Advertisement

ಅರಣ್ಯ ರಕ್ಷಣೆ ಇಲಾಖೆ ಕರ್ತವ್ಯ: ದೇವರಾಜ್‌

04:02 PM Feb 15, 2021 | Team Udayavani |

ರಾಮನಗರ: ಅರಣ್ಯ ಬೆಳೆಸುವುದು, ಕಾಡು ಪ್ರಾಣಿ, ಅರಣ್ಯ ವನಗಳ ರಕ್ಷಣೆ ಮಾಡುವುದುಅರಣ್ಯ ಇಲಾಖೆ ಕರ್ತವ್ಯವಾಗಿದೆ ಎಂದು ರಾಮನಗರ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್‌ ತಿಳಿಸಿದರು.

Advertisement

ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಕಚೇರಿ ಯಲ್ಲಿ ರಾಮನಗರದಿಂದ ಕೋಲಾರ ವಿಭಾ ಗಕ್ಕೆ ವರ್ಗಾವಣೆಗೊಂಡ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ರಾಮಕೃಷ್ಣಪ್ಪ ಅವರಿಗೆ ವಲಯ ಅರಣ್ಯಾಧಿಕಾರಿಗಳು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಅರಣ್ಯ ರಕ್ಷಣೆ ಜೊತೆಗೆ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದುವುದು ಮುಖ್ಯ. ಇದುಸಾಧ್ಯವಾಗಬೇ ಕಾದರೆ ಪರಸ್ಪರ ಅಧಿಕಾರಿಗಳಲ್ಲಿ ಸಿಬ್ಬಂದಿಗಳಲ್ಲಿ ಸೌಹಾರ್ಧತೆ ಇದ್ದಾಗ ಮಾತ್ರ ಸಾಧ್ಯ.ಈ ವಿಚಾರದಲ್ಲಿ ಎಂ.ರಾಮಕೃಷ್ಣಪ್ಪ ಜಿಲ್ಲೆಯಲ್ಲಿ ಕರ್ತವ್ಯ ವಹಿಸಿ ಕೊಂಡಾಗಿನಿಂದಲೂ ರೈತರು,ಸಾರ್ವಜನಿಕರು, ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರ ಸೇವೆಗೆ ಶ್ರೇಯಸ್ಸು ಸಿಗಲಿ ಎಂದು ಶುಭ ಹಾರೈಸಿದರು.

ಚನ್ನಪಟ್ಟಣ ವಲಯ ಅರಣ್ಯಾಧಿಕಾರಿ ಮಹಮ್ಮದ್‌ ಮನ್ಸೂರ್‌ ಮಾತನಾಡಿ, ಎಂ.ರಾಮಕೃಷ್ಣಪ್ಪ ಅವರು ಜಿಲ್ಲೆಯ ರಾಮನಗರ-ಚನ್ನಪಟ್ಟಣ-ಮಾಗಡಿ ವಲಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಉತ್ತಮ ಸೇವೆ ನೀಡಿದ್ದಾರೆ. ಕಿರಿಯ ಅಧಿಕಾರಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಅರಣ್ಯ ಸಂರಕ್ಷಣೆ ಧ್ಯೇಯದಿಂದ ಅನೇಕ ನೆಡುತೋಪು ಬೆಳವಣಿಗೆಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ರೈತರೊಂದಿಗೆ ಉತ್ತಮ ಸ್ಪಂದನೆ, ಬಾಂಧವ್ಯ ಹೊಂದಿದ್ದರಿಂದ ಅರಣ್ಯ ಇಲಾಖೆಗೆ ಸಾರ್ವಜನಿಕರಿಂದ ಉತ್ತಮ ಸಹಕಾರ ಸಿಗುತ್ತಿದೆ ಎಂದು ತಿಳಿಸಿದರು.

ಕ್ಲಿಷ್ಟಕರ ಸನ್ನಿವೇಶ ನಿಭಾಯಿಸಿದ ಕೀರ್ತಿ: ಜಿಲ್ಲೆಯ ಮೂರು ವಲಯದಲ್ಲಿ ಚಿರತೆ, ಆನೆಗಳ ಉಪಟಳ ಹೆಚ್ಚಿಗಿದೆ. ಮಾಗಡಿ ವಲಯದಲ್ಲಿ ಚಿರತೆ ದಾಳಯಿಂದ ಕಳೆದ ವರ್ಷ ಇಬ್ಬರು ಪ್ರಾಣ ಕಳೆದು ಕೊಳ್ಳು ವಂತಾಗಿತ್ತು. ಇಡೀ ರಾಜ್ಯ ದಲ್ಲಿ ಈ ಘಟ ನೆ ಗಳು ಚರ್ಚೆಯಾಯಿತು. ಅಂತಹ ಕ್ಲಿಷ್ಟಕರ ಸನ್ನಿವೇಶವನ್ನು ಎಂ.ರಾ ಮ ಕೃ ಷ್ಣಪ್ಪ ಅವರು ಜಾಗರೂಕತೆಯಿಂದನಿರ್ವಹಿಸಿ, ವಲಯ ಅರಣ್ಯಾಧಿಕಾರಿಗಳಿಗೆ ಮಾರ್ಗದರ್ಶಕರಾಗಿ ಮೂರ್‍ನಾಲ್ಕು ದಿನಗಳಲ್ಲಿಯೇ ಚಿರತೆ ಸೆರೆ ಹಿಡಿಯು ವಲ್ಲಿ ಯಶಸ್ವಿಯಾದರು ಎಂದರು.

Advertisement

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ. ರಾಮಕೃಷ್ಣಪ್ಪ, ರಾಮನಗರ ಜಿಲ್ಲಾ ಅರಣ್ಯ ಭಾಗದಲ್ಲಿನ ಮೂರುವರೆ ವರ್ಷದ ಕರ್ತವ್ಯ ತೃಪ್ತಿತಂದಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ, ಮೂರು ವಲಯದ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ತಮಗೆ ಅಪಾರ ಸಹಕಾರ ನೀಡಿದ್ದಾರೆ. ಎಲ್ಲರನ್ನು ವಿಶ್ವಾ ಸಕ್ಕೆ ತೆಗೆದುಕೊಂಡು ಕರ್ತವ್ಯ ನಿಭಾಯಿಸಿದ್ದೇನೆ. ತಮ್ಮ ಸ್ಥಾನಕ್ಕೆ ಆಗಮಿಸಿರುವ ಸುರೇಂದ್ರ ಅವರಿಗೂ ತಮಗೆ ನೀಡುತ್ತಿದ್ದ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ರಾಮನಗರ ವಲಯ ಅರಣ್ಯಾಧಿಕಾರಿ ಎ.ಕಿರಣ್‌ಕುಮಾರ್‌, ಕನಕಪುರ ವಲಯ ಅರಣ್ಯಾಧಿಕಾರಿ ಎ.ಎಲ್‌.ಧಾಳೇಶ್‌, ಮಾಗಡಿ ವಲಯ ಅರಣ್ಯಾಧಿಕಾರಿ ಪುಷ್ಪಲತ, ಮೂರು ವಲಯಗಳ ಉಪ ವಲಯ ಅರಣ್ಯಾಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next