Advertisement

ಪ್ರವಾಹದ ನೀರಿನಿಂದಾಗಿ ಮರವೇರಿ ಕುಳಿತಿದ್ದ ಶತಾಯುಷಿ ವೃದ್ಧೆ, ಮಗನ ರಕ್ಷಣೆ

02:50 PM Oct 16, 2020 | keerthan |

ವಿಜಯಪುರ: ಜಿಲ್ಲೆಯ ಗಡಿಯಲ್ಲಿ ಪ್ರವಾಹ ಸೃಷ್ಡಿಸಿರುವ ಭೀಮಾ ನದಿ ನೀರಿನಿಂದ ರಕ್ಷಿಸಿಕೊಳ್ಳಲು ಮರವೇರಿ ಕುಳಿತಿದ್ದ ಶತಾಯುಷಿ ವೃದ್ಧೆ ಹಾಗೂ ಆಕೆಯ ಮಗನನ್ನು ರಕ್ಷಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.

Advertisement

ಭೀಮಾ ನದಿ ತೀರದಲ್ಲಿರುವ ಇಂಡಿ ತಾಲೂಕಿನ ಹಿಂಗಣಿ ಗ್ರಾಮದ 110 ವರ್ಷದ ವೃದ್ಧೆ ನೀಲವ್ಬ ಹಾಗೂ ಆಕೆಯ ಮಗ 60 ವರ್ಷದ ಶಿವಮಲ್ಲಪ್ಪ ಅವರನ್ನು ರಕ್ಷಿಸಲಾಗಿದೆ.

ಪ್ರವಾಹದ ಕಾರಣ ನೀರಿನಿಂದ ರಕ್ಷಿಸಿಕೊಳ್ಳಲು ವೃದ್ಧ ತಾಯಿ-ಮಗ ಇಬ್ಬರೂ ಮರ ಏರಿ ಕುಳಿತಿದ್ದರು.

ಇದನ್ನೂ ಓದಿ:ಕೃಷ್ಣ ನದಿಗೆ ಮತ್ತಷ್ಟು ನೀರು: ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಭೀತಿ

ಮಹಾರಾಷ್ಟ್ರ ರಾಜ್ಯದ ಉಜನಿ ಹಾಗೂ ವೀರ ಜಲಾಶಯದಿಂದ ರಾತ್ರಿಯಿಂದ 3.50 ಲಕ್ಷ ಕ್ಯೂಸೆಕ್ ನೀರು ಭೀಮಾ ನದಿಗೆ ಹರಿದು ಬತುತ್ತಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮೆ ವಿಜಯಪುರ ಜಿಲ್ಲೆಯಲ್ಲಿ ಭೀಕರ ಪ್ರವಾಹ ಸೃಷ್ಟಿಸಿದೆ.

Advertisement

ಹೀಗಾಗಿ ಶುಕ್ರವಾರ ಬೆಳಿಗ್ಗೆ ರಕ್ಷಣಾ ಕಾರ್ಯಾಚರಣೆಗೆ ಮುಂದಾದ ರಕ್ಷಣಾ ತಂಡ‌ಕ್ಕೆ ಗ್ರಾಮಸ್ತರು ವೃದ್ದ-ತಾಯಿ ಮಗ ಪ್ರವಾಹದಿಂದ ರಕ್ಷಿಸಿಕೊಳ್ಳಲು ಮರ ಏರಿ ಕುಳಿತಿರುವ ಮಾಹಿತಿ ನೀಡಿ, ರಕ್ಷಣೆಗೆ ಸಹಕರಿಸದರು.

Advertisement

Udayavani is now on Telegram. Click here to join our channel and stay updated with the latest news.

Next