Advertisement

ಸಿಎಎ-ಎನ್‌ಆರ್‌ಸಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

03:23 PM Dec 25, 2019 | Team Udayavani |

ದಾಂಡೇಲಿ: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟೀಯ ಪೌರತ್ವ ನೊಂದಣಿ ಕಾಯ್ದೆ ವಿರೋಧಿಸಿ ನಗರದಲ್ಲಿ ಸ್ಥಳೀಯ ಸಂವಿಧಾನ ಬಚಾವೋ ಆಂದೋಲನ ಸಮಿತಿ ಆಶ್ರಯದಲ್ಲಿ ರ್ಯಾಲಿ ನಡೆಯಿತು. ರ್ಯಾಲಿ ಮುಖಂಡ ಇಕ್ಬಾಲ ಶೇಖ್‌, ಸಂವಿಧಾನವನ್ನೇ ತಿದ್ದುಪಡಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿ ಖಂಡನೀಯ ಮತ್ತು ಇದು ಈ ದೇಶದ ಭವಿಷ್ಯದ ಉನ್ನತಿಗೆ ಬಹುದೊಡ್ಡಗಂಡಾಂತರ ತರಲಿದೆ ಎಂದರು.

Advertisement

ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಹರೀಶ ನಾಯ್ಕ ಮಾತನಾಡಿ, ಬಹುಸಂಖ್ಯೆಯಲ್ಲಿ ದೇಶದ ಬಡ ದುಡಿಯುವ ಜನರು ಯಾವುದೇ ದಾಖಲೆಗಳಿಲ್ಲದೆ ಭಾರತದಲ್ಲಿ ವಾಸವಾಗಿದ್ದಾರೆ. ಇವರನ್ನು ಭಾರತೀಯರಲ್ಲವೆಂದು ಪೌರತ್ವ ದಾಖಲೆಯಿಂದ ದೂರ ಇಡುವುದು ಅನ್ಯಾಯವಲ್ಲವೇ ಎಂದು ಪ್ರಶ್ನಿಸಿದರು. ನಗರಸಭಾ ಮಾಜಿ ಅಧ್ಯಕ್ಷ ತಸ್ವರ್‌ ಸೌದಾಗರ್‌ ಮಾತನಾಡಿ ದೇಶದ ಸ್ವಾತಂತ್ರ  ಸಂಗ್ರಾಮದಲ್ಲಿ ಹಿಂದೂಗಳ ಜೊತೆ ಮುಸ್ಲಿಮರು ಕೂಡ ತ್ಯಾಗ ಬಲಿದಾನ ಮಾಡಿದ್ದಾರೆ. ಅಧಿಕಾರದಲ್ಲಿದ್ದು ಏನೇ ಕಾನೂನನ್ನು ತರಲು ರಾಜಕೀಯ ಪಕ್ಷ ಪ್ರಯತ್ನಿಸಬಹುದು. ಆದರೆ ಅದನ್ನು ವಿರೋಧಿಸುವ ಹಕ್ಕು ಪ್ರತಿಯೊಬ್ಬ ಭಾರತಿಯನಿಗೆ ಇದೆ ಎಂದರು.

ಗ್ರೀನ್‌ ಇಂಡಿಯಾ ಸಂಸ್ಥೆ ನಿರ್ದೇಶಕ ಡಾ| ಬಿ.ಪಿ. ಮಹೇಂದ್ರಕುಮಾರ್‌ ಮಾತನಾಡಿ, ದೇಶದಲ್ಲಿನ ಬಹುತೇಕ ಆದಿವಾಸಿಗಳು, ಬಡ ಕೂಲಿ ದಲಿತ ಕಾರ್ಮಿಕರು ಬುಡಕಟ್ಟು ಜನಾಂಗದವರು. ಇದೂವರೆಗೆ ದಾಖಲಾತಿ ಇಲ್ಲದೆ ಇರುವುದರಿಂದ ಅವರಿಗೂ ಅನ್ಯಾಯ ಮಾಡಿದಂತಾಗುತ್ತದೆ ಎಂದರು.

ನಗರಸಭಾ ಸದಸ್ಯ ಆದಂ ದೇಸೂರ, ಯಾಸ್ಮಿನ್‌ ಕಿತ್ತೂರ, ಅಶ್ಪಾಕ್‌ ಶೇಖ, ರೋಹಿನಾ ಖತೀಬ್‌, ಶಾಹಿದಾ ಪಠಾಣ, ಸಪೂರಾ ಎರಗಟ್ಟಿ, ರುಕ್ಮಿಣಿ ಬಾಗಡೆ, ಸರಸ್ಪತಿ ರಜಪೂತ, ಸಂಜು ನಂದ್ಯಾಳಕರ್‌, ಸಮಾಜ ಸೇವಕ ಮುಸ್ತಾಕ ಮಿಶ್ರಿಕೋಟಿ, ದಾಂಡೇಲಿ ಸಮಗ್ರ ಹೋರಾಟ ಸಮಿತಿ ಅಧ್ಯಕ್ಷ ಅಕ್ರಮ ಖಾನ, ದಲಿತ ಸಂಘಟನೆಯ ಚಂದ್ರಕಾಂತ ನಡಿಗೇರ ಇತರರು ಉಪಸ್ಥಿತರಿದ್ದರು. ಸಂಘಟಕ ಜಾಫರ್‌ ಅನ್ವರ್‌ ಸಾಬ ಮನವಿ ವಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next