ಕುಷ್ಟಗಿ: ಕುಷ್ಟಗಿ ಪಟ್ಟಣದ ಹೊರವಲಯದ ಸಜ್ಜೆ ಗೂಡಿನಲ್ಲಿದ್ದ ರಸ್ಸೆಲ್ ವೈಪರ್ (Russell’s Viper) ಹಾವಿನ ಮರಿಗಳನ್ನು ಸ್ನೇಕ್ ಸ್ನೇಹಿ ಚಾಂದಪಾಷಾ ಹಾವಾಡಿಗ ಅವರು, ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಇಲ್ಲಿನ ಅಲೆಮಾರು ಬುಡಕಟ್ಟು ಸಮುದಾಯದವರು ವಾಸವಿರುವ ಸಂತ ಶಿಶುನಾಳ ಶರೀಫ ನಗರದಲ್ಲಿರುವ ಹಾವಾಡಿಗ ಚಾಂದಪಾಷಾ ಅವರಿಗೆ, ಸಜ್ಜೆ ಗೂಡಿನಲ್ಲಿ ಹಾವಿನ ಮರಿಗಳಿರುವ ಬಗ್ಗೆ ಮೋಬೈಲ್ ಕರೆ ಬಂದಿದೆ. ಕೂಡಲೇ ಗಜೇಂದ್ರಗಡ ರಸ್ತೆಯಲ್ಲಿರುವ ಈದ್ಗಾ ಮೈದಾನ ಬಳಿ ರೈತರ ಜಮೀನಿನಿಗೆ ಧಾವಿಸಿ ಸಜ್ಜೆ ಗೂಡು ತೆರವುಗೊಳಿಸಿದಾಗ ಎಂಟು ರಸ್ಸೆಲ್ ವೈಫರ್ (Russell’s Viper) ಹಾವಿನ ಮರಿಗಳು ಒಂದೆಡೆ ಇದ್ದವು.
ಅದೇ ವೇಳೆ ನಾಗರಹಾವು ಸಹ ಪತ್ತೆಯಾಗಿದೆ. ಕೂಡಲೇ ರಸ್ಸೆಲ್ ವೈಫರ್ ಎಂಟು ಹಾವಿನ ಮರಿ ಸಹಿತ ನಾಗರಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ತೀರ ವಿಷಕಾರಿ ಎನಿಸಿದ ರಸ್ಸೆಲ್ ವೈಫರ್ ಈ ಮರಿ ಹಾವುಗಳನ್ನು ತಮ್ಮ ಮಕ್ಕಳೊಂದಿಗೆ ದೂರದ ಪ್ರದೇಶಕ್ಕೆ ಕರೆದೊಯ್ದು ಬಿಟ್ಟಿದ್ದಾರೆ.
ಇದನ್ನೂ ಓದಿ;- ಟಯರ್ ಸ್ಫೋಟವಾಗಿ ಬಿದ್ದ ಲಾರಿಗೆ 1 ಕಾರು, 6 ಲಾರಿಗಳ ಢಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು
ಈ ಹಾವಿನ ಮರಿಗಳನ್ನು ಮಕ್ಕಳು ಅಂಜಿಕೆ ಅಳುಕಿಲ್ಲದೇ ಹಿಡಿದು ಕಾಡಿಗೆ ಬಿಟ್ಟಿರುವ ಬಗ್ಗೆ ಚಂದಪಾಷಾ ವಿಡಿಯೋ ಮಾಡಿರುವುದು ಗಮನಾರ್ಹ ಎನಿಸಿದೆ. ಈ ಕುರಿತು ಮಾತನಾಡಿದ ಹಾವಾಡಿಗ ಚಂದಪಾಷಾ ಅವರು, ಈ ಮರಿ ಹಾವುಗಳನ್ನು ಕುರುಡು ಪಂಜ್ರಾ ಎನ್ನುತ್ತಾರೆ ಇವು ಕೆಟ್ಟ ಹಾವಾಗಿದ್ದು, ಇದರ ದೊಡ್ಡ ಹಾವು ಸಿಗಲಿಲ್ಲ. ಈ ಮರಿ ಹಾವು ಹಾಗೂ ನಾಗರಹಾವನ್ನು ಕಾಡಿಗೆ ಬಿಟ್ಟಿದ್ದೇನೆ. ಹಾವಿನ ಮರಿಗಳನ್ನು ನಮ್ಮ ಮಕ್ಕಳು ಹಿಡಿದಿದ್ದಾರೆ ಮರಿ ಹಾವುಗಳು ಬಾಯಿ ತೆಗೆಯುವುದಿಲ್ಲ ಹೀಗಾಗಿ ಕಚ್ಚುವುದಿಲ್ಲ ಎಂದರು.
ವನ್ಯಜೀವಿ ಛಾಯಾಗ್ರಾಹಕರಾದ ಪಾಂಡುರಂಗ ಆಶ್ರೀತ ಉದಯವಾಣಿಯೊಂದಿಗೆ ಮಾತನಾಡಿ
ಅಪರೂಪವೆನಿಸಿರುವ ರಸ್ಸೆಲ್ ಹಾವುಗಳನ್ನು ಹಾವಾಡಿಗ ಚಾಂದಪಾಷಾ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿರುವುದಕ್ಕೆ ಮೊದಲು ಚಾಂದಪಾಷಾ ಅವರಿಗೆ ಧನ್ಯವಾದ ಸಲ್ಲಿಸುವೆ. ಯಾಕೆಂದರೆ ಈ ಹಾವು ತೀರ ವಿಷಕಾರಿಯಾಗಿದ್ದರೂ ಅಪರೂಪವಾಗಿವೆ ಎಂದರು.