Advertisement
ಶನಿವಾರ ಮಳೆ ಹಾನಿ ವೀಕ್ಷಿಸಲೆಂದು ಧಾವಿಸಿ ಹೋಗುತ್ತಿದ್ದ ಸ್ಥಳೀಯ ನಿವಾಸಿ ಮಹಮ್ಮದ್ ಇಕ್ಬಾಲ್ (52) ಈ ಹಿಂದೆ ಬಾವಿ ಇದ್ದಲ್ಲಿ ಕಾಲಿರಿಸಿದಾಗ ಮಣ್ಣುಕುಸಿದು ಮಣ್ಣಿನಡಿ ಸಿಲುಕಿ ದ್ದರು. ಅವರ ಚೀರಾಟವನ್ನು ಆಲಿಸಿದ ಸ್ಥಳೀಯರಾದ ರಾಮಚಂದ್ರ ಗೌಡ ಮುರಿಯಾಳ ಧಾವಿಸಿ ಬಂದು ಇಕ್ಬಾಲ್ ಅವರನ್ನು ರಕ್ಷಿಸಿದರು.
ಉಪ್ಪಿನಂಗಡಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ನೆರೆ ವ್ಯಾಪಿಸಿ ಜನತೆ ಕಂಗೆಟ್ಟಾಗ ಜಿಲ್ಲಾಡಳಿತದ ವ್ಯವಸ್ಥೆಗಿಂತಲೂ ಸ್ವಯಂ ಸೇವಕರ ಕಾರ್ಯಶೈಲಿ ಶ್ಲಾಘನೀಯವಾಗಿ ವ್ಯಕ್ತವಾಯಿತು. ನ್ಯಾಯವಾದಿ ಮಹೇಶ್ ಕಜೆ, ಅಟೋ ಚಾಲಕ ಫಾರೂಕ್ ಜಿಂದಗಿ, ಇಸ್ಮಾಯಿಲ್ ತಂšಳ್, ಶಬೀರ್ ಕೆಂಪಿ, ತೌಶಿಫ್ ಯು.ಟಿ., ಝಕಾರಿಯಾ ಕೊಡಿಪ್ಪಾಡಿ ಮೊದಲಾದವರ ನೇತೃತ್ವದಲ್ಲಿ ನೆರೆಪೀಡಿತರ ರಕ್ಷಣೆ, ಬೆಲೆಬಾಳು ವಸ್ತುಗಳ ಸ್ಥಳಾಂತರ ನಡೆಯಿತು. ಇನ್ನೂ ಹಲವು ಸ್ವಯಂ ಸೇವಕರು ರಾತ್ರಿಯಿಡೀ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ರಕ್ಷಣಾ ತಂಡದ ಜತೆ ಯಾವುದೇ ಕಂದಾಯ ಇಲಾಖಾ ಧಿಕಾರಿಗಳ ಅನುಪಸ್ಥಿತಿ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
Related Articles
ಪುಳಿತ್ತಡಿ ಪರಿಹಾರ ಕೇಂದ್ರದಲ್ಲಿ 60 ಜನ, ಉಪ್ಪಿನಂಗಡಿ ಪ.ಪೂ. ಕಾಲೇಜಿನಲ್ಲಿ 35 ಜನ ಆಶ್ರಯ ಪಡೆದಿದ್ದಾರೆ. ಗುಡ್ಡ ಜರಿತದ ಭಯದಿಂದ ಪೆರಿಯಡ್ಕದಲ್ಲಿ ಖಾಲಿದ್ ಮತ್ತು ಖಾಸಿಂ ಅವರ ಕುಟುಂಬಗಳನ್ನು ಸ್ಥಳಾಂತರಿಸಲಾಯಿತು. ಶುಕ್ರವಾರ ಹೆದ್ದಾರಿಯನ್ನು ಆವರಿಸಿದ್ದ ನೇತ್ರಾವತಿ ನೀರು ಶನಿವಾರ ಇಳಿದಿದ್ದು, ವಾಹನ ಸಂಚಾರಕ್ಕೆ ಯಾವುದೇ ತಡೆಯುಂಟಾಗಿಲ್ಲ.
Advertisement