ತೋಟದಲ್ಲಿ ಮುಧೋಳದ ನಗರಸಭೆ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಸದಾನಂದ ಬಾಗೋಡಿ ಹಾಗೂ ಇತರ 14 ಜನರು ಘಟಪ್ರಭಾ ನದಿ ಪ್ರವಾಹದಲ್ಲಿ ಸಿಲುಕಿದ್ದರು.
Advertisement
ಎನ್‌ಡಿಆರ್‌ಎಫ್ ತಂಡದವರು ಬೋಟ್ ಮೂಲಕ ತೆರಳಿ, ಅವರನ್ನು ರಕ್ಷಿಸಿದರು.ಈ ಮಧ್ಯೆ, ಘಟಪ್ರಭಾ ನದಿಯ ನೀರಿನ ಹರಿವು ಹೆಚ್ಚುತ್ತಲೇ ಇದ್ದು, ನಗರದ ಕಾಂಬಳೆ ಗಲ್ಲಿ, ಬಳಗಾರ ಅಗಸಿ, ಕುಂಬಾರ ಗಲ್ಲಿ, ಯಲ್ಲಮ್ಮನ ಗುಡಿ, ವೆಂಕಟ ರಮಣ ಗುಡಿ,ಸಾಯಿನಿಕೇತನ ಶಾಲೆ ಸೇರಿ ಮುಧೋಳ ನಗರದ ಅರ್ಧ ಭಾಗಕ್ಕೆ ನೀರು ಹೊಕ್ಕಿದೆ.
ಪ್ರವಾಹದಿಂದ ಆರು ತಾಲೂಕಿನ 53 ಗ್ರಾಮಗಳು ಬಾಧಿತಗೊಂಡಿವೆ. ಕಳೆದ ಆರು
ದಿನಗಳಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಈವರೆಗೆ 18,849 ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿ, ಪರಿಹಾರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. 9,430 ಜಾನುವಾರುಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ಈವರೆಗೆ 13
ಜಾನುವಾರುಗಳು ನದಿಯಲ್ಲಿ ಕೊಚ್ಚಿ ಹೋಗಿವೆ. ಜಿಲ್ಲೆಯಲ್ಲಿ ಗುರುವಾರ 340
ಜನರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. 12 ಸೇತುವೆ, 1
ರಾಷ್ಟ್ರೀಯ, 3 ರಾಜ್ಯ ಹೆದ್ದಾರಿಗಳು ಜಲಾವೃತವಾಗಿವೆ.