Advertisement

ರೈತ ವಿರೋಧಿ ಕಾಯ್ದೆ ವಾಪಸ್‌ಗೆ ಆಗ್ರಹ

02:27 PM Dec 04, 2020 | Suhan S |

ಬಳ್ಳಾರಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್‌ ಪಡೆಯುವಂತೆ ಒತ್ತಾಯಿಸಿ ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ರೈತಕೃಷಿ ಕಾರ್ಮಿಕ ಸಂಘಟನೆಯ ಸದಸ್ಯರು ಕೇಂದ್ರಸರ್ಕಾರದ ಪ್ರತಿಕೃತಿ ದಹಿಸಿ ಗುರುವಾರ ಪ್ರತಿಭಟನೆ ನಡೆಸಿದರು.

Advertisement

ದೇಶದ ಕಾರ್ಪೊರೇಟ್‌ ಮನೆತನಗಳ ಮಹದಾಸೆಯಂತೆ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿರುವ ಕೇಂದ್ರದ ಬಿಜೆಪಿಸರ್ಕಾರವು ರೈತರಿಗೆ ಈ ಮರಣ ಶಾಸನ ಬರೆದಿದೆ. ಲಾಕ್‌ಡೌನ್‌ ಸಮಯವನ್ನು ದುರುಪಯೋಗಪಡಿಸಿಕೊಂಡು ರೈತರಿಗೆ, ದೇಶದ ದುಡಿಯುವ ಜನರಿಗೆದ್ರೋಹವೆಸಗಿದೆ. ಇಲ್ಲಿಯವರೆಗೂ ಸಹಿಸಿಕೊಂಡಿದ್ದ ರೈತರ ಸಹನೆಯ ಕಟ್ಟೆ ಇಂದು ಒಡೆದು ಜ್ವಾಲಾಮುಖೀಯಂತೆ ಎಲ್ಲಡೆಯೂ ಸ್ಫೋಟಿಸುತ್ತಿದೆ.”ಒಂದು ದೇಶ, ಒಂದು ಮಾರುಕಟ್ಟೆ’ ಎಂದು ಹೇಳುತ್ತಾ ಇದೆಲ್ಲವು ರೈತರಹಿತಕ್ಕಾಗಿಯೇ ಎಂದು ಬೊಬ್ಬೆ ಇಡುತ್ತಿರುವ ಸರ್ಕಾರದ ದುರುದ್ದೇಶವು, ನಯವಂಚಕತನವು ಬಯಲಾಗುತ್ತಿದೆ ಎಂದು ಪ್ರತಿಭಟನೆಯಲ್ಲಿ ನೇತೃತ್ವ ವಹಿಸಿದ್ದ ಎಸ್‌.ಯು.ಸಿ.ಐ (ಸಿ) ರಾಜ್ಯ ಸಮಿತಿ ಸದಸ್ಯ ಕೆ.ಸೋಮಶೇಖರ್‌ ಆರೋಪಿಸಿದರು.

ದೇಶದ ಸಂಪತ್ತನ್ನೆ ನುಂಗಿ ಹಾಕುತ್ತಿರುವ ಬಂಡವಾಳಶಾಹಿಗಳ ದಾಹದ ಹೊಟ್ಟೆಗೆ ಕೇಂದ್ರ ಸರ್ಕಾರವು ರೈಲ್ವೆ, ಶಿಕ್ಷಣ, ಆರೋಗ್ಯ, ಅಂಚೆ, ಸಾರಿಗೆ, ಬ್ಯಾಂಕ್‌, ಎಲ್‌ಐಸಿ ಹೀಗೆ ಎಲ್ಲಾ ಸಾರ್ವಜನಿಕ ಸೇವಾ ಕ್ಷೇತ್ರಗಳನ್ನು ಸುರಿದು ಗುಳ್ಳೆನರಿಯಂತೆ ಜನತೆಯ ಮುಂದೆ ಬಂದು ನಿಂತಿದೆ. ಕೇಂದ್ರ ಸರ್ಕಾರದ ಈಮಹಾ ದ್ರೋಹವನ್ನು ಜನತೆ ಎಂದಿಗೂ ಕ್ಷಮಿಸುವುದಿಲ್ಲ. ಶೋಕ ಬಂಡವಾಳಶಾಹಿಗಳು ಜನತೆಯ ರಕ್ತ ಹೀರಲುಬಿಡುವುದಿಲ್ಲ. ಆದ್ದರಿಂದಲೇ ಪಂಜಾಬ್‌, ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಹೀಗೆಹಲವು ರಾಜ್ಯಗಳಿಂದ ಲಕ್ಷೊàಪಲಕ್ಷ ರೈತರುದೆಹಲಿಯನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ರೈತರಹೋರಾಟ ಆರಂಭಗೊಳ್ಳುತ್ತಿದ್ದಂತೆ ಹೆದರಿದ ಕೇಂದ್ರ ಸರ್ಕಾರವು ರಸ್ತೆಗಳನ್ನು ನಾಶ ಮಾಡಿ, ತಗ್ಗುಗಳನ್ನು ತೋಡಿ ಮಣ್ಣಿನ ಗುಡ್ಡೆಗಳನ್ನು ನಿರ್ಮಿಸಿ, ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಮುಳ್ಳಿನ ತಂತಿ ಅಡ್ಡಲಾಗಿ ಕಟ್ಟಿಸಿ, ಸಾವಿರಾರು ಜನ ಪೊಲೀಸ್‌ ಕಾವಲುಗಾರರನ್ನು ನೇಮಿಸಿದೆ. ರೈತರು ಇದೆಲ್ಲವನ್ನು ಮೀರಿ ಮುನ್ನುಗ್ಗುತ್ತಿದ್ದಾಗ ಅವರ ಮೇಲೆ ಆಕ್ರಮಣಎಸಗಿದೆ. ಅತಿಯಾದ ಚಳಿಯಲ್ಲಿ ಜಲಫಿರಂಗಿ ಮತ್ತು ಟಿಯರ್‌ ಗ್ಯಾಸ್‌ಗಳನ್ನು ಬಳಸಿ ಹೋರಾಟ ಮುರಿಯಲು ಯತ್ನಿಸಿದೆ. ಕೇಂದ್ರ ಸರ್ಕಾರದ ಈನಡೆ ಅತ್ಯಂತ ನಾಚಿಕೆಗೇಡು ಹಾಗೂ ಅಮಾನವೀಯಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾಧ್ಯಕ್ಷ ಹನುಮಂತಪ್ಪ, ಎಸ್‌ಯುಸಿಐ (ಸಿ) ಜಿಲ್ಲಾ ಸಮಿತಿ ಸದಸ್ಯ ಡಾ. ಪ್ರಮೋದ್‌ ಮಾತನಾಡಿದರು.ಮುಖಂಡರಾದ ಗೋವಿಂದ್‌ ಅಧ್ಯಕ್ಷತೆ ವಹಿಸಿದ್ದರು.ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಮುಖಂಡರು ಸೇರಿ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next