸಾಥ್ ನೀಡಿದವು.
Related Articles
Advertisement
ಮೈಸೂರು: ಕನ್ನಡ ಪರ ಸಂಘಟನೆಗಳು ಡಿ.5 ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೆಂಬಲ ನೀಡದಿರಲು ಮೈಸೂರು ಉದ್ಯಮ ಸಂಘಗಳ ಒಕ್ಕೂಟವು ನಿರ್ಧಾರಿಸಿದೆ.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳುಮಾತನಾಡಿ, ಈಗಾಗಲೇ ಕೊರೊನಾ ಹೊಡೆತದಿಂದ ನೆಲಕಚ್ಚಿರುವ ಪ್ರವಾಸೋದ್ಯಮ ಸೇರಿದಂತೆ ಎಲ್ಲಾ ಉದ್ದಿಮಗಳು ಈಗ ತಾನೆ ಚಿಗುರೊಡೆಯುತ್ತಿವೆ.ಚೇತರಿಸಿಕೊಳ್ಳುವ ಸಮಯದಲ್ಲಿ ಬಂದ್‌ಗೆ ಕರೆನೀಡಿರುವುದು ಸರಿಯಲ್ಲ. ಕನ್ನಡ ನಾಡು ನುಡಿ, ಭಾಷೆಮತ್ತು ಜಲಕ್ಕೆ ಸಂಬಂಧಿಸಿದಂತೆ ಹೋರಾಟಕ್ಕೆ ಬದ್ಧವಾಗಿದ್ದೇವೆ. ಬಂದ್ ಉದ್ದೇಶವನ್ನು ಬೆಂಬಲಿಸುತ್ತೇವೆ. ಆದರೆ, ಸಂಕಷ್ಟ ಪರಿಸ್ಥಿತಿಯಲ್ಲಿ ಬಂದ್ ನಡೆಸುತ್ತಿರುವುದಕ್ಕೆ ನಮ್ಮ
ವಿರೋಧವಿದೆ.ಹೀಗಾಗಿಮೈಸೂರಿನಲ್ಲಿ ಟ್ಯಾಕ್ಸಿಟ್ರಾವೆಲ್ಸ್, ಹೋಟೆಲ್, ಬಸ್, ಪೆಟ್ರೋಲ್ ಬಂಕ್, ಮಾರುಕಟ್ಟೆ ಸೇರಿದಂತೆ ಹಲವು ಸೇವೆ ಎಂದಿನಂತೆ ಮುಂದುವರಿಸುವುದಾಗಿ ತಿಳಿಸಿದರು.
ಮೈಸೂರು ಟ್ರಾವೆಲ್ಸ್ ಅಸೋಸಿಯೇಷೆನ್, ಮೈಸೂರು ಹೋಟೆಲ್ ಮಾಲೀಕರ ಸಂಘ, ಜಿಲ್ಲಾ ಪ್ರವಾಸಿ ವಾಹನ ಚಾಲಕ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ಅನುಮೋದಿತ ಪ್ರವಾಸಿ ಮಾರ್ಗದರ್ಶಿಗಳ ಸಂಘ, ಜಿಲ್ಲಾ ಮತ್ತು ನಗರ ಮ್ಯಾಕ್ಸಿಕ್ಯಾಬ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ಮೈಸೂರು ರೀಜನ್‌ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್, ದೇವರಾಜ್ ಅರಸ್ ರಸ್ತೆ ಟ್ರೇಡರ್ಸ್ ಅಸೋಸಿಯೇಷನ್, ವರ್ತಕರ ಸಂಘ, ಮೈಸೂರು ಟೈಕ್ಸ್ ಟೈಲ್ಸ್ ಮತ್ತು ಗಾರ್ಮೆಂಟ್ ಮರ್ಚೆಂಟ್ ಅಸೋಸಿಯೇಷನ್, ಜಿಲ್ಲಾ ಡಿಸ್ಟ್ರಿಬ್ಯೂಟರ್ ಅಸೋಸಿಯೇಷನ್, ಕಲ್ಯಾಣ ಮಂಟಪ ಮಾಲೀಕರ ಸಂಘಮತ್ತು ಮೈಸೂರು ಮಹಾನಗರಪಾಲಿಕೆಮಂಡಿಮಾರುಕಟ್ಟೆಬಾಡಿಗೆದಾರರ ಸಂಘದ ಪ್ರತಿನಿಧಿಗಳು ತಿಳಿಸಿದ್ದಾರೆ.
ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಬಿ.ಎಸ್.ಪ್ರಶಾಂತ್, ಜಿಲ್ಲಾ ಪ್ರವಾಸಿ ವಾಹನ ಚಾಲಕ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ನಾಗರಾಜ್, ಮೈಸೂರು ಅನುಮೋದಿತ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಅಶೋಕ್, ಜಿಲ್ಲಾಮತ್ತು ನಗರ ಮ್ಯಾಕ್ಸಿಕ್ಯಾಬ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ರವಿ, ದೇವರಾಜ್ ಅರಸ್ ರಸ್ತೆ ಟ್ರೇಡರ್ಸ್ ಅಸೋಸಿಯೇಷನ್ ವೀರಭದ್ರಪ್ಪ, ಕಲ್ಯಾಣ ಮಂಟಪ ಮಾಲೀಕರ ಸಂಘದ ಕೆ. ಶರತ್. ಸತ್ಯನಾರಾಯಣ,ಮೈಸೂರು ಮಹಾನಗರ ಪಾಲಿಕೆ ಮಂಡಿ ಮಾರುಕಟ್ಟೆ ಬಾಡಿಗೆದಾರರ ಸಂಘದ ಮಹದೇವು ಇದ್ದರು.