Advertisement

ಶಿಕ್ಷಕರ ಕಡ್ಡಾಯ ವರ್ಗಾವಣೆ ಖಂಡಿಸಿ ಪ್ರತಿಭಟನೆ

11:19 AM Jul 21, 2019 | Team Udayavani |

ಬೆಳಗಾವಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಿಕ್ಷಕರ ಕಡ್ಡಾಯ ವರ್ಗಾವಣೆ ರದ್ದುಪಡಿಸುವಂತೆ ಆಗ್ರಹಿಸಿ ನಗರ ವಲಯದ ಶಿಕ್ಷಕರು ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಕಡ್ಡಾಯ ವರ್ಗಾವಣೆ ನಿಯಮ ಅವೈಜ್ಞಾನಿಕವಾಗಿದೆ. ಇದರಿಂದ ಅನೇಕ ಶಿಕ್ಷಕರು ತೊಂದರೆ ಅನುಭವಿಸುವಂತಾಗಿದೆ. ಒಂದು ಕಡೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೂಡಲೇ ವರ್ಗಾವಣೆ ಮಾಡುತ್ತಿರುವುದರಿಂದ ಶಿಕ್ಷಕರಿಗೆ ಕೌಟುಂಬಿಕವಾಗಿ ಸಮಸ್ಯೆ ಆಗುತ್ತದೆ. ಕೂಡಲೇ ಈ ನಿಯಮವನ್ನು ಕೈಬಿಟ್ಟು ಮೊದಲಿನ ನಿಯಮದಂತೆಯೇ ವರ್ಗಾವಣೆ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪತಿ-ಪತ್ನಿ ಇಬ್ಬರೂ ಶಿಕ್ಷಕರಿದ್ದರೆ ಅವರಿಗೆ ಒಂದೇ ಕಡೆ ವರ್ಗಾವಣೆ ಕೊಡಲಾಗುತ್ತಿದೆ. ಆದರೆ ಒಬ್ಬರೇ ಶಿಕ್ಷಕರಿದ್ದರೆ ಅಂಥವರಿಗೆ ಕೋರಿಕೆ ಮೇರೆಗೆ ವರ್ಗಾವಣೆ ನೀಡದೇ ಅನ್ಯಾಯ ಮಾಡಲಾಗುತ್ತಿದೆ. ಇದರಿಂದ ಅನೇಕರಿಗೆ ಸಮಸ್ಯೆಯಾಗುತ್ತಿದೆ. ಒಂದು ಊರಿನಲ್ಲಿ ಮನೆ ಇದ್ದರೆ ಇನ್ನೊಂದು ದೂರದ ಊರಿಗೆ ಹೋಗಿ ಕೆಲಸ ನಿರ್ವಹಿಸುವಂತಾಗಿದೆ. ಕೆಲವರು ಬಾಡಿಗೆ ಮನೆಯಲ್ಲಿಯೇ ವಾಸಿಸುವ ಪ್ರಸಂಗ ಉಂಟಾಗಿದೆ. ಹೀಗಾಗಿ ಈ ನಿಯಮ ಕೈಬಿಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಗರ ಘಟಕದ ಅಧ್ಯಕ್ಷ ಎಂ.ಜಿ. ಪಾಟೀಲ, ಶಿಕ್ಷಕರಾದ ಲಕ್ಷ್ಮೀ ಗುರವ, ಎಸ್‌.ಬಿ. ನಾವಲಗಿ, ಅನಂತ ಮರೆನ್ನವರ, ಜಯಶ್ರೀ ಪಾಟೀಲ, ಬಾಬು ಸೊಗಲನ್ನವರ, ಪಿ.ಬಿ. ಗಿರೆಪ್ಪಗೌಡರ, ಆರ್‌.ಡಿ. ಬೋಗಾರ, ರೇಖಾ ಅಂಗಡಿ, ಆರ್‌.ಎಂ. ಸಿಂಗದ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next