Advertisement

ರೈತ ವಿರೋಧಿ ನೀತಿ ಖಂಡಿಸಿ ನಿರಶನ

03:20 PM Sep 29, 2020 | Suhan S |

ಚಿಂಚೋಳಿ: ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆ ಜಾರಿಗೆ ವಿರೋಧಿಸಿ ಪಟ್ಟಣದಲ್ಲಿ ಕಾಂಗ್ರೆಸ್‌, ಜೆಡಿಎಸ್‌, ಸಿಪಿಐ(ಎಂ) ಮತ್ತು ದಲಿತ ಸಂಘಟನೆಗಳು ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಕಾಂಗ್ರೆಸ್‌ ಮುಖಂಡ ಸುಭಾಶ ರಾಠೊಡ, ಗೋಪಾಲರಾವ ಕಟ್ಟಿಮನಿ, ಸಿಪಿಐ(ಎಂ)ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಎಂಪಳ್ಳಿ, ಭಾರತ ಮುಕ್ತಿ ಮೋರ್ಚಾ ಮುಖಂಡ ಮಾರುತಿ ಗಂಜಗಿರಿ, ದಲಿತ ಸೇನಾ ಅಧ್ಯಕ್ಷ ಕಾಶಿನಾಥ ಸಿಂಧೆ, ತಾಲೂಕು ಜೆಡಿಎಸ್‌ ಅಧ್ಯಕ್ಷ ರವಿಶಂಕರ ಮುತ್ತಂಗಿ, ಮಲ್ಲಮ್ಮ ಕೋಡ್ಲಿ ಮಾತನಾಡಿದರು.

ಪಟ್ಟಣದ ಡಾ| ಅಂಬೇಡ್ಕರ ವೃತ್ತದಿಂದ ಬಸ್‌ ನಿಲ್ದಾಣವರೆಗೆ ಭಾರಿ ಪ್ರತಿಭಟನೆ ನಡೆಸಿ ರಾಜ್ಯ ಮತ್ತು ಕೇಂದ್ರ ಸರಕಾರ ರೈತ ವಿರೋಧಿ  ನೀತಿ ಖಂಡಿಸಲಾಯಿತು. ವಿವಿಧ ಬೇಅಞಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ ಅವರಿಗೆ ಸಲ್ಲಿಸಲಾಯಿತು. ಕಾಂಗ್ರೆಸ್‌ ಮುಖಂಡ ಸುಭಾಸ ರಾಠೊಡ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅನಿಲಕುಮಾರ ಜಮಾದಾರ, ರವಿಶಂಕರ ಮುತ್ತಂಗಿ, ಸಿದ್ದಯ್ಯ ಸ್ವಾಮಿ, ಬಸವರಾಜ ಮಲಿ, ಅನವರ ಖತೀಬ, ಶಬ್ಬೀರ ಅಹೆಮದ, ಖಲೀಲ ಪಟೇಲ್‌, ನಾಗೇಶ ಗುಣಾಜಿ,ಸಂತೋಷ ಗುತ್ತೆದಾರ, ಶಶಿಕುಮಾರ ಮೇತ್ರಿ, ಹಣಮಂತ ಪೂಜಾರಿ, ಮಹ್ಮದ ಹುಸೇನ ನಾಯಕೋಡಿ ಇದ್ದರು. ಪ್ರತಿಭಟನಾಕಾರರ ಮತ್ತು ಪೊಲೀಸ್‌ ಅಧಿಕಾರಿಗಳ ಮಧ್ಯೆ ಮಾತಿಕ ಚಕಮಕಿ ನಡೆಯಿತು.

 

ವಾಡಿಯಲ್ಲಿ ಎಸ್‌ಯುಸಿಐ ಪ್ರತಿಭಟನೆ :

Advertisement

ವಾಡಿ: ರಾಜ್ಯ ಸರಕಾರ ಸದನದಲ್ಲಿ ಚರ್ಚೆಯಿಲ್ಲದೆ ಅಂಗೀಕರಿಸಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ವಿವಿಧ ರೈತ ಸಂಘಟನೆಗಳು ಕರೆ ನೀಡಿದ್ದ ರಾಜ್ಯ ಬಂದ್‌ ಬೆಂಬಲಿಸಿ ಸೋಷಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ (ಎಸ್‌ಯುಸಿಐ) ಪಕ್ಷದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಶ್ರೀನಿವಾಸಗುಡಿ ವೃತ್ತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ ರೈತರು ಹಾಗೂ ಎಸ್‌ಯುಸಿಐ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳ ವಿರುದ್ಧ ಘೋಷಣೆ ಕೂಗಿದರು. ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ಗುತ್ತಿಗೆ ಕೃಷಿ ಕಾಯ್ದೆ, ವಿದ್ಯುತ್‌ ಕಾಯ್ದೆ 2002ರತಿದ್ದುಪಡಿ, ಬೆಂಬಲ ಬೆಲೆ ಕಾಯ್ದೆ ತಿದ್ದುಪಡಿಗಳ ಮೂಲಕ ಭೂ ಸುಧಾರಣಾ ಕಾಯ್ದೆ ಅಂಗೀಕರಿಸಿರುವುದು ರೈತ ವಿರೋಧಿ  ನಿಲುವಾಗಿದೆ. ಕೃಷಿ ವಲಯವನ್ನು ಬಂಡವಾಳಶಾಹಿಗಳಹಿಡಿತಕ್ಕೆ ಒಪ್ಪಿಸಲಾಗುತ್ತಿದೆ. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರಕ್ಕೇರಿದ ಯಡಿಯೂರಪ್ಪ ನೇತೃತ್ವದ ಭಾಜಪ ಸರಕಾರ ಸಂಪೂರ್ಣ ಖಾಸಗೀಕರಣಕ್ಕೆ ರತ್ನಗಂಬಳಿ ಹಾಸಿದೆ ಎಂದು ಆರೋಪಿಸಿದರು.

ರೈತ ಕೃಷಿ ಕಾರ್ಮಿಕ ಸಂಘಟನೆಯ ತಾಲೂಕು ಅಧ್ಯಕ್ಷ ರಾಘವೇಂದ್ರ ಅಲ್ಲಿಪುರಕರ, ಮಲ್ಲಿಕಾರ್ಜುನ ಗಂದಿ, ಮಲ್ಲಣ್ಣ ದಂಡಬಾ, ವೆಂಕಟೇಶ ದೇವದುರ್ಗ, ಅರುಣ ಹಿರೆಬಾನರ್‌, ಗೌತಮ ಪರತೂರಕರ, ವಿಠ್ಠಲ ರಾಠೊಡ, ಯೇಶಪ್ಪ ಕೇದಾರ, ರಾಜು ಒಡೆಯರ್‌, ಚೌಡಪ್ಪ ಗಂಜಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next