Advertisement

ಬಿಪಿಎಲ್‌ ಕಾರ್ಡ್‌ ರದ್ದು ಮಾಡಿದ್ದಕ್ಕೆ  ಪ್ರತಿಭಟನೆ

03:41 PM Oct 19, 2021 | Team Udayavani |

ಬಂಗಾರಪೇಟೆ: ತಾಲೂಕು ಆಡಳಿತಬಡವರ ಪಡಿತರ ಚೀಟಿ ರದ್ದು ಮಾಡಿದೆಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತಸಂಘ (ಕೆ.ಎಸ್‌.ಪುಟ್ಟಣ್ಣಯ್ಯಬಣ)ಪ್ರತಿಭಟನೆ ನಡೆಸಿತು.

Advertisement

ಈ ವೇಳೆ ಆಹಾರ ಶಿರಸ್ತೇದಾರ್‌ಅಭಿಜಿತ್‌ಗೆ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಮರಗಲ್‌ ಶ್ರೀನಿವಾಸ್‌,ತಾಲೂಕಿನಲ್ಲಿ ಸತತ 15 ವರ್ಷಗಳಿಂದಬರಗಾಲಕ್ಕೆ ತುತ್ತಾಗಿ, ಎರಡು ವರ್ಷಗಳಿಂದಕೊರೊನಾ ಹಾವಳಿಗೆ ಒಳಗಾಗಿ ರೈತರು,ಕಾರ್ಮಿಕರು, ಬಡವರು, ಒಪ್ಪತ್ತಿನ ಊಟಕ್ಕೆದುಡಿಯುವ ಕೂಲಿ ಕೆಲಸವೂ ಸರ್ಕಾರನೀಡುತ್ತಿಲ್ಲ ಎಂದು ದೂರಿದರು.

ತಾಲೂಕಾದ್ಯಂತ 600 ಬಿಪಿಎಲ್‌ಕಾರ್ಡ್‌ ರದ್ದುಗೊಳಿಸಿರುವ ಸರ್ಕಾರ,ಬಡವರ ಹೊಟ್ಟೆ ಮೇಲೆ ತಣ್ಣೀರಿನ ಬಟ್ಟೆಹಾಕುವ ಕೆಲಸ ಮಾಡುತ್ತಿದೆ. ಕೂಡಲೇರದ್ದು ಮಾಡಿರುವ ಪಡಿತರ ಕಾರ್ಡ್‌ವಾಪಸ್‌ ನೀಡಬೇಕು ಎಂದು ಆಗ್ರಹಿಸಿದರು.ರೈತ ಸಂಘದ ತಾಲೂಕು ಅಧ್ಯಕ್ಷಐತಾಂಡಹಳ್ಳಿ ಅಮರೇಶ್‌ ಮಾತನಾಡಿ, ದಂಡಾಧಿಕಾರಿಗಳು ಕೂಡಲೇ ಬಡವರಮನೆ, ಸ್ಥಳ ಪರಿಶೀಲನೆ ಮಾಡಿ, ಪಡಿತರಕಾರ್ಡ್‌ ವಾಪಸ್‌ ಮಾಡಿ, ಮುಂಬರುವತಿಂಗಳಲ್ಲಿ ರೇಷನ್‌ ನೀಡುವ ಕಾರ್ಯನಡೆಸಬೇಕು ಎಂದು ಒತ್ತಾಯಿ ಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷಐತಾಂಡಹಳ್ಳಿ ಅಮರೇಶ್‌, ಪ್ರಧಾನಕಾರ್ಯದರ್ಶಿ ರಾಜಶೇಖರ್‌, ಕೋಲಾರತಾಲೂಕು ಅಧ್ಯಕ್ಷ ಕೆಂಬೋಡಿ ರವಿ,ಮಹಿಳಾ ವಿಭಾಗದ ಅಧ್ಯಕ್ಷೆ ಮಾಗೊಂದಿರತ್ನಮ್ಮ, ಮುಜಾಯಿಲ್‌, ಎಂ.ಡಿ.ಬೃಹಾದ್ದೀನ್‌, ಮುಳಬಾಗಿಲು ಸಂಚಾಲಕನಲ್ಲಂಡ್ಲಹಳ್ಳಿ ಯಲ್ಲೇಶ್‌, ಬಾವರಹಳ್ಳಿಕೃಷ್ಣಪ್ಪ, ಮರಗಲ್‌ ವೆಂಕಟೇಶ್‌,ಸಿಬ್ಬತ್ತುಲ್ಲುಖಾನ್‌, ಮುಜೀಬ್‌, ದೊಡ್ಡಪ್ಪ,ನಾಯಕರಹಳ್ಳಿ ವೆಂಕಟೇಶಪ್ಪ,ಬದ್ರುನೀಸಾ, ಶಕೀರಾಬೇಗಂ, ಶಹತಾಜ್‌,ಸುಲ್ತಾನ್‌ಬೇಗಂ, ಅಸ್ಮಬೇಗಂ, ಫ‌ರ್ವಿನ್‌ತಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next