Advertisement

ಬಡ ಮಕ್ಕಳ ಶಿಕ್ಷಣಕ್ಕೆ ರಕ್ಷಣಾ ಘಟಕ ನೆರವು

11:40 PM Jun 20, 2019 | mahesh |

ಪುತ್ತೂರು: ವಿದ್ಯಾಭ್ಯಾಸಕ್ಕೆ ತೊಂದರೆಯಾಗುವ ಬಡ ಮಕ್ಕಳಿದ್ದರೆ ಅವರನ್ನು ಮಕ್ಕಳ ರಕ್ಷಣಾ ಘಟಕದ ಗಮನಕ್ಕೆ ತಂದರೆ ಶಿಕ್ಷಣ ಇಲಾಖೆಯ ಜತೆ ಸಮನ್ವಯ ಸಾಧಿಸಿ, ಅವರ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ವಜೀರ್‌ ತಿಳಿಸಿದ್ದಾರೆ.

Advertisement

ಗುರುವಾರ ಪುತ್ತೂರು ತಾ.ಪಂ. ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ರಕ್ಷಣೆಗೆ ಸಂಬಂಧಿಸಿದ ತಾಲೂಕು ಮಟ್ಟದ ಸಮನ್ವಯ ಸಮಿತಿಗಳ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಸಮಿತಿಗಳ ಅಧ್ಯಕ್ಷರಾಗಿರುವ ತಹಶೀಲ್ದಾರ್‌ ಪರವಾಗಿ ಉಪ ತಹಶೀಲ್ದಾರ್‌ ಶ್ರೀಧರ್‌ ಕೆ. ಸಭೆ ಅಧ್ಯಕ್ಷತೆ ವಹಿಸಿದ್ದರು.

ಮಕ್ಕಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ಹೆಲ್ಪ್ಲೈನ್‌ 1098 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು. ಯಾರಿಗಾದರೂ ಮಗು ಬೇಡ ಎಂದಾದರೆ ಅದನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಬಹುದು. 60 ದಿನಗಳ ಬಳಿಕ ದತ್ತು ಪ್ರಕ್ರಿಯೆಗಳು ನಡೆಯುತ್ತವೆ. ಈ ನಿಟ್ಟಿನಲ್ಲಿ ದತ್ತು ಸಮಿತಿಯೂ ಕಾರ್ಯ ನಿರ್ವಹಿಸುತ್ತಿದೆ. ಆದರೆ ಮಗು ತಾಯಿಯ ಜತೆ ಬೆಳೆಯಬೇಕು ಎನ್ನುವುದೇ ನಮ್ಮ ಆಶಯವಾಗಿರುತ್ತದೆ ಎಂದು ಹೇಳಿದರು.

ಬಾಲ್ಯ ವಿವಾಹ ಇನ್ನೂ ಇದೆ!
ಜಿಲ್ಲೆಯಲ್ಲಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರೂ ಇನ್ನೂ ಶೇ. 3ರಿಂದ 4ರಷ್ಟು ಬಾಲ್ಯ ವಿವಾಹದ ಪ್ರಕರಣಗಳು ವರದಿಯಾಗುತ್ತಿವೆ ಎಂದು ರಕ್ಷಣಾಧಿಕಾರಿ ವಜೀರ್‌ ಹೇಳಿದರು. ಪುತ್ತೂರು ಪ್ರಭಾರ ಸಿಡಿಪಿಒ ಭಾರತಿ ಮಾತನಾಡಿ, ಬಾಲ್ಯ ವಿವಾಹ ತಡೆಗಟ್ಟುವ ಜವಾಬ್ದಾರಿ ಸಿಡಿಪಿಒ ಇಲಾಖೆಯದ್ದು ಮಾತ್ರ ಆಗಿರುವುದಿಲ್ಲ. ಗ್ರಾಮ ಮಟ್ಟದ ಪಿಡಿಒಗಳು, ಪ್ರೌಢಶಾಲಾ ಮುಖ್ಯ ಶಿಕ್ಷಕರು ಸಹಿತ ಎಲ್ಲ ಅಧಿಕಾರಿಗಳೂ ಬಾಲ್ಯವಿವಾಹ ನಿಷೇಧ ಅಧಿಕಾರಿಗಳಾಗಿರುತ್ತಾರೆ. ಎಲ್ಲರೂ ಸೇರಿ ಬಾಲ್ಯ ವಿವಾಹವನ್ನು ಸಂಪೂರ್ಣ ದೂರ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು ಎಂದು ಹೇಳಿದರು.

