Advertisement

ಆಹಾರ ಅರಸಿ ಬಂದು ಉರುಳಿಗೆ ಬಿದ್ದ ಚಿರತೆಯ ರಕ್ಷಣೆ

11:26 PM Jan 20, 2020 | Sriram |

ಪಳ್ಳಿ: ಪಳ್ಳಿ ಪೇಟೆಯ ಸಮೀಪ ಚಿರತೆಯೊಂದು ಉರುಳಿಗೆ ಬಿದ್ದ ಘಟನೆ ಜ.20ರಂದು ಸಂಭವಿಸಿದೆ.ಕಾರ್ಕಳ ಪಳ್ಳಿ ಮಾರ್ಗವಾಗಿ ಉಡುಪಿ ರಾಜ್ಯ ಹೆದ್ದಾರಿಯ ಪಳ್ಳಿ ಪೇಟೆ ಸಮೀಪ ಮುಖ್ಯ ರಸ್ತೆಯ ಬಳಿ ಯಾರೋ ಅಪರಿಚಿತರು ಇರಿಸಿದ್ದ ಉರುಳಿಗೆ ಚಿರತೆ ಬಿದ್ದಿದೆ.

Advertisement

ರಾತ್ರಿ ಆಹಾರಕ್ಕಾಗಿ ಸಂಚರಿಸುವ ಸಂದರ್ಭ ಉರುಳಿಗೆ ಚಿರತೆಯು ಬಿದ್ದಿದ್ದು ಬೆಳಗ್ಗೆ ಚಿರತೆಯ ನರಳಾಟನ್ನು ಕಂಡು ಸ್ಥಳೀಯರು ಸ್ಥಳಕ್ಕೆ ಧಾವಿಸಿದಾಗ ಘಟನೆ ಬೆಳಕಿಗೆ ಬಂದಿದೆ. ತತ್‌ಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಚಿರತೆಯ ರಕ್ಷಣಾ ಕಾರ್ಯದಲ್ಲಿ ಕಾರ್ಕಳ ವಲಯ ಅರಣ್ಯಾಧಿಕಾರಿ ದಿನೇಶ್‌ ಜಿ.ಡಿ., ಬೈಲೂರು ಉಪ ವಲಯ ಅರಣ್ಯಾಧಿಕಾರಿ ಹುಕ್ರಪ್ಪ ಗೌಡ, ಅರಣ್ಯ ರಕ್ಷಕರಾದ ಪ್ರತಾಪ್‌ ಬಿ., ಶ್ರೀಧರ್‌, ಸಂಜೀವ ಭಾಗಿಯಾಗಿದ್ದಾರೆ.

ಬಳಿಕ ಮಂಗಳೂರಿನಿಂದ ಅರಿವಳಿಕೆ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಅರಿವಳಿಕೆ ನೀಡಿ ಚಿರತೆಯನ್ನು ಉರುಳಿನಿಂದ ಬಿಡಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಪಿಲಿಕುಳ ಉದ್ಯಾನವನ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.

ಕಾರ್ಯಾಚರಣೆಗೆ ಪಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಸತ್ಯಾನಂದ ಶೆಟ್ಟಿ, ಗ್ರಾಮ ಪಂಚಾಯತ್‌ ಸದಸ್ಯ ಶ್ರೀಕಾಂತ್‌ ಪ್ರಭು, ಸಂದೀಪ್‌ ಅಮೀನ್‌ ಹಾಗೂ ಗ್ರಾಮಸ್ಥರು ಸಹಕರಿಸಿದರು.
2 ದಿನಗಳ ಹಿಂದೆ ಕಲ್ಯಾ ಪರಿಸರದಲ್ಲಿ ಚಿರತೆ ಹಾವಳಿ ಕುರಿತು ಉದಯವಾಣಿ ಸುದಿನವು ವರದಿ ಪ್ರಕಟಿಸಿತ್ತು. ಇದೀಗ ಪಳ್ಳಿ ಪರಿಸರದಲ್ಲಿ ಚಿರತೆ ಉರುಳಿಗೆ ಬಿದ್ದಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next