Advertisement

ವೈದ್ಯರ ಮೇಲೆ‌ ಹಲ್ಲೆ ಖಂಡಿಸಿ ಪ್ರತಿಭಟನೆ-ಪಿಎಸ್‌ಐಗೆ ಮನವಿ

10:14 AM Aug 30, 2019 | Suhan S |

ಬಾದಾಮಿ: ತಾಲೂಕಿನ ಸರ್ಕಾರಿ ಮತ್ತು ಖಾಸಗಿ ವೈದ್ಯರ ಮೇಲೆ ಹಲ್ಲೆ ಹಾಗೂ ಶೋಷಣೆ ತಡೆಯುವಂತೆ ಆಗ್ರಹಿಸಿ ಕಪ್ಪು ಪಟ್ಟಿ ಧರಿಸಿ ವೈದ್ಯರು ಪ್ರತಿಭಟನೆ ನಡೆಸಿದರು.

Advertisement

ಐಎಂಎ ಸಂಘದ ಅಧ್ಯಕ್ಷ ಡಾ. ಆರ್‌.ಸಿ.ಭಂಡಾರಿ ಮತ್ತು ಕಾರ್ಯದರ್ಶಿ ಡಾ| ಕಿರಣ ಕುಳಗೇರಿ ಮಾತನಾಡಿ, ಕಳೆದ ಹದಿನೈದು ದಿನಗಳಲ್ಲಿ ಸರ್ಕಾರಿ ಮತ್ತು ಖಾಸಗಿ ವೈದ್ಯರ ಮೇಲೆ ಬಾದಾಮಿಯಲ್ಲಿ ನಿರಂತರವಾಗಿ ಶೋಷಣೆ ಹಾಗೂ ಹಲ್ಲೆ ನಡೆಯುತ್ತಿದೆ. ವಿವಿಧ ಸಮಾಜ ಸೇವಕ ಸಂಘಗಳ ಹೆಸರು ಹೇಳಿಕೊಂಡು ಹಾಗೂ ಇನ್ನಿತರ ವೇದಿಕೆಗಳ ಹೆಸರಿನಲ್ಲಿ ಹಣಕ್ಕಾಗಿ ಹಲ್ಲೆ ಮತ್ತು ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಹಲ್ಲೆಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವವರೆಗೂ ವೈದ್ಯರು ಸೇವೆಯನ್ನು ಹಿಂಪಡೆಯುತ್ತಿದ್ದೇವೆ. ವೈದ್ಯರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ವೈದ್ಯರಾದ ಡಾ| ಬಿ.ಎಚ್.ರೇವಣಸಿದ್ದಪ್ಪ, ಡಾ| ಎಂ.ಜಿ.ಕಿತ್ತಲಿ, ಡಾ| ಬೊಂಬಲೆ, ಡಾ| ಬಸವರಾಜ ಗಂಗಲ್ಲ, ಡಾ| ಸತೀಶ ಕಟಗೇರಿ, ವಿ.ವೈ. ಭಾಗವತ, ಡಾ| ಕರವೀರಪ್ರಭು ಕ್ಯಾಲಕೊಂಡ, ಡಾ| ಸುರೇಶ ಉಗಲವಾಟ, ಡಾ| ಶಿವುಕುಮಾರ ಮಾಳವಾಡ, ಔಷಧ ವ್ಯಾಪಾರಸ್ಥರ ಸಂಘದ ಸಿದ್ದು ಫತ್ತೇಪುರ, ಮಂಜು ಫತ್ತೇಪುರ, ಪ್ರವೀಣ ಹೋಳಿ, ರವಿ ದೊಡ್ಡನಿಂಗಪ್ಪನವರ, ಆಳಂದ, ಅಮರಯ್ಯ ಜಿತಗೇರಿಮಠ ಹಾಜರಿದ್ದರು.

ಪಟ್ಟಣದಲ್ಲಿ ವೈದ್ಯರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಪಿಎಸ್‌ಐ ಪ್ರಕಾಶ ಬಾಣಕಾರ ಇವರಿಗೆ ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next