ಸ್ತ್ರೀಶಕ್ತಿ ಗುಂಪುಗಳಿಗೆ ಪ್ರಶಸ್ತಿ
ತಾಲೂಕಿನಲ್ಲಿ 803 ಸ್ತ್ರೀಶಕ್ತಿ ಗುಂಪುಗಳಿದ್ದು, ಉತ್ತಮ ರೀತಿಯಲ್ಲಿ ಚಟುವಟಿಕೆಗಳನ್ನು ನಡೆಸುತ್ತಿವೆ. ದಾಸರಮೂಲೆ ಸ್ತ್ರೀಶಕ್ತಿ ಗುಂಪು ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದೆ. ಕೊೖಲ ಏಣಿತ್ತಡ್ಕ ಅಂಗನವಾಡಿ ಕೇಂದ್ರದ ವೇದಾವತಿ ಅವರು ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ ಎಂದರು. ಸ್ತ್ರೀಶಕ್ತಿ ಯೋಜನೆ ಸಮನ್ವಯ ಸಮಿತಿಯ ಡೈಸಿ ಮಾತನಾಡಿ, ಸ್ತ್ರಿಶಕ್ತಿ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಶೇ. 12 ಬಡ್ಡಿ ವಿಧಿಸಲಾಗುತ್ತಿದೆ.

Advertisement

ಶಾಲೆಗಳಲ್ಲಿ ಮಕ್ಕಳ ರಕ್ಷಣಾ ಸಮಿತಿಯನ್ನು ಕಡ್ಡಾಯವಾಗಿ ಮಾಡಬೇಕು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ದೂರು ಪೆಟ್ಟಿಗೆಯನ್ನು ಅಳವಡಿಸಬೇಕು. ಆದರೆ ಹೆಚ್ಚಿನ ಶಾಲೆಗಳಲ್ಲಿ ಈ ನಿಯಮಗಳು ಪಾಲನೆಯಾಗದೇ ಇರುವುದು ಗಮನಕ್ಕೆ ಬಂದಿದೆ. ಶಾಲೆಗಳ ಗೋಡೆಯಲ್ಲಿ ಚೈಲ್ಡ್ಲೈನ್‌ ಸಂಖ್ಯೆ ಕಾಣಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ವಜೀರ್‌ ಅವರು ಹೇಳಿದರು.

ಇದನ್ನು ಕಡಿಮೆ ಮಾಡಬೇಕು. ಈ ಕುರಿತು ಸದಸ್ಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಭೆಯ ಗಮನ ಸೆಳೆದರು. ಸಿಡಿಪಿಒ ಮಾತನಾಡಿ, ಇದು ರಾಷ್ಟ್ರೀಕೃತ ಬ್ಯಾಂಕ್‌ ಅಡಿಯಲ್ಲಿ ಬರುತ್ತಿರುವುದರಿಂದ ನಿಗದಿತ ಬಡ್ಡಿ ವಿಧಿಸಲಾಗುತ್ತಿದೆ. ಈ ಕುರಿತು ಜಿಲ್ಲಾಮಟ್ಟದಲ್ಲಿ ಪ್ರಸ್ತಾವನೆ ಇಟ್ಟಿದ್ದೇವೆ ಎಂದರು.

ಮಹಿಳಾ ದೌರ್ಜನ್ಯ
ತಾಲೂಕು ಸಿಡಿಪಿಒ ವ್ಯಾಪ್ತಿಯಲ್ಲಿ ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿ ಜನವರಿಯಿಂದ 15 ಪ್ರಕರಣಗಳು ದಾಖಲಾಗಿದ್ದು, 12 ಇತ್ಯರ್ಥಗೊಂಡಿವೆ ಎಂದು ಸಿಡಿಪಿಒ ಮಾಹಿತಿ ನೀಡಿದದರು. ಸಾಂತ್ವನ ಕೇಂದ್ರದಲ್ಲಿ ಎಪ್ರಿಲ್ ತಿಂಗಳಿನಿಂದ ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದ 23 ಪ್ರಕರಣಗಳು ದಾಖಲಾಗಿದ್ದು, 14 ಪ್ರಕರಣಗಳು ಇತ್ಯರ್ಥಗೊಂಡು, 9 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಬಗೆಹರಿಸಲು ಸಾಧ್ಯವಾಗದ್ದನ್ನು ಸಿಡಿಪಿಒ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ ಎಂದು ಸಾಂತ್ವನ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದರು.

ಭಾಗ್ಯಲಕ್ಷ್ಮೀಯಲ್ಲಿ ಸಡಿಲಿಕೆ
2018ರ ಅನಂತರ ಭಾಗ್ಯಲಕ್ಷ್ಮೀ ಯೋಜನೆಯಲ್ಲಿ ಕೆಲವೊಂದು ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಹಿಂದೆ ಮೊದಲನೇ ಮಗು ಹುಟ್ಟಿದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಅದನ್ನು ಈಗ ಎರಡು ವರ್ಷಕ್ಕೆ ವಿಸ್ತರಿಸಿ ಅವಕಾಶ ಕಲ್ಪಿಸಲಾಗಿದೆ. 2016-17ರ ಬಾಂಡ್‌ ಬಂದಿದೆ. 2017 -18ರ ಬಾಂಡ್‌ ಬಂದಿಲ್ಲ ಎಂದು ಸಿಡಿಪಿಒ ಮಾಹಿತಿ ನೀಡಿದರು. 2008 -09ನೇ ಸಾಲಿನಲ್ಲಿ ತಾಲೂಕಿನ 49 ಭಾಗ್ಯಲಕ್ಷ್ಮೀ ಬಾಂಡ್‌ಗಳು ಬಾಕಿಯಾಗಿವೆ. ಈ ಕುರಿತು ಇಲಾಖೆಯ ಕಡೆಯಿಂದ ಸ್ಪಂದನೆ ಸಿಕ್ಕಿಲ್ಲ ಎಂದು ತಾ.ಪಂ. ಸಾಮಾಜಿಕ ಸ್ಥಾಯೀ ಸಮಿತಿ ಸದಸ್ಯ ಹರೀಶ್‌ ಬಿಜತ್ರೆ ಆರೋಪಿಸಿದರು. ಈ ಕುರಿತು ಇಲಾಖೆಯಿಂದ ಸರಕಾರಕ್ಕೆ ಬರೆಯಲಾಗಿದೆ. ಶೀಘ್ರ ಬೆಂಗಳೂರಿಗೆ ಹೋಗಿ ಪರಿಶೀಲನೆ ನಡೆಸಲಾಗುವುದು ಎಂದು ಸಿಡಿಪಿಒ ಭರವಸೆ ನೀಡಿದರು.

ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ಮಾಜಿ ಅಧ್ಯಕ್ಷೆ ಭವಾನಿ ಚಿದಾನಂದ, ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹರೀಶ್‌ ಬಿಜತ್ರೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಜೀರ್‌, ಪ್ರಭಾರ ಸಿಡಿಪಿಒ ಭಾರತಿ ಉಪಸ್ಥಿತರಿದ್ದರು.

ಶಾಲೆಗಳಲ್ಲಿ ಸಮಿತಿ ರಚಿಸಿ
ಶಾಲೆಗಳಲ್ಲಿ ಮಕ್ಕಳ ರಕ್ಷಣಾ ಸಮಿತಿಯನ್ನು ಕಡ್ಡಾಯವಾಗಿ ಮಾಡಬೇಕು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ದೂರು ಪೆಟ್ಟಿಗೆಯನ್ನು ಅಳವಡಿಸಬೇಕು. ಆದರೆ ಹೆಚ್ಚಿನ ಶಾಲೆಗಳಲ್ಲಿ ಈ ನಿಯಮಗಳು ಪಾಲನೆಯಾಗದೇ ಇರುವುದು ಗಮನಕ್ಕೆ ಬಂದಿದೆ. ಶಾಲೆಗಳ ಗೋಡೆಯಲ್ಲಿ ಚೈಲ್ಡ್ಲೈನ್‌ ಸಂಖ್ಯೆ ಕಾಣಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ವಜೀರ್‌ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next