Advertisement

ಆರು ಮಂದಿ ಜೀತ ಕಾರ್ಮಿಕರ ರಕ್ಷಣೆ

06:15 PM Oct 05, 2019 | Suhan S |

ರಾಮನಗರ: ರೇಷ್ಮೆ ನೂಲು ಬಿಚ್ಚಾಣಿಕೆ ಘಟಕದಲ್ಲಿ ಆರು ಮಂದಿ ಜೀತ ಕಾರ್ಮಿಕರನ್ನು ತಹಶೀಲ್ದಾರ್‌, ಕಾರ್ಮಿಕ ಇಲಾಖೆ ಅಧಿಕಾರಿಗಳು, ಪೊಲೀಸ್‌ ಇಲಾಖೆ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ.

Advertisement

ಇಂಟರ್‌ ನ್ಯಾಷನಲ್‌ ಜಸ್ಟಿಸ್‌ ಮಿಷನ್‌ (ಐಜೆಎಂ) ಒದಗಿಸಿದ ಮಾಹಿತಿ ಆಧರಿಸಿ, ನಗರದ ರೇಷ್ಮೆ ನೂಲುಬಿಚ್ಚಾಣಿಕೆ ಘಟಕವೊಂದರ ಮೇಲೆ ದಾಳಿ ನಡೆಸಿ ಜೀತ ಕಾರ್ಮಿಕರನ್ನು ರಕ್ಷಿಸಲಾಗಿದೆ. ನಾಲ್ವರು ಪುರುಷರು ಹಾಗೂ ಇಬ್ಬರು ಗರ್ಭಿಣಿಯರು, ನಾಲ್ಕು ವರ್ಷದ ಮಗುವನ್ನು ಅಧಿಕಾರಿಗಳು ರಕ್ಷಿಸಿದ್ದಾರೆ. ಇವರೆ ಲ್ಲ 50 ಸಾವಿರ ದಿಂದ 1.80 ಲಕ್ಷ ರೂಪಾಯಿ ಮುಂಗಡ ಪಡೆದುಕೊಂಡಿದ್ದರು. ಈ ಕಾರ್ಮಿಕರ ಪೈಕಿ ಕೆಲವರು 8 ವರ್ಷಗಳಿಂದ ಹಾಗೂ ಕೆಲ ವರು 8 ತಿಂಗ ಳಿಂದ ರೇಷ್ಮೆ ಘಟಕದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾರ್ಮಿಕರಿಗೆ ಅರ್ಧ ದಿನ ಮಾತ್ರ ರಜೆ: ಬೆಳಗ್ಗೆ 7.30ರಿಂದ ಸಂಜೆ 4 ಗಂಟೆವ ರೆಗೆ ದುಡಿ ಸಿಕೊಳ್ಳುತ್ತಿದ್ದ ಮಾಲೀಕರು, ಎರಡು ವಾರಗಳಲ್ಲಿ ಒಂದು ಶುಕ್ರವಾರದಂದು ಮಾತ್ರ ಅರ್ಧ ದಿನ ರಜೆ ನೀಡುತ್ತಿದ್ದರು. ದಿನ ವೊಂದಕ್ಕೆ ಪುರುಷ ಕಾರ್ಮಿಕರಿಗೆ 250 ರೂ. ಹಾಗೂ ಮಹಿಳಾ ಕಾರ್ಮಿಕರಿಗೆ 220ರೂಪಾಯಿ ಕೂಲಿ ಕೊಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಕರ್ನಾಟಕ ರಾಜ್ಯ ಸರ್ಕಾರದ ಕನಿಷ್ಠ ವೇತನ ಕಾಯ್ದೆಯಡಿ ರೇಷ್ಮೆ ಕಾರ್ಮಿಕರಿಗೆ ದಿನವೊಂದರಲ್ಲಿ 8ಗಂಟೆಗಳ ಕಾಲನಿರ್ವಹಿಸುವ ಕೆಲಸಕ್ಕೆ ನಿಗದಿ ಪಡಿಸಿರುವ ವೇತನ 314.49 ರೂ, ಈ ಘಟಕದಲ್ಲಿ ಕೊಡುತ್ತಿದ್ದ ವೇತನ ಇದಕ್ಕಿಂತ ಕಡಿಮೆಯಾಗಿದೆ. ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನೆ) ಕಾಯ್ದೆ 1976ರ ಪ್ರಕಾರ, ಮಾಲೀಕರು ಕಾರ್ಮಿಕ ಅಥವಾ ಯಾವುದೇ ವ್ಯಕ್ತಿಗೆ ಸಾಲ ನೀಡಿ ಅಥವಾ ಮುಂಗಡ ಹಣದಂತಹ ಹಂಗು/ಋಣ ಹಿಂದಕ್ಕೆ ಪಡೆಯುವ ಸಲುವಾಗಿ ಕನಿಷ್ಠ ವೇತನಕ್ಕಿಂತ ಕಡಿಮೆ ಹಣ ನೀಡಿ ಅವರಿಂದ ಕೆಲಸ ಮಾಡಿಸಿಕೊಳ್ಳುವುದು ಕಾನೂನು ಬಾಹಿರ. ಸದರಿ ಘಟಕದ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ್ಮಿಕರಿಗೆ ವೈದ್ಯಕೀಯತಪಾಸಣೆ: ಸಂತ್ರಸ್ತ ಕಾರ್ಮಿಕರ ವೈದ್ಯಕೀಯ ತಪಾಸಣೆ ನಡೆಸಿದ ನಂತರ ರಾಮನಗರದ ಸಮಾಜ ಕಲ್ಯಾಣ ಇಲಾಖೆ ಮತ್ತು ಸರ್ಕಾರಿ ವಿದ್ಯಾರ್ಥಿ ನಿಲಯದಲ್ಲಿ ವಸತಿ ಕಲ್ಪಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ನಡೆಸಿದ ವಿಚಾರಣೆಯನ್ನು ಆಧರಿಸಿ ತಹಶೀಲ್ದಾರ್‌ ಅವರು ಸಲ್ಲಿಸುವ ವರದಿಯ ಪ್ರಕಾರ ಉಪವಿಭಾಗಾಧಿಕಾರಿಯವರು ಕಾರ್ಮಿಕರಿಗೆ ಬಿಡುಗಡೆ ಪ್ರಮಾಣ ಪತ್ರಗಳನ್ನು ವಿತರಿಸಿ, ಆರಂಭಿಕ ಪುನರ್ವಸತಿ ಕಲ್ಪಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next