ತಿಪಟೂರು: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ತಾಲೂಕಿನ ರೈತ ಕೃಷಿ ಕಾರ್ಮಿಕರಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಗ್ರೇಡ್-2 ತಹಶೀಲ್ದಾರ್‌ಗೆಮನವಿಪತ್ರ ಸಲ್ಲಿಸಿದರು.
ಹಸಿರು ಸೇನೆ ತಾಲೂಕು ಅಧ್ಯಕ್ಷ ತಿಮ್ಮಲಾಪುರ ದೇವರಾಜ್ ಮಾತನಾಡಿ, ರೈತರು ಮತ್ತು ಜನಸಾಮಾನ್ಯರ ಹಿತಾಸಕ್ತಿಗೆ ವಿರುದ್ಧವಾಗಿ ಹೊಸದಾಗಿ ರೂಪಿಸಿರುವ ಮೂರು ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ಕೂಡಲೆ ಹಿಂಪಡೆಯ ಬೇಕು ಎಂದು ಆಗ್ರಹಿಸಿದರು.
ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತುವಾಣಿಜ್ಯ ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳಿಂದ ರೈತರ ಕಾಯ್ದೆಗಳನ್ನು ಜಾರಿಗೊಳಿಸುವ ಮುನ್ನ ರೈತ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸದೆ ಅವರ ಹಿತ ಕಡೆಗಣಿಸಿ ಜಾರಿಗೆ ತಂದಿರುವುದು ಸರಿಯಲ್ಲ. ಈ ಕಾಯ್ದೆಗಳು ರೈತರ ಹಿತಾಸಕ್ತಿಗೆ ಪೂರಕವಾಗದೆ ಸುಲಿಗೆ ಮಾಡುವ ರಾಕ್ಷಸ ಕಾರ್ಪೋರೆಟ್ ಕಂಪನಿಗಳ ಹಿತಾಸಕ್ತಿಯಾಗಿವೆ ಎಂದು ದೂರಿದರು.
ಕಂಪನಿಗಳು ರೈತರಿಂದ ಅಗತ್ಯ ವಸ್ತುಗಳನ್ನು ಅಗ್ಗದ ಬೆಲೆಗೆ ಕೊಂಡುಕೊಂಡು ದುಬಾರಿ ಬೆಲೆಗೆ ಮಾರಾಟ ಮಾಡಿ ಲಾಭಗಳಿ ಸುವುದಂತೂ ಖಂಡಿತ.ಕೇಂದ್ರ ಸರ್ಕಾರ ಇಂಥ ಲೆಕ್ಕಕ್ಕೆ ಬಾರದಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ರೈತ ವಿರೋಧಿ ಸರ್ಕಾರವೆನಿಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಕಾವಲು ಸಮಿತಿ ಶ್ರೀಕಾಂತ್‌ಕೆಳಹಟ್ಟಿ ಮಾತನಾಡಿ, ಕೇಂದ್ರ ಸರ್ಕಾರ ರೈತರಅವನತಿಗೆ ಮುಂದಾಗಿದ್ದು, ಇಂಥ ಕಾಯ್ದೆಗಳಿಂದ ರೈತರು ಕ್ರಮೇಣವಾಗಿ ಕಂಪನಿಗಳ ಕಪಿಮುಷ್ಠಿಗೆ ಸಿಲುಕುವಂತೆ ಸರ್ಕಾರವೇ ಮಾಡುತ್ತಿದೆ. ಇದರಿಂದ ಕೃಷಿ ಮತ್ತು ರೈತನ ಬದುಕು ಗಳೆರಡೂ ದುರಂತವಾಗುವುದರಲ್ಲಿ ಅನುಮಾನ ವಿಲ್ಲ. ಹಾಗಾಗಿ ಕಾಯ್ದೆಗಳನ್ನು ಹಿಂತೆಗೆದುಕೊಂಡು ರಾಕ್ಷಸ ಕಂಪನಿಗಳ ಹಿಡಿತವಿರುವ ಶೋಷಕ ವ್ಯವಸ್ಥೆಯಿಂದ ರಕ್ಷಣೆ ನೀಡಲು ರೈತ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ರೈತಪರ, ಜನಪರ ನೀತಿಗಳನ್ನು ರೂಪಿಸಬೇಕೆಂದು ಒತ್ತಾಯಿಸಿದರು.
ರೈತ ಸಂಘದ ಭೈರನಾಯಕನಹಳ್ಳಿ ಲೋಕೇಶ್, ರೈತ ಹೋರಾಟಗಾರ ಮನೋಹರಪಟೇಲ್, ಆರ್‌ಕೆಎಸ್‌ನ ಸಂಚಾಲಕರಾದ ಪ್ರಸಾದ್ ಮಾದಿಹಳ್ಳಿ, ದಯಾನಂದ, ಸದಸ್ಯ ದಕ್ಷಿಣಮೂರ್ತಿ, ರೈತ ಮುಖಂಡ ಬಿ.ಬಿ. ಸಿದ್ದಲಿಂಗ ಮೂರ್ತಿ ಇತರರು ಇದ್ದರು.