Advertisement

ಕೃಷಿ ಕಾಯ್ದೆ ಹಿಂಪಡೆಗೆ ಒತ್ತಾಯ

01:55 PM Dec 09, 2020 | Suhan S |

ಸುರಪುರ: ಕೃಷಿ ಕಾಯ್ದೆ ವಿರೋದಿಸಿ ವಿವಿಧ ರೈತಪರ ಸಂಘಟನೆಗಳು ಕರೆ ನೀಡಿದ್ದ ಭಾರತ್‌ ಬಂದ್‌ ಬೆಂಬಲಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಘಟಕದ ನೇತೃತ್ವದಲ್ಲಿ ತಾಲೂಕಿನ ದೇವಾಪುರ ಕ್ರಾಸ್‌ ನಲ್ಲಿ ಮಂಗಳವಾರ ನೂರಾರು ರೈತರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು.

Advertisement

ತಾಲೂಕು ಅಧ್ಯಕ್ಷ ಶಿವುಕುಮಾರ ಸಾಹು ಮಾತನಾಡಿದರು. ತಾಲೂಕು ಕೇಂದ್ರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಭಾರತ್‌ ಬಂದ್‌ ಯಾವುದೇ ಬಿಸಿ ತಟ್ಟಲಿಲ್ಲ. ರೈತ ಮುಖಂಡರಾದ ಮಹಾದೇವಿ ಬೇವಿನಾಳಮಠ, ರಾಮನಗೌಡ ಯಾಳಗಿ, ಹಣಮಂತ್ರಾಯ ಮಡಿವಾಳರ್‌, ಮಹೇಶಗೌಡ ಸುಬೇದಾರ, ಸಂಗಣ್ಣ ಮುಡಬೂಳ, ಎಚ್‌.ಆರ್‌. ಬಡಿಗೇರಾ, ಶಿವರಾಮ ಎಚ್‌. ಚವ್ಹಾಣ ಏವೂರ, ದೇವರಾಜ ಗೌಡಗೇರಾ, ಬಸವರಾಜ ಅಂಗಡಿ, ದೇವು ಮೋಪಗರ, ನವಾಬ್‌ ಪಟೇಲ್‌, ಮಾರುತಿ ಮೋಪಗಾರ, ರಮೇಶ್‌ ಮೋಪಗಾರ, ಮಾನಪ್ಪ ಬಡಿಗೇರಾ ಏವೂರ, ನಿಂಗಣ್ಣ ಪೂಜಾರ, ಶಿವರಾಜ ಕಲಕೇರಿ ಇದ್ದರು.

ಇನ್ನು ಇಲ್ಲಿನ ವಕೀಲರು ಕೋರ್ಟ್‌ ಕಲಾಪದಿಂದ ಹೊರಗುಳಿದರು. ವಕೀಲರ ಸಂಘದ ಅಧ್ಯಕ್ಷ ಮಹ್ಮದ್‌ ಹುಸೇನ್‌ ಅಧ್ಯಕ್ಷತೆಯಲ್ಲಿ ವಕೀಲರು ಸಂಘದ ಕಾರ್ಯಾಲಯದಲ್ಲಿ ಸಭೆ ಸೇರಿ ಬಂದ್‌ ಬೆಂಬಲ ನಿರ್ಧಾರ ಕೈಗೊಂಡರು.

ಜೆಡಿಎಸ್‌ನಿಂದ ಮನವಿ: ಭಾರತ ಬಂದ್‌ ಬೆಂಬಲಿಸಿ ಜೆಡಿಎಸ್‌ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿಯವರಿಗೆ ಮನವಿಸಲ್ಲಿಸಿದರು. ಸಂಗಣ್ಣ ಬಾಕ್ಲಿ, ಅಪ್ಪಣ್ಣ ಗಾಯಕವಾಡ, ತಿಪ್ಪಣ್ಣ ಪಾಟೀಲ, ಶೌಕತ್‌ಅಲಿ, ಶರಣಪ್‌ ಅಕ್ಕಿ, ಶಾಂತು ತಳವಾರಗೇರಾ, ಅಲ್ತಾಫ್‌ ಸಗರಿ ಇದ್ದರು.

ಶಹಾಪುರ: ಯಥಾಸ್ಥಿತಿ ವ್ಯಾಪಾರ-ವಹಿವಾಟು :

Advertisement

ಶಹಾಪುರ: ಮಂಗಳವಾರ ವಿವಿಧ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್‌ ಯಶಸ್ವಿ ಕಾಣಲಿಲ್ಲ. ಇಲ್ಲಿನ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರುನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್‌ ಕಚೇರಿ ಎದುರು ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಸಂಘದ ಮುಖಂಡ ಮಲ್ಲಣ್ಣ ಪರಿವಾಣ ಮಾತನಾಡಿದರು.ಭೀಮರಾಯ ಹುಲ್ಕಲ್‌, ಲಾಲಸಾಬ ಚೌದರಿ, ತಿಮ್ಮಣ್ಣ ಮುಂದಿನಮನಿ, ಸಂಗನಬಸಪ್ಪ ದಿಗ್ಗಿ, ಭೀಮಾಶಂಕರ ಸಲಾದಪುರ, ನಿಂಗಣ್ಣ ಟಿ.ವಡಿಗೇರಿ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next