ಗಂಗಾವತಿ: ನಗರದ ಜೂನಿಯರ್ ಕಾಲೇಜು ಮೈದಾನ ಮತ್ತು ನೆಹರೂ ಪಾರ್ಕ್ ಮಧ್ಯದಲ್ಲಿ ನಗರಸಭೆಯ ಅನುದಾನದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಸುಲಭ ಶೌಚಾಲಯನ್ನು ಬೇರೆಡೆ ನಿರ್ಮಿಸುವಂತೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ.
ನಗರಕ್ಕೆ ಕುಡಿಯುವ ನೀರು ಪೂರೈಸುವ 4ನೇ ಹಂತದ ಯೋಜನೆಯ ಪೈಪ್ ವಾಲ್ ಗಳಿದ್ದು ಇಲ್ಲಿ ಸುಲಭ ಶೌಚಾಲಯ ನಿರ್ಮಿಸುವುದರಿಂದ ಕುಡಿಯುವ ನೀರಿಗೆ ತೊಂದರೆಯಾಗಲಿದ್ದು, ನಿರ್ಮಿಸಲು ಉದ್ದೇಶಿಸಿರುವ ಶೌಚಾಲಯವನ್ನು ಬೇರೆ ಸ್ಥಳದಲ್ಲಿ ನಿರ್ಮಾಣ ಮಾಡುವ ಒತ್ತಾಯ ಕೇಳಿಬರುತ್ತಿದೆ.
ಸರಕಾರಿ ಜೂನಿಯರ್ ಕಾಲೇಜು ಲಯನ್ಸ್ ಶಾಲೆ, ಹೋಂಗಾರ್ಡ್ ಹಾಗೂ ಸಾರ್ವಜನಿಕರು ಹೆಚ್ಚಾಗಿರುವ ಪ್ರದೇಶವಾಗಿದೆ. ನೆಹರೂ ಪಾರ್ಕಿನಲ್ಲಿ ಪ್ರತಿ ದಿನ ನೂರಾರು ಜನ ವಾಯುವಿಹಾರ ಮತ್ತು ವಿಶ್ರಾಂತಿ ಪಡೆಯಲು ಆಗಮಿಸುತ್ತಿದ್ದು, ಇಲ್ಲಿ ಸುಲಭ ಶೌಚಾಲಯ ನಿರ್ಮಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.
ಸುಲಭ ಶೌಚಾಲಯ ನಿರ್ಮಾಣ ನೆಪದಲ್ಲಿ ಪಾರ್ಕಿನಲ್ಲಿದ್ದ ಗಿಡಗಳನ್ನು ಕಡಿದು ಹಾಕಲಾಗಿದ್ದು ಅರಣ್ಯ ಇಲಾಖೆ ಮೌನ ವಹಿಸಿದೆ. ಸಮೀಪದಲ್ಲಿ ಕೇಂದ್ರ ಬಸ್ ನಿಲ್ದಾಣವಿದ್ದು ಇಲ್ಲಿ ಉಚಿತ ಮತ್ತು ಪೇ ಮಾಡಿ ಬಳಸುವ ಸುಲಭ ಶೌಚಾಲಯವಿದ್ದರೂ ಜೂನಿಯರ್ ಕಾಲೇಜ್ ನೆಹರೂ ಪಾರ್ಕ್ ಮಧ್ಯೆ ಸುಲಭ ಶೌಚಾಲಯ ನಿರ್ಮಾಣ ಮಾಡುವ ಅಗತ್ಯವಿಲ್ಲ. ಬೇರೆಡೆ ನಿರ್ಮಿಸುವಂತೆ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ತಿಪ್ಪಣ್ಣ ಆರತಿ, ಜ್ಞಾನಜ್ಯೋತಿ ಸಂಸ್ಥೆಯ ಎಸ್ ಪಾನ ಶಾಪ ಶರಣಪ್ಪ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.