Advertisement

ನೀರಿನ ಮೂಲ ಸಂರಕ್ಷಿಸಿ

09:31 PM Jul 14, 2019 | Team Udayavani |

ಚಿಂತಾಮಣಿ: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೋಟ್ಯಂತರ ರೂ. ಅನುದಾನ ಕೇಂದ್ರ ಸರ್ಕಾರ ನೀಡುತ್ತಿದ್ದು, ಬಯಲುಸೀಮೆಯಲ್ಲಿ ನೀರಿಗೆ ಹಾಹಾಕಾರವಿರುವುದರಿಂದ ಉದ್ಯೋಗ ಖಾತ್ರಿ ಯೋಜನೆಯಡಿ ನೀರಿನ ಮೂಲಗಳನ್ನು ಸಂರಕ್ಷಣೆ ಮಾಡಿ ಅಂತರ್ಜಲ ಮಟ್ಟವನ್ನು ವೃದ್ಧಿಗೊಳಿಸಿ ಎಂದು ಕೇಂದ್ರ ಸರ್ಕಾರದ ಪರಿವೀಕ್ಷಣಾ ತಂಡದ ಅಧಿಕಾರಿಗಳು ತಿಳಿಸಿದರು.

Advertisement

ತಾಲೂಕಿನಲ್ಲಿ ನರೇಗಾ ಯೋಜನೆ ಕೈಗೊಂಡಿರುವ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದ ಅವರು, ಬಯಲು ಸೀಮೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಯತ್ತೇತ್ಛವಾಗಿರುವುದರಿಂದ ನೀರಿನ ಸಮಸ್ಯೆಯನ್ನು ನೀಗಿಸುವ ಸಲುವಾಗಿ ಯಾವ ಯೋಜನೆಗಳನ್ನು ಕೈಗೊಳ್ಳಬೇಕು ಎಂಬ ಉದ್ದೇಶದಿಂದ ಪರಿಶೀಲನೆಗೆ ಆಗಮಿಸಿದ್ದು, ಜಿಲ್ಲೆಯಲ್ಲಿ ಚೆಕ್‌ ಡ್ಯಾಂ, ಕಲ್ಯಾಣಿಗಳ ಪುನಶ್ಚೇತನ ಕಾಮಗಾರಿ, ಗೋಕುಂಟೆಗಳ ನಿರ್ಮಾಣ ಸೇರಿದಂತೆ ನೀರಿನ ಮೂಲಗಳನ್ನು ರೂಪಿಸುವ ಕಾಮಗಾರಿಗಳಿಗೆ ಒತ್ತು ನೀಡಬೇಕಾಗಿದೆ ಎಂದು ತಿಳಿಸಿದರು.

ನರೇಗಾ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಲಾಗಿರುವ ಕಾಮಗಾರಿಗಳು ಉತ್ತಮವಾಗಿದ್ದು, ಮಳೆ ನೀರು ಸಂಗ್ರಹಿಸಿ ಅಂತರ್ಜಲ ಮಟ್ಟವನ್ನು ವೃದ್ಧಿಸುತ್ತವೆ. ಮುಂದಿನ ದಿನಗಳಲ್ಲಿ ನೀರು ಶೇಖರಣೆಯಾಗಿ ದನಕರುಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗುವ ರೀತಿಯ ಕಾಮಗಾರಿಗಳನ್ನು ಮಾಡಬೇಕೆಂಬ ಉದ್ದೇಶದಿಂದ ವೀಕ್ಷಣೆ ಮಾಡಲಾಗಿದೆ ಎಂದರು.

ಎಲ್ಲೆಲ್ಲಿ ವೀಕ್ಷಣೆ: ಕೇಂದ್ರ ಸರ್ಕಾರದ ಪರಿವೀಕ್ಷಣಾ ತಂಡದ ಸದಸ್ಯರಾದ ಶಶಿ ರಾಜನ್‌ ಕುಮಾರ್‌, ವಿಜ್ಞಾನಿ ಯು.ಆರ್‌ ರಾಖೀ, ಚಿಂತಾಮಣಿ ತಾಪಂ ಇಒ ಮಂಜುನಾಥ್‌, ಶಿಡ್ಲಘಟ್ಟ ತಾಪಂ ಇಒ ಶಿವಕುಮಾರ್‌, ಮುಳಬಾಗಿಲು ತಾಪಂ ಇಒ ವೆಂಕಟಾಚಲಪತಿ, ಪಿಡಿಒಗಳಾದ ಕವಿತಾ, ಶೈಲಜಾ, ಮಂಜುನಾಥ, ಕೃಷಿ ಇಲಾಖೆಯ ಎ.ಒ ಪ್ರಸಾದ್‌, ಕಾಗತಿ ಕೃಷಿ ತರಬೇತಿ ಕೇಂದ್ರದ ಕೆ.ಸಿ.ಮಂಜುನಾಥ್‌, ಪಾಪಿರೆಡ್ಡಿ, ತೋಟಗಾರಿಕೆಯ ಗಂಗುಲಪ್ಪ, ತಾಪಂ ನರೇಗಾ ಸಿಬ್ಬಂದಿ, ಅರುಣ್‌, ನಾಗೇಂದ್ರ, ನಳಿನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next