ಉಡುಪಿ: ಬೈಂದೂರು ಮೂಲದ ಮಹಿಳೆ ಶ್ರೀಮತಿ ಶೆಟ್ಟಿ (65) ಅವರು ತಮ್ಮ ಮಗನ ಕಿರುಕುಳ ತಾಳಲಾರದೆ ಜೀವ ಭಯದಿಂದ ಮನೆ ಬಿಟ್ಟು ಬಂದಿದ್ದು, ಸಮಾಜ ಸೇವಕ ವಿಶು ಶೆಟ್ಟಿ ಅವರ ನೆರವಿನಿಂದ ಉಡುಪಿಯ ಸಖೀ ಒನ್‌ಸೆಂಟರ್‌ಗೆ ಶನಿವಾರ ದಾಖಲಾಗಿದ್ದಾರೆ.
Advertisement
ಮಹಿಳೆಯ ಪತಿ ತೀರಿಕೊಂಡಿದ್ದು, ಕುಟುಂಬದ ಜವಾಬ್ದಾರಿ ಹೊರ ಬೇಕಾದ ಮಗ ತಾಯಿಗೆ ನಿತ್ಯ ಹಲ್ಲೆ ಮಾಡುತ್ತಿದ್ದ. ಪೊಲೀಸರ ಮೊರೆ ಹೋದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಸಮಾಜಸೇವಕರು ಹಿರಿಯರ ಸಹಾಯವಾಣಿಗೆ ಮಾಹಿತಿ ನೀಡಿದ್ದು, ಅದರಂತೆ ಸಖಿ ಸೆಂಟರ್‌ಗೆ ದಾಖಲಿಸಲಾಗಿದೆ.