ಮೈಸೂರು: ಎಟಿ ಅಂಡ್ ಎಸ್ ಕಾರ್ಖಾನೆಯಲ್ಲಿ ಕೆಲಸದಿಂದ ವಜಾಗೊಳಿಸಿರುವ ಕಾರ್ಮಿಕರ ಮರು ನೇಮಕಕ್ಕೆ ಒತ್ತಾಯಿಸಿ ಎಟಿ ಅಂಡ್ ಎಸ್ ಇಂಡಿಯಾ ಪ್ರೈ.ಲಿ.ಎಂಪ್ಲಾಯೀಸ್ ಅಸೋಸಿಯೇ ಶನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು, ಕಾರ್ಖಾನೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂಜನಗೂಡಿನ ಕೈಗಾರಿಕಾ ಪ್ರದೇಶದ ಎಟಿ ಅಂಡ್ ಎಸ್ ಕಾರ್ಖಾನೆ ಆಡಳಿತ ವರ್ಗ ಕಾನೂನು ಬಾಹಿರವಾಗಿ ಕಳೆದ 12 ವರ್ಷಗಳಿಂದ ನಿರಂತರವಾಗಿ ನೇರ ಉತ್ಪಾದನೆಯಲ್ಲಿ ತೊಡಗಿ ಕೆಲಸ ಮಾಡುತ್ತಿದ್ದ 71 ಕಾರ್ಮಿಕರನ್ನು ಇಲ್ಲ ಸಲ್ಲದ ಆಪಾದನೆ ಮಾಡಿ ಕೆಲಸದಿಂದ ವಜಾಗೊಳಿ ಸಿದೆ ಎಂದು ದೂರಿದರು.
ಕಾಯಂಗೊಳಿಸಿಲ್ಲ: ಕಾರ್ಖಾನೆ ಪ್ರಿಂಟೆಡ್ ಸಕೂìÂಟ್ ಬೋರ್ಡ್ ತಯಾರಿಕೆಯಿಂದ ವಾರ್ಷಿಕ ನೂರಾರು ಕೋಟಿ ವಹಿವಾಟು ನಡೆಸಿ ಕೋಟಿಗಟ್ಟಲೆ ಲಾಭಗೊಳಿಸ ಲಾಗುತ್ತಿದೆ. ಕಾರ್ಖಾನೆಯಲ್ಲಿ ಸುಮಾರು 800ಕ್ಕೂ ಹೆಚ್ಚು ಕಾರ್ಮಿಕರು ವಿವಿಧ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದು ಇದರಲ್ಲಿ ಸುಮಾರು 100ಕ್ಕೂ ಹೆಚ್ಚು ಜನರನ್ನು ಟೆಕ್ನಿಕಲ್ ಟ್ರೈನಿ ಹೆಸರಿನಲ್ಲಿ 2008ರಲ್ಲಿ ನೇಮಕ ಮಾಡಿಕೊಂಡಿದೆ. ಇವರನ್ನು 2 ವರ್ಷಗಳ ನಂತರ ಕಾಯಂಗೊಳಿಸಬೇಕಾಗಿದ್ದು ಕಳೆದ 12 ವರ್ಷಗಳಿಂದಲೂ ಕಾಯಂಗೊಳಿಸದೆ ಕಡಿಮೆ ವೇತನದಲ್ಲಿ ದುಡಿಸಿಕೊಳ್ಳುತ್ತಿದೆ ಎಂದರು.
ಕಾರ್ಮಿಕರ ವಿರೋಧಿ ನೀತಿ: ಕಾಯಂ ಕಾರ್ಮಿಕರಿಗೆ ನೀಡುವ ಯಾವುದೇ ಸೌಲಭ್ಯ ನೀಡದೆ ಕಾನೂನು ಬದ್ಧ ಸೌಲಭ್ಯಗಳಿಂದ ವಂಚಿಸುತ್ತಿದೆ. ಕಾರ್ಮಿಕರು ಸಂಘದ ಮೂಲಕ ಔದ್ಯಮಿಕ ನ್ಯಾಯಾಧೀಕರಣದ ಮುಂದೆ ವಿವಾದ ಎತ್ತಿದ್ದರಿಂದ ಕೋಪಗೊಂಡ ಆಡಳಿತ ವರ್ಗ ನಂಜನಗೂಡಿನಲ್ಲಿ ಕೋವಿಡ್ ಹೆಚ್ಚಳದಿಂದ ರೆಡ್ ಝೊàನ್ ಇದ್ದರೂ ಕೆಲಸಕ್ಕೆ ಬರಬೇಕೆಂದು ಒತ್ತಾಯಿಸಿ, ಕೆಲಸಕ್ಕೆ ಬರದಿದ್ದರೆ ಕೆಲಸ ನಿರಾಕರಿಸುವ ಬೆದರಿಕೆ ಹಾಕಿತ್ತು.
ಪೊಲೀಸರು ಓಡಾಡಲು ಬಿಡದೆ ಕರ್ಫೂ ಜಾರಿ ಮಾಡಿದ್ದರಿಂದ ಕೆಲಸಕ್ಕೆ ರಜೆ ಬೇಕೆಂದು ಕೇಳಿದ ಕಾರಣಕ್ಕೆ ಇದನ್ನೇ ನೆಪ ಮಾಡಿಕೊಂಡು 71 ಕಾರ್ಮಿ ಕರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಹೊಸ ದಾಗಿ ಕಾರ್ಮಿಕರನ್ನು ನೇಮಿಸಿ 71 ಕಾರ್ಮಿಕರಿಗೆ ಅನ್ಯಾಯ ಮಾಡಿದ್ದು, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕಿಡಿ ಕಾರಿದರು.
ಕೆಲಸ ಕಳೆದುಕೊಂಡಿರುವ ಕಾರ್ಮಿಕರು ಜೀವನ ನಡೆಸಲು ಪರದಾಡುವಂತಾಗಿದೆ. ಈ ವಿಚಾರದಲ್ಲಿ ಕಾರ್ಮಿಕರಿಗೆ ಆಡಳಿತ ವರ್ಗ ಮಾಡಿರುವ ಅನ್ಯಾಯದ ವಿರುದ್ಧ ಕ್ರಮ ಜರುಗಿಸಿ, ಕಾರ್ಮಿಕರನ್ನು ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳಬೇಕು. ಕೆಲಸವಿ ಲ್ಲದೆ ಪರಿತಪಿಸುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.