ಗಜೇಂದ್ರಗಡ: ಬ್ರಾಹ್ಮಣ ಸಮುದಾಯಕ್ಕೆ ವಿನಾಕಾರಣ ಅವಹೇಳನ ಮಾಡಿರುವ ವಿಚಾರವಾದಿ ಪ. ಮಲ್ಲೇಶ್ ಹೇಳಿಕೆ ಖಂಡಿಸಿ, ಬ್ರಾಹ್ಮಣ ಸಮಾಜ ಸೇವಾ ಸಮಿತಿಯಿಂದ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಇತ್ತೀಚೆಗೆ ಮೈಸೂರ ನಗರದಲ್ಲಿ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಪಿ. ಮಲ್ಲೇಶ ಅವರು ಬ್ರಾಹಣ ಹಾಗೂ ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡಿರುವುದು ಅಕ್ಷಮ್ಯ ಅಪರಾಧ. ಸಮಾಜದಲ್ಲಿ ಶಾಂತಿ ಕದಡಿ ಅಶಾಂತಿ ಉಂಟು ಮಾಡುವ ಕ್ರಮ ಈ ವೇಳೆ ಸ್ಥಳದಲ್ಲಿಯೇ ಇದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೌನವಾಗಿರುವುದು ಖಂಡನಾರ್ಹ ಎಂದರು.
ಅರಳು-ಮರುಳಾಗಿ ಸ್ಥಿಮಿತ ಕಳೆದುಕೊಂಡ ಪ.ಮಲ್ಲೇಶ್ ಅವರು ಮನೆಯಲ್ಲಿರಬೇಕು. ಬ್ರಾಹ್ಮಣ ಸಮಾಜವನ್ನು ನಿಂದಿಸುವ ಮೂಲಕ ಸಮಾಜದಲ್ಲಿ ಅಶಾಂತಿಯುಂಟು ಮಾಡುತ್ತಿದ್ದಾರೆ. ಬೇಷರತ್ ಕ್ಷಮೆಯಾಚಿಸಬೇಕು. ಬ್ರಾಹ್ಮಣರು ಶೇ. 5 ಇದ್ದಾರೆ. ಶೇ. 95 ಶೂದ್ರರು ತಿರುಗಿ ಬಿದ್ದರೆ ಉಳಿಗಾಲವಿಲ್ಲ ಎಂದರು.
ಬ್ರಾಹ್ಮಣರ ವಿರುದ್ಧ ಜನರನ್ನು ಪ್ರಚೋ ದಿಸುತ್ತಿದ್ದಾರೆ. ಬ್ರಾಹ್ಮಣ ಸಮಾಜ ರಾಜ್ಯಾದ್ಯಂತ ಸಂಘಟಿತರಾಗಿ ಪ.ಮಲ್ಲೇಶ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಅವರ ವಿರುದ್ಧ ದೂರು ನೀಡಲಾಗಿದೆ, ಈ ಪ್ರಕರಣ ತಾರ್ಕಿಕ ಅಂತ್ಯ ಕಾಣುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ರಜನಿಕಾಂತ್ ಕೆಂಗೇರಿ ಸಂಘಟಕರಿಂದ ಮನವಿ ಸ್ವೀಕರಿಸಿದರು. ಆರ್.ಎಚ್ ಗಾಡಗೋಳಿ, ಡಾ. ಆರ್.ಎಸ್. ಜೀರೆ, ಡಾ.ಜಿ.ಎಸ್. ಜೀರೆ, ಸಂಜೀವ ಜೋಶಿ, ಗಿರೀಶ ಕುಲಕರ್ಣಿ, ಸುರೇಶಭಟ್ ಪೂಜಾರ, ರಘು ತಾಸೀನ, ಶ್ರೀನಿವಾಸ ತೈಲಂಗ, ಕಲ್ಲಿನಾಥ ಜೀರೆ, ಸತೀಶ ಕುಲಕರ್ಣಿ, ವಾಸು ಕುಲಕರ್ಣಿ, ಗಜಾನನ ಹೆಗಡೆ, ಹನುಮಂತರಾವ್ ಕುಲಕರ್ಣಿ, ಕೃಷ್ಣಾ ಇಟಗಿ, ಸುಧಾಕರ ಕುಲಕರ್ಣಿ ಇನ್ನಿತರರು ಪಾಲ್ಗೊಂಡಿದ್ದರು